AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ; ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ನಗ್ನ ಫೋಟೋ ತೆಗೆದ ತಾಯಿ

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯೊಬ್ಬಳು ತನ್ನ ಸ್ವಂತ ಪೋಷಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ತನ್ನ ತಂದೆ ಅತ್ಯಾಚಾರ ಎಸಗಿದ್ದಾರೆ, ಈ ಘಟನೆಯಲ್ಲಿ ತನ್ನ ತಾಯಿಯ ಕೈವಾಡವಿದೆ ಎಂದು ಆಕೆ ಆರೋಪಿಸಿದ್ದಾರೆ. ದೂರಿನ ನಂತರ, ಪೊಲೀಸರು ಇಬ್ಬರೂ ಪೋಷಕರನ್ನು ಬಂಧಿಸಿ, ಪೋಕ್ಸೊ ಕಾಯ್ದೆ ಮತ್ತು ಇತರ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ತನ್ನ ಪೋಷಕರು ತನ್ನ ಮೇಲೆ ಯಾವೆಲ್ಲ ರೀತಿಯ ದೌರ್ಜನ್ಯ ಎಸಗಿದ್ದರು ಎಂಬುದನ್ನು ಆ ಬಾಲಕಿ ವಿವರಿಸಿದ್ದನ್ನು ಕೇಳಿ ಪೊಲೀಸರೇ ಆಶ್ಚರ್ಯಕ್ಕೊಳಗಾಗಿದ್ದರು.

ಗುಜರಾತ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ; ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ನಗ್ನ ಫೋಟೋ ತೆಗೆದ ತಾಯಿ
ಲೈಂಗಿಕ ದೌರ್ಜನ್ಯImage Credit source: TV9
ಸುಷ್ಮಾ ಚಕ್ರೆ
|

Updated on: Oct 05, 2026 | 10:28 PM

Share

ಅಹಮದಾಬಾದ್, ಅಕ್ಟೋಬರ್ 5: ಗುಜರಾತ್​​ನಲ್ಲಿ ಎಲ್ಲರೂ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಸ್ನೇಹಿತನೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಕ್ಕೆ 14 ವರ್ಷದ ಅಪ್ರಾಪ್ತ ಮಗಳ ಮೇಲೆ ತಂದೆ ಸತತವಾಗಿ ಅತ್ಯಾಚಾರ ಎಸಗಿದ್ದು, ತಾಯಿಯೇ ನಗ್ನ ಫೋಟೋಗಳನ್ನು ತೆಗೆದು ವಿಕೃತಿ ಮೆರೆದಿರುವ ಬೆಚ್ಚಿಬೀಳಿಸುವ ಘಟನೆ ಗುಜರಾತ್‌ನ ಕಚ್ ಜಿಲ್ಲೆಯ ಆಂಜಾರ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ದೌರ್ಜನ್ಯಕ್ಕೊಳಗಾದ ಬಾಲಕಿಯೇ ತನ್ನ ಅಪ್ಪ-ಅಮ್ಮನ ವಿರುದ್ಧ ದೂರು ನೀಡಿದ್ದು, ಆ ದೂರಿನ ಆಧಾರದ ಮೇಲೆ ಪೋಷಕರ ವಿರುದ್ಧ ‘ಪೋಕ್ಸೋ’ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂಲತಃ ಬೇರೆ ರಾಜ್ಯದವರಾದ ಈ ಕುಟುಂಬವು ಕಳೆದ 6 ವರ್ಷಗಳಿಂದ ಗುಜರಾತ್‌ನಲ್ಲಿ ವಾಸಿಸುತ್ತಿತ್ತು.

ಏನಿದು ಘಟನೆ?:

ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರಕಾರ, 14 ವರ್ಷದ ಅಪ್ರಾಪ್ತ ಬಾಲಕಿ ತನ್ನ ನಾಲ್ವರು ಸಹೋದರಿಯರ ಜೊತೆ ವಾಸಿಸುತ್ತಿದ್ದಳು. ಆಕೆ ತನ್ನ ಕುಟುಂಬದ ಜೊತೆ ಕಳೆದ 6 ವರ್ಷಗಳಿಂದ ಗುಜರಾತ್‌ನಲ್ಲಿ ವಾಸಿಸುತ್ತಿದ್ದಳು. ಸೆಪ್ಟೆಂಬರ್ 14ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವಳು ಮನೆಯಲ್ಲಿದ್ದಾಗ ಆಗ್ರಾದ ನಿವಾಸಿ ಶಿಸ್ಪಾಲ್ ಅಲಿಯಾಸ್ ಗೋಲು ಎಂಬ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆಕೆಯ ತಾಯಿ ಆಕೆ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದರು. ಯಾರ ಜೊತೆ ಮಾತನಾಡುತ್ತಿದ್ದೀಯ? ಎಂದು ಕೇಳಿದಳು. ಆಕೆ ತಾನು ಸ್ನೇಹಿತನೊಂದಿಗೆ ಮಾತನಾಡುತ್ತಿದ್ದೇನೆ ಎಂದು ವಿವರಿಸಿದಳು. ಅದಾದ ಸುಮಾರು ಅರ್ಧ ಗಂಟೆಯ ನಂತರ, ಆಕೆಯ ತಂದೆ ಕೆಲಸದಿಂದ ಮನೆಗೆ ಮರಳಿದರು. ಮಧ್ಯಾಹ್ನ 2.30ರ ಸುಮಾರಿಗೆ, ಆಕೆಯ ತಂದೆ ಊಟ ಮಾಡುತ್ತಿದ್ದಾಗ, ಆಕೆಯ ತಾಯಿ ತನ್ನ ಮಗಳು ಒಬ್ಬ ಹುಡುಗನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ತಿಳಿಸಿದಳು. ಇದರಿಂದ ತಂದೆ ಕೋಪಗೊಂಡರು. ಆಕೆಯ ತಂದೆ ಮಗಳ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿ ಕೂಡಿ ಹಾಕಿದ್ದರು. ಆಕೆಗೆ ಆಹಾರ, ನೀರು ಕೊಡದೆ ಹಿಂಸೆ ನೀಡಲಾಗಿತ್ತು. ರಾತ್ರಿಯೂ ಊಟ ನೀಡದೆ ಮಧ್ಯರಾತ್ರಿಯವರೆಗೆ ಆಕೆಯ ಮೇಲೆ ಹಲ್ಲೆ ನಡೆಸಲಾಯಿತು.

ಇದನ್ನೂ ಓದಿ: ಜನ್ಮದಿನ ಕರಾಳ ದಿನವಾಯ್ತು; ದೇವಸ್ಥಾನದಿಂದ ಬರುವಾಗ ಕುತ್ತಿಗೆಗೆ ಚಾಕು ಹಿಡಿದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ಬಳಿಕ, ತಾಯಿಯ ಸಮ್ಮುಖದಲ್ಲೇ ತಂದೆಯು ತನ್ನ ಮಗಳ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 29ರಂದು ಸಹ ಈ ದೌರ್ಜನ್ಯ ಮುಂದುವರಿದಿತ್ತು. ಸೆಪ್ಟೆಂಬರ್ 29ರಂದು ಬಾಲಕಿಯು ಅದೇ ಕಟ್ಟಡದಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ತೆರಳಿ 112 ತುರ್ತು ಹೆಲ್ಪ್‌ಲೈನ್‌ಗೆ ಕರೆ ಮಾಡಿದ್ದಳು. ಆದರೆ, ಪೋಷಕರು ಫೋನ್ ಕಸಿದುಕೊಂಡು ಬಾಲಕಿಯನ್ನು ಬಲವಂತವಾಗಿ ಮನೆಗೆ ಕರೆದೊಯ್ದು ಮತ್ತೆ ಬಂಧಿಸಿಟ್ಟಿದ್ದರು.

ಅಕ್ಟೋಬರ್ 1ರಂದು ತಂದೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾಗ, ತಾಯಿಯೇ ತನ್ನ ಮೊಬೈಲ್‌ನಲ್ಲಿ ಮಗಳ ನಗ್ನ ಫೋಟೋಗಳನ್ನು ತೆಗೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮರುದಿನ (ಅಕ್ಟೋಬರ್ 2) ಬೆಳಿಗ್ಗೆ ತಂದೆ ಕೆಲಸಕ್ಕೆ ತೆರಳಿದ ತಕ್ಷಣ, ಬಾಲಕಿಯು ಹೇಗೋ ತಪ್ಪಿಸಿಕೊಂಡು ಚಿಕ್ಕಮ್ಮನ ಮನೆಗೆ ತಲುಪಿ ತನಗಾದ ದೌರ್ಜನ್ಯವನ್ನು ವಿವರಿಸಿದ್ದಾಳೆ. ಬಳಿಕ ಮತ್ತೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: ಬಿಹಾರದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು

ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಾಚರಣೆ ನಡೆಸಿದ ಆಂಜಾರ್ ಪೊಲೀಸರು ಬಾಲಕಿಯ ತಂದೆ ಮತ್ತು ತಾಯಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ಸದ್ಯ ಸರ್ಕಾರದ ಬಾಲಮಂದಿರ ಮತ್ತು ರಕ್ಷಣಾ ಘಟಕದ ಉಸ್ತುವಾರಿಗೆ ಒಪ್ಪಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ