AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಅಮ್ಮನೇ ಅಪ್ಪನಿಗೆ ಕಿಡ್ನಿ ದಾನ ಮಾಡಿದರು, ಇದೊಂದು ಸುಂದರ ಪ್ರೇಮಕಥೆಯಂತೆ ಭಾಸವಾಗುತ್ತಿದೆ’

Wife donated kidney to husband : ‘ನನ್ನ ಅಪ್ಪ 98 ಸಲ ಡಯಾಲಿಸಿಸ್​ಗೆ ಒಳಗಾದರು. ಪ್ರತೀ ಸಲ ಅಮ್ಮ ಅವರೊಂದಿಗೆ ಸುಮಾರು 5 ತಾಸುಗಳ ತನಕ ಇರಬೇಕಾಗುತ್ತಿತ್ತು. ಅವರನ್ನು ಉಳಿಸಿಕೊಳ್ಳಲೇಬೇಕೆಂದು ಅಮ್ಮ ಈ ನಿರ್ಧಾರಕ್ಕೆ ಬಂದರು.

‘ನನ್ನ ಅಮ್ಮನೇ ಅಪ್ಪನಿಗೆ ಕಿಡ್ನಿ ದಾನ ಮಾಡಿದರು, ಇದೊಂದು ಸುಂದರ ಪ್ರೇಮಕಥೆಯಂತೆ ಭಾಸವಾಗುತ್ತಿದೆ’
ಲಿಯೋ ಅವರ ಅಮ್ಮ, ಅಪ್ಪ
TV9 Web
| Edited By: |

Updated on:Oct 21, 2022 | 10:31 AM

Share

Trending : ರಕ್ತದಾನಂದಂತೆ ಅಂಗದಾನವೂ ಶ್ರೇಷ್ಠ. ಏಕೆಂದರೆ ಇದು ಇನ್ನೊಬ್ಬರ ಜೀವವನ್ನು ಉಳಿಸುತ್ತದೆ. ಅಪರಿಚಿತರಿಗೆ ಅಂಗದಾನ ಮಾಡುವುದು ಒಂದು ರೀತಿಯಾದರೆ ನಿಮ್ಮೊಂದಿಗಿರುವವರಿಗೆ ಅಂಗದಾನ ಮಾಡುವುದು ಇನ್ನೊಂದು ರೀತಿಯದು. ಈಗಿಲ್ಲಿ ವೈರಲ್ ಆಗಿರುವ ಈ ಟ್ವಿಟರ್​ ಪೋಸ್ಟ್ ನೋಡಿ. ಸಾಕಷ್ಟು ಸಲ ಡಯಾಲಿಸಿಸ್​ಗೆ ಒಳಗಾದ ನಂತರ ತನ್ನ ಗಂಡನ ಜೀವ ಉಳಿಸಲು ಹೆಂಡತಿಯೇ ತನ್ನ ಕಿಡ್ನಿ ದಾನ ಮಾಡಿದ ಕಥೆಯನ್ನು ಇದು ಹೇಳುತ್ತದೆ. ‘ನನ್ನ ತಂದೆಯನ್ನು ಉಳಿಸಲು ನನ್ನ ತಾಯಿ ದೊಡ್ಡ ಸಹಾಯ ಮಾಡಿದರು.  ಇವರಿಬ್ಬರ ಮಧ್ಯೆ ಇರುವ ಪ್ರೀತಿ ಮತ್ತು ಅನುಬಂಧ ಬಹಳ ದೊಡ್ಡದು’ ಎಂದು ಅವರ ಮಗ ಟ್ವಿಟರ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾನೆ. ನೆಟ್ಟಿಗರು ಈ ಹೃದಯಸ್ಪರ್ಶಿಯಾದ ಕಥೆಯನ್ನು ಓದಿ ಟ್ವೀಟಿಸುತ್ತಿದ್ದಾರೆ.

ನನ್ನ ಅಪ್ಪ ಡಯಾಲಿಸಿಸ್​ಗೆ ಒಳಗಾಗುವಾಗೆಲ್ಲ ನನ್ನ ಅಮ್ಮ ಅವರಿಗಾಗಿ ಸುಮಾರು 5 ತಾಸಿನತನಕ ಕಾಯ್ದುಕೊಂಡೇ ಇರುತ್ತಿದ್ದರು. ವಾರದಲ್ಲಿ 3 ದಿನ ಅವರಿಗೆ ಡಯಾಲಿಸಿಸ್ ಮಾಡುತ್ತಿದ್ದರು. ಈತನಕ ನನ್ನ ಅಪ್ಪ 98 ಸಲ ಡಯಾಲಿಸಿಸ್​ ಸೆಷನ್​ ಮಾಡಿಸಿಕೊಂಡಿದ್ದಾರೆ. ಕೊನೆಗೆ ಅವರನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿದ ಅಮ್ಮ ತನ್ನ ಒಂದು ಕಿಡ್ನಿಯನ್ನು ಅಪ್ಪನಿಗೆ ದಾನ ಮಾಡಿದರು. ಈಗ ಇಬ್ಬರೂ ಆರಾಮಾಗಿ ಸಂತೋಷದಿಂದ ಇದ್ದಾರೆ. ನನಗಿದೊಂದು ಸುಂದರವಾದ ಪ್ರೇಮಕಥೆಯಂತೆ ಕಾಣುತ್ತಿದೆ ಎಂದಿದ್ದಾರೆ ಅವರ ಮಗ ಲಿಯೋ.

ಈತನ ಈ ಪೋಸ್ಟ್​ 1,200 ಜನರ ಮೆಚ್ಚುಗೆಗೆ ಒಳಗಾಗಿದೆ. 95 ಜನರು ರೀಟ್ವೀಟ್​ ಮಾಡಿದ್ದಾರೆ. ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ‘ನಿಜಕ್ಕೂ ಇದನ್ನು ಓದಿ ನನಗೆ ಬಹಳ ಖುಷಿಯಾಗುತ್ತಿದೆ. ನನ್ನ ತಂದೆ ನನ್ನ ತಾಯಿಗೆ ಕಿಡ್ನಿ ದಾನ ಮಾಡಿದ್ದಾರೆ’ ಎಂದು ತಮ್ಮ ಅಪ್ಪ-ಅಮ್ಮನ ಕಥೆಯನ್ನು ಹೇಳಿಕೊಂಡಿದ್ದಾರೆ ಒಬ್ಬರು. ‘ನಿಮ್ಮ ಅಪ್ಪ ಅಮ್ಮನಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ ಇನ್ನೂ ಒಬ್ಬರು. ‘ಎಂಥ ಅದ್ಭುತ! ನಿಮ್ಮ ಅಪ್ಪಅಮ್ಮ ಸುಖದಿಂದ ಬಾಳಲಿ. ಅವರ ಬಗ್ಗೆ ನೀವು ಇಲ್ಲಿ ಹಂಚಿಕೊಂಡಿರುವುದು ಒಳ್ಳೆಯದಾಯಿತು’ ಎಂದಿದ್ದಾರೆ ಮಗದೊಬ್ಬರು. ‘ನಿಮ್ಮ ತಂದೆ-ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ತಿಳಿದು ಅತ್ಯಂತ ಸಂತಸವಾಯಿತು’ ಎಂದಿದ್ದಾರೆ ಮತ್ತೊಬ್ಬರು.

ಇನ್ನು ಮುಗಿದೇ ಹೋಯಿತು ಎನ್ನುವ ಸಂದರ್ಭಕ್ಕೆ ತಿರುವು ಸಿಗುವುದು ನಮ್ಮ ಗಟ್ಟಿ ಮನಸ್ಸು, ಪ್ರೀತಿ ಮತ್ತು ಪ್ರಯತ್ನದಿಂದ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:26 am, Fri, 21 October 22

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ