ಹೇಗಿದೆ ಈ ಮುಟ್ಟುವ ಆಟ? ಮಗುವಿನೊಂದಿಗೆ ಆಟಕ್ಕೆಬಿದ್ದ ಈ ಸಿಂಹಿಣಿ

Lioness Playing with Kid : ಮಗುವಿಗೂ ಮುಟ್ಟಬೇಕು ಎನ್ನಿಸುತ್ತಿದೆ, ಅತ್ತ ಸಿಂಹಿಣಿಗೂ. ಪರಸ್ಪರ ಮುಟ್ಟಲು ನೋಡುತ್ತ ಅದೊಂದು ಬಗೆಯ ಆಟವಾಗಿ ಮಾರ್ಪಟ್ಟಿದೆ. ತಾನೊಂದು ವನ್ಯಮೃಗ ಎನ್ನುವುದನ್ನೇ ಈ ಸಿಂಹಿಣಿ ಮರೆತಂತಿದೆ.

ಹೇಗಿದೆ ಈ ಮುಟ್ಟುವ ಆಟ? ಮಗುವಿನೊಂದಿಗೆ ಆಟಕ್ಕೆಬಿದ್ದ ಈ ಸಿಂಹಿಣಿ
Little Girl Plays With Lioness Through Glass Window Viral Video
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 20, 2022 | 5:50 PM

Viral Video : ಈ ಮಗುವಿಗೆ ಸಿಂಹಿಣಿಯೊಂದಿಗೆ ಆಟವಾಡಬೇಕು ಎನ್ನಿಸಿದೆ. ಓಡೋಡಿ ಹೋಗಿ ಅದನ್ನು ಮುಟ್ಟಲು ನೋಡಿದೆ. ಅತ್ತ ಕಡೆಯಿಂದ ಆ ಸಿಂಹಿಣಿಗೂ ಮಗುವನ್ನು ನೋಡಿ ಆಟವಾಡಬೇಕೆನ್ನಿಸಿ ಮುಟ್ಟಲು ನೋಡಿದೆ. ಸತತವಾಗಿ ಇಬ್ಬರೂ ಪರಸ್ಪರ ಮುಟ್ಟಲು ನೋಡುತ್ತಿದ್ದಾರೆ. ಇಬ್ಬರೂ ಸಿಕ್ಕಾಪಟ್ಟೆ ಆಟದ ಮೂಡ್​​ನಲ್ಲಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಬ್ಬಾ! ಸದ್ಯ ಇವರಿಬ್ಬರ ಮಧ್ಯೆ ಗಾಜು ಇದೆಯಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ನೆಟ್ಟಿಗರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಸುಮಾರು 19.2 ಮಿಲಿಯನ್ ಜನರು ನೋಡಿದ್ದಾರೆ. 1.4 ಮಿಲಿಯನ್ ಜನರು ಇಷ್ಟಪಟ್ಟಿದ್ದಾರೆ. ಅಬ್ಬಾ ಎಂಥಾ ಧೈರ್ಯ ಈ ಪುಟ್ಟಮಗುವಿಗೆ ಎಂದು ನೆಟ್ಟಿಗರು ಅಚ್ಚರಿಪಡುತ್ತಿದ್ದಾರೆ. ಆದರೆ ಮಕ್ಕಳಲ್ಲಿ ನಾವು ತುಂಬಿದರೆ ಮಾತ್ರ ಭಯ! ಇಲ್ಲವಾದಲ್ಲಿ ಇಲ್ಲ. ಎಲ್ಲ ಭಾವಗಳನ್ನು ನಾವು ನಮ್ಮ ಹಾವಭಾವ, ನೋಟ, ಮಾತು, ಸನ್ನೆಯಿಂದಲೇ ಮಕ್ಕಳಿಗೆ ತುಂಬುತ್ತೇವೆ. ಅಲ್ಲೀತನಕ ಅವು ತಮ್ಮ ಪಾಡಿಗೆ ದೇವರಂತಿರುತ್ತವೆ.

ಆದರೂ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ದಯವಿಟ್ಟು ಎಚ್ಚರವಹಿಸಿ ಪುಟ್ಟಮಗು ಅದು. ಮೊದಲೇ ಅಪಾಯಕಾರಿ ಮೃಗ ಅದು’ ಎಂದು ಒಬ್ಬರು ಕಾಳಜಿಯಿಂದ ಪ್ರತಿಕ್ರಿಯಿಸಿದ್ದಾರೆ. ‘ಸಿಂಹಿಣಿ ಕೈ ಎತ್ತಿದಾಗೊಮ್ಮೆ ಮಗು ಆಹಾಹಾ ಎಂದು ನಗುವುದು ಎಂಥ ಮುದ್ದಾಗಿದೆ’ ಎಂದಿದ್ದಾರೆ ಮತ್ತೊಬ್ಬರು. ‘ಮಗು ಏನಾದರೂ ತಿಂಡಿ ಕೊಡುತ್ತದೆಯಾ ಎಂದು ಕಾಯುತ್ತಿದೆ’ ಎಂದಿದ್ದಾರೆ ಮಗದೊಬ್ಬರು.

ಸಿಂಹಿಣಿಯನ್ನ ನೋಡುತ್ತಿದ್ದರೆ ಅದರ ಮುಖದಲ್ಲಿ ಉಗ್ರತೆ ಕಾಣುತ್ತಿಲ್ಲ. ಮಗುವಿನೊಂದಿಗೆ ಮಗುವಿನಂತೆ ಆಡುತ್ತಿದೆ ಎನ್ನಿಸುತ್ತಿಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:43 pm, Thu, 20 October 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ