ಸದಾ ನಮ್ಮ ಪ್ರೇಮ ಬಾನೆತ್ತರಕ್ಕೇರುತ್ತಿರಲಿ ; ವಿಮಾನದಲ್ಲಿ ಪ್ರೇಮ ನಿವೇದನೆ
Love Proposal in Flight : ತನ್ನ ಪ್ರೇಮವನ್ನು ಎಲ್ಲಿ, ಹೇಗೆ ನಿವೇದಿಸಿಕೊಂಡರೆ ವಿಶೇಷವೆನ್ನಿಸಬಹುದು? ಪ್ರತಿಯೊಬ್ಬ ಪ್ರೇಮಿಯೂ ಯೋಚಿಸುತ್ತಿರುತ್ತಾರೆ. ಈಗಿಲ್ಲಿ ಇವ ವಿಮಾನದಲ್ಲಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.
Viral : ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಗೆಳೆಯ ಅಥವಾ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಬಗೆಯ ಬಗ್ಗೆ ಬಹಳ ಯೋಚಿಸುತ್ತಿರುತ್ತಾರೆ. ಹೃದಯಕ್ಕೆ ಸಂಬಂಧಿಸಿದ್ದು ಯಾವತ್ತೂ ವಿಭಿನ್ನವಾಗಿರಬೇಕು, ವಿಶಿಷ್ಟವಾಗಿರಬೇಕು ಎಂಬ ಆಲೋಚನೆ ಅವರ ಮನಸಿನಲ್ಲಿ ಸದಾ ಸುಳಿದಾಡುತ್ತಿರುತ್ತದೆ. ವಿಶಾಲ ಸಾಗರದ ಮಧ್ಯೆ ಮನಸು ಬಿಚ್ಚಿದರೆ ಹೇಗೆ? ಶಾಂತವಾಗಿ ಹರಿಯುವ ನದೀ ತಟದಲ್ಲಿ? ಕಾಡಿನ ಹಸಿರಿನ ಮಧ್ಯೆ? ರೆಸ್ಟೋರೆಂಟಿನ ಮಂದ ಬೆಳಕು, ಮೆಲುವಾದ ಸಂಗೀತದ ಮಧ್ಯೆ? ಇಲ್ಲವಾದರೆ, ಭೂಮಿಯಿಂದ ಮೇಲೆ ಸಾವಿರಾರು ಮೈಲಿ ದೂರದಲ್ಲಿ ಹಾರಾಡುವ ವಿಮಾನದಲ್ಲಿ? ಹಾಂ! ಈ ವಿಮಾನದಲ್ಲಿಯೇ ಇದೀಗ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿ ಅಚ್ಚರಿ ಮತ್ತು ಅಪೂರ್ವ ಕ್ಷಣಗಳಿಂದ ಆಕೆಯ ಹೃದಯವನ್ನು ಆರ್ದ್ರಗೊಳಿಸಿದ್ದಾನೆ.
ಅಮೆರಿಕದ ಯುನೈಟೆಡ್ ಏರ್ಲೈನ್ಸ್ನಲ್ಲಿ ಈ ಮಧುರ ಗಳಿಗೆಗಳು ಅರಳಿವೆ. ಬ್ರಿಯಾನ್ ಮತ್ತು ಸ್ಟಿಫಾನೀಗೆ ಏರ್ಲೈನ್ಸ್ನ ಸಿಬ್ಬಂದಿ ಹಾರೈಸಿ ಸಂಭ್ರಮಿಸಿದೆ. ಈ ಪೋಸ್ಟ್ ಅನ್ನು ಅಕ್ಟೋಬರ್ 17ರಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 5,300 ಜನರು ಈ ಪೋಸ್ಟ್ ಅನ್ನುಇಷ್ಟಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನ ಮರುಹಂಚಿಕೊಂಡಿದ್ದಾರೆ. 280ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.
‘ಎಂಥ ಸುಂದರವಾಗಿದೆ ಈ ದೃಶ್ಯ, ವಿಮಾನ ಸಿಬ್ಬಂದಿ ಎಷ್ಟು ಚೆಂದ ಸಹಕರಿಸಿದೆ’ ಎಂದಿದ್ದಾರೆ ಒಬ್ಬರು. ‘ಅವರಿಬ್ಬರ ಒಂದುಗೂಡುವಿಕೆಗೆ ಸಾಕ್ಷಿಯಾದ ನಿಮಗೆ ಧನ್ಯವಾದ’ ಎಂದಿದ್ದಾರೆ ಇನ್ನೂ ಒಬ್ಬರು. ‘ಅವರ ಪ್ರೀತಿಯನ್ನೂ ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೀರಿ’ ಎಂದಿದ್ದಾರೆ ಮಗದೊಬ್ಬರು.
ಪ್ರೀತಿ ಎಷ್ಟು ಎತ್ತರಕ್ಕೇರುತ್ತದೆಯೋ ಅಷ್ಟೇ ಆಳಕ್ಕೂ ಇಳಿಯಬಲ್ಲುದು. ಅಂದಾಗಲೇ ಅದು ಬಂಧ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:29 pm, Fri, 21 October 22