AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುರ್ಖಾದಲ್ಲಿ ಓಡಾಡಿದ್ದು ಅವಳಲ್ಲ…ಅವನು: ಪೂಜಾರಿ ಬುರ್ಖಾ ಧರಿಸಿದ್ಯಾಕೆ?

ಕೇರಳದ ಅರ್ಚಕನೋರ್ವ ಬುರ್ಖಾ ಧರಿಸಿ ಓಡಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಆದ್ರೆ, ಅರ್ಚಕ ಬುರ್ಖಾ ಧರಿಸಿದ್ದು ಯಾಕೆ ಅನ್ನೋದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಬುರ್ಖಾದಲ್ಲಿ  ಓಡಾಡಿದ್ದು ಅವಳಲ್ಲ...ಅವನು: ಪೂಜಾರಿ ಬುರ್ಖಾ ಧರಿಸಿದ್ಯಾಕೆ?
burqa
TV9 Web
| Edited By: |

Updated on: Oct 09, 2022 | 7:30 PM

Share

ತಿರುವನಂತಪುರ: ಅನುಮಾನಸ್ಪದವಾಗಿ ಓಡಾಡುತ್ತಿದ್ದ ಬುರ್ಖಾಧಾರಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಬುರ್ಖಾ (burqa) ತೆಗೆಸಿದಾಗ ಎಲ್ಲರಿಗೂ ಗೊತ್ತಾಗಿದ್ದು ಅವಳಲ್ಲ ಅವನು ಎಂದು.

ಹೌದು…ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಈ ಬುರ್ಖಾ ಧರಿಸುತ್ತಾರೆ. ಆದ್ರೆ, ಕೇರಳದ(Kerala)  28ರ ಹರೆಯದ ಜಿಷ್ಣು ನಂಬೂದಿರಿ ಅನ್ನೋ ಅರ್ಚಕ ಬುರ್ಖಾ ಧರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮೆಪ್ಪಾಯೂರ್ ಬಳಿ ಇರುವ ದೇವಸ್ಥಾನದಲ್ಲಿ ಅರ್ಚಕನಾಗಿರುವ ಜಿಷ್ಣು, ಅಕ್ಟೋಬರ್ 7 ರಂದು ಬುರ್ಖಾ ಹಾಕಿ ಕೊಂಡು ನಗರ ಸುತ್ತಾಡಲು ತೆರಳಿದ್ದಾನೆ. ಕೊಯ್ಲಾಂಡಿ ಜಂಕ್ಷನ್ ಬಳಿ ಆಟೋ ರಿಕ್ಷಾ ಹತ್ತಿದ ಅರ್ಚಕ ಮಾತುಗಳು, ನಡತೆಯಲ್ಲಿ ಅನುಮಾನ ಬಂದಿದೆ. ಹೀಗಾಗಿ ಆಟೋ ಚಾಲಕ ಅರ್ಚಕನನ್ನು ಹಿಡಿದಿದ್ದಾನೆ. ಬಳಿಕ ಸ್ಥಳೀಯರು ಸೇರಿ ಅರ್ಚಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಹುಡುಗಿಯನ್ನು ಒಲಿಸಿಕೊಳ್ಳಲು ಸ್ಟಂಟ್ ಮಾಡಲು ಹೋದ ಈ ಹುಡುಗನ ಪರಿಸ್ಥಿತಿ ನೋಡಿ

ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದು, ಪೊಲೀಸರ ಬಳಿಕ ತನಗೆ ಚಿಕನ್ ಫಾಕ್ಸ್ ಇದೆ ಎಂದಿದ್ದಾನೆ. ಆದರೆ ಪೊಲೀಸರು ಪರಿಶೀಲಿಸಿದಾಗ ಈತನಲ್ಲಿ ಯಾವುದೇ ಚಿಕನ್ ಫಾಕ್ಸ್ ಲಕ್ಷಣ ಕಾಣಿಸಿಲ್ಲ. ಆದರೂ ಪೊಲೀಸರು ಪೂಜಾರಿಯನ್ನು ಬಿಟ್ಟು ಕಳುಹಿಸಿದ್ದಾರೆ.

ಬಿಡುವ ಮುನ್ನ ಪೊಲೀಸರು ಈತನ ಮೇಲೆ ಏನಾದರೂ ಪ್ರಕರಣಗಳು ಇವೆ ಅಂತ ಚೆಕ್ ಮಾಡಿದ್ದು, ಈತನ ವಿರುದ್ಧ ಯಾವುದೇ ಅಪರಾಧ ದಾಖಲೆಗಳಿಲ್ಲ. ಹೀಗಾಗಿ ಆತನ ಮನೆಯವರನ್ನು ಠಾಣೆಗೆ ಕರೆಯಿಸಿ, ಆತನ ಹೆಸರು ವಿಳಾಸ ಪಡೆದು ಬಿಟ್ಟು ಕಳುಹಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಯುವಕರು ಬುರ್ಖಾ ಧರಿಸಿ ಓಡಾಡಿ ಸಿಕ್ಕಿ ಬೀಳುತ್ತಿರುವುದು ಹೊಸದೇನಲ್ಲ. ಕೆಲ ದಿನಗಳ ಹಿಂದೆ ವಿಜಯಪುರದ ಆಲಮಟ್ಟಿ ಡ್ಯಾಂ ಬಳಿ ಬುರ್ಖಾ ಧರಿಸಿ ಓಡಾಡ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಈತ ಆಲಮಟ್ಟಿ ಡ್ಯಾಂ ಬಳಿ ಓಡಾಡುತ್ತಾ ಪೊದೆಯ ಬಳಿ ಹೋಗಿ ಲಿಪ್‌ಸ್ಟಿಕ್ ಹಾಕಿದ್ದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದನ್ನು ಇಲ್ಲಿ ಸ್ಮರಿಸಹುದು.

ಒಟ್ಟಿನ;ಲ್ಲಿ ಅರ್ಚಕ ನೀಡಿರುವ ಕಾರಣಗಳನ್ನು ಒಪ್ಪುವಂತೆ ಇಲ್ಲ. ಅರ್ಚಕ ಬುರ್ಖಾ ಧರಿಸಿದ್ದು ಯಾಕೆ ಅನ್ನೋದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ