Viral Video: ವೇಗವಾಗಿ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದ ಘೇಂಡಾಮೃಗ

ವೇಗವಾಗಿ ಬಂದ ಟ್ರಕ್‌ಗೆ ಘೇಂಡಾಮೃಗವು ಡಿಕ್ಕಿ ಹೊಡೆಯುವುದನ್ನು ತೋರಿಸಿರುವ ವೀಡಿಯೊವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹಂಚಿಕೊಂಡಿದ್ದಾರೆ.

Viral Video: ವೇಗವಾಗಿ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದ ಘೇಂಡಾಮೃಗ
ವೇಗವಾಗಿ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದ ಘೇಂಡಾಮೃಗ
Follow us
TV9 Web
| Updated By: Rakesh Nayak Manchi

Updated on:Oct 09, 2022 | 4:47 PM

ರಸ್ತೆ ಮೂಲಕ ವೇಗವಾಗಿ ಬರುತ್ತಿದ್ದ ಟ್ರಕ್ ಒಂದಕ್ಕೆ ಅರಣ್ಯದಿಂದ ರಸ್ತೆಗೆ ಬಂದ ಘೇಂಡಮೃಗವೊಂದು ಡಿಕ್ಕಿ ಹೊಡೆದ ಘಟನೆ ಅಸ್ಸಾಂ ರಾಜ್ಯದ ಧುಬ್ರಿ ಜಿಲ್ಲೆಯ ಹಲ್ದಿಬರಿಯಲ್ಲಿ ನಡೆದಿದೆ. ಘೇಂಡಾಮೃಗವು ಟ್ರಕ್​ಗೆ ಗುದ್ದಿದ ನಂತರ ಅರಣ್ಯಕ್ಕೆ ಹೋಗಲು ಪ್ರಯತ್ನಿಸಿದಾಗ ರಸ್ತೆ ಮೇಲೆ ಜಾರಿ ಬೀಳುತ್ತದೆ, ಬಳಿಕ ಎದ್ದು ಅರಣ್ಯಕ್ಕೆ ಸಾಗುತ್ತದೆ. ಬಳಿಕ ಅರಣ್ಯಕ್ಕೆ ಮರಳಿದೆ. ಈ ವಿಡಿಯೋವನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತವಾಗುತ್ತಿವೆ.

ಹತ್ತು ಸೆಕೆಂಡುಗಳ ಕ್ಲಿಪ್‌ನಲ್ಲಿ ಘೇಂಡಾಮೃಗವು ಅರಣ್ಯ ಪ್ರದೇಶದಿಂದ ರಸ್ತೆಗೆ ಬರುತ್ತದೆ. ನಂತರ ಟ್ರಕ್​ಗೆ ಗುದ್ದುತ್ತದೆ. ಈ ವೇಳೆ ರಸ್ತೆಯಲ್ಲಿ ಬೀಳುತ್ತದೆ, ಕೂಡಲೇ ಏದ್ದು ಅರಣ್ಯದ ಕಡೆ ನಡೆದುಕೊಂಡು ಹೋಗುವುದನ್ನು ವಿಡಿಯೋದನ್ನು ಕಾಣಬಹುದು.

“ಘೇಂಡಾಮೃಗಗಳು ನಮ್ಮ ವಿಶೇಷ ಸ್ನೇಹಿತರು, ಅವುಗಳ ಜಾಗದಲ್ಲಿ ಯಾವುದೇ ಉಲ್ಲಂಘನೆಯನ್ನು ನಾವು ಅನುಮತಿಸುವುದಿಲ್ಲ” ಎಂದು ಮುಖ್ಯಮಂತ್ರಿಯವರು ಟ್ವೀಟ್ ಮಾಡಿದ್ದಾರೆ. “ಹಲ್ದಿಬರಿಯಲ್ಲಿ ನಡೆದ ಈ ದುರದೃಷ್ಟಕರ ಘಟನೆಯಲ್ಲಿ ಘೇಂಡಾಮೃಗ ಬದುಕುಳಿದಿದೆ. ವಾಹನವನ್ನು ತಡೆಹಿಡಿದು ದಂಡ ವಿಧಿಸಲಾಗಿದೆ. ಈ ಮಧ್ಯೆ ಕಾಜಿರಂಗದಲ್ಲಿ ಪ್ರಾಣಿಗಳನ್ನು ಉಳಿಸುವ ನಮ್ಮ ಸಂಕಲ್ಪದಲ್ಲಿ ನಾವು ವಿಶೇಷ 32 ಕಿಮೀ ಎಲಿವೇಟೆಡ್ ಕಾರಿಡಾರ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿಯವರ ಟ್ವೀಟ್​ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ಚಾಲಕನು ಅಲ್ಲಿ ಏನು ಮಾಡಬೇಕಾಗಿತ್ತು? ಅಂತಹ ಸಣ್ಣ ಪ್ರದೇಶದಲ್ಲಿ ಆತ ಚೆನ್ನಾಗಿ ತಿರುಗಿಸಿದನು. ದಂಡ ವಿಧಿಸುವ ಬದಲು ಅಂಡರ್‌ಪಾಸ್‌ಗಳನ್ನು ನಿರ್ಮಿಸಿ” ಎಂದು ಹೇಳಿದ್ದಾರೆ. “32 ಕಿಮೀ ಕಾರಿಡಾರ್ ನಿರ್ಮಾಣದ ಸಮಯದಲ್ಲಿ ನಿಜವಾಗಿಯೂ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಮತ್ತು ಮರಗಳ ನಾಶಕ್ಕೆ ಕಾರಣವಾಗಬಹುದು. ಬದಲಿಗೆ ನುಮಲಿಗಢದಲ್ಲಿ ಬಿ’ಪುತ್ರ ಸೇತುವೆ ಪೂರ್ಣಗೊಂಡರೆ ಎಲ್ಲಾ ಭಾರೀ ವಾಹನಗಳನ್ನು ಉತ್ತರ ದಂಡೆಯ ಮೂಲಕ ಚಲಿಸುವಂತೆ ಮಾಡಬೇಕು. ಸದ್ಯಕ್ಕೆ ವೇಗದ ಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಅಸ್ಸಾಂನಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಅತಿಕ್ರಮಣ ಮತ್ತು ಘೇಂಡಾಮೃಗಗಳ ಬೇಟೆಯಿಂದ ಮುಕ್ತಗೊಳಿಸಿದ್ದಕ್ಕಾಗಿ ಅಸ್ಸಾಂ ಸರ್ಕಾರವನ್ನು ಶ್ಲಾಘಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Sun, 9 October 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್