AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೈಗೆ ಗಾಯ ಮಾಡಿಕೊಂಡ ಸೊಸೆಗೆ ಅಡುಗೆ ಮಾಡಲು ಸಹಾಯ ಮಾಡಿದ ಮಾವ

ಯಾವುದೇ ಸಂಬಂಧವಿರಲಿ, ಪರಸ್ಪರ ಬೆಂಬಲ, ಸಹಾಯ ಮಾಡುವ ಮನೋಭಾವ ಇರಲೇಬೇಕು. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಕೈ ನೋವಿನಿಂದಾಗಿ ಅಡುಗೆ ಕೆಲಸ ಮಾಡಲು ಕಷ್ಟ ಪಡುತ್ತಿರುವ ಸೊಸೆಗೆ ಮಾವ ಸಹಾಯ ಮಾಡಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಮಾವ ಹಾಗೂ ಸೊಸೆಗೆ ಬಾಂಧವ್ಯ ಸಾರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

Video: ಕೈಗೆ ಗಾಯ ಮಾಡಿಕೊಂಡ ಸೊಸೆಗೆ ಅಡುಗೆ ಮಾಡಲು ಸಹಾಯ ಮಾಡಿದ ಮಾವ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 30, 2026 | 11:09 AM

Share

ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳಿಗೆ ತಂದೆ ತಾಯಿಯಂತೆ (father- mother) ಪ್ರೀತಿಸುವ ಅತ್ತೆ ಮಾವ ಸಿಕ್ಕರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಇದೀಗ ಸೊಸೆಯೊಬ್ಬಳಿಗೆ (daughter in law) ತಂದೆಯಂತೆ ಪ್ರೀತಿ ಮಾಡುವ ಮಾವ ಸಿಕ್ಕಿದ್ದಾನೆ. ಹೌದು, ಕೈಗೆ ಗಾಯ ಮಾಡಿಕೊಂಡ ಸೊಸೆಯೊಬ್ಬಳು ಅಡುಗೆ ಮಾಡಲು ಕಷ್ಟ ಪಡುತ್ತಿದ್ದರೆ ಮಾವ ಆಕೆಗೆ ಸಹಾಯ ಮಾಡಿದ್ದಾನೆ. ಮಾವನೇ ಚಪಾತಿ ಹಿಟ್ಟು ನಾದುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಾವನ ಒಳ್ಳೆಯ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ.

ಅಂಕಿತಾ ಶುಕ್ಲ (Ankita Shukla) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಗನೊಬ್ಬ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಮಾವ ಹಾಗೂ ಸೊಸೆಯ ಬಾಂಧವ್ಯವನ್ನು ಸೆರೆ ಹಿಡಿದಿದ್ದಾನೆ. ಸೊಸೆ ಕೈಗೆ ಗಾಯ ಮಾಡಿಕೊಂಡು ಕುಳಿತುಕೊಂಡಿದ್ದಾಳೆ. ಇತ್ತ ಮಾವ ಸೊಸೆಯ ಪಕ್ಕದಲ್ಲೇ ಕುಳಿತಿಕೊಂಡು ಚಪಾತಿ ಹಿಟ್ಟು ನಾದುವುದರಲ್ಲಿ ಬ್ಯುಸಿಯಾಗಿದ್ದಾನೆ. ತನ್ನ ಮಗ ವಿಡಿಯೋ ಮಾಡುವುದನ್ನು ಕಂಡು, ಅವಳು ಕೈಗೆ ಗಾಯ ಮಾಡಿಕೊಂಡಿದ್ದಾಳೆ. ಹೀಗಾಗಿ ಸೊಸೆಗೆ ಸಹಾಯ ಮಾಡುವುದು ಕುಟುಂಬ ಸದಸ್ಯರಾಗಿ ನಮ್ಮ ಕರ್ತವ್ಯ. ನಾವು ಒಬ್ಬರನ್ನೊಬ್ಬರು ಬೆಂಬಲಿಸದಿದ್ದರೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೇಗೆ ಇರುತ್ತದೆ ಎಂದು ಮಾವ ತನ್ನ ಮಗನಿಗೆ ಹೇಳುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಪ್ಪ ಎಲ್ಲಿ ಎಂದು ಕೇಳ್ಬೇಡ, ಅಮ್ಮನನ್ನ ಚೆನ್ನಾಗಿ ನೋಡಿಕೋ, ಕ್ಯಾನ್ಸರ್​ನಿಂದ ಕಣ್ಮುಚ್ಚುವ ಮುನ್ನ ಮಗನಿಗೆ ಧೈರ್ಯ ತುಂಬಿದ ತಂದೆ

ಈ ವಿಡಿಯೋ ಇದುವರೆಗೆ 4 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಮಾವನನ್ನು ಪಡೆದ ನೀನೇ ಪುಣ್ಯವಂತೆ ಎಂದಿದ್ದಾರೆ. ಮತ್ತೊಬ್ಬರು, ಎಲ್ಲರಿಗೂ ಇಂತಹ ಒಳ್ಳೆಯ ಮಾವ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಾವನು ಒಬ್ಬ ತಂದೆಯಾಗಿರುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಚೆನ್ನಮ್ಮ ಸಮಾಧಿ ಮುಂದೆಯೇ ಕುಳಿತು ದೇವೇಗೌಡರ ಕಣ್ಣೀರು
ಚೆನ್ನಮ್ಮ ಸಮಾಧಿ ಮುಂದೆಯೇ ಕುಳಿತು ದೇವೇಗೌಡರ ಕಣ್ಣೀರು
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಎನ್‌ಜಿಒ ನೆರವಿನಿಂದ ತಂದೆ-ಮಗಳ ಭಾವನಾತ್ಮಕ ಪುನರ್ಮಿಲನ
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ಕರ್ನಾಟಕ ಬಂದ್​ ಕರೆಗೆ ಕನ್ನಡ ಸಂಘಟನೆಗಳ ನಿರ್ಧಾರ: ನಾಳೆಯೇ ಡೇಟ್ ಫಿಕ್ಸ್
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಅದೃಷ್ಟ ಹೇಗಿದೆ?
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರ ಧರೆಗುರುಳಿ ಇಬ್ಬರಿಗೆ ಗಾಯ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
ಅಸ್ಸಾಂ ಪ್ರವಾಹದ ಮೃತರ ಸಂಖ್ಯೆ 75ಕ್ಕೆ ಏರಿಕೆ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು