AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನ್ಮದಿನ ಕರಾಳ ದಿನವಾಯ್ತು; ದೇವಸ್ಥಾನದಿಂದ ಬರುವಾಗ ಕುತ್ತಿಗೆಗೆ ಚಾಕು ಹಿಡಿದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ತನ್ನ 17ನೇ ಜನ್ಮದಿನದ ಅಂಗವಾಗಿ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆಯಲು ಬಯಸಿದ್ದ ಯುವತಿಯೊಬ್ಬಳಿಗೆ, ದೆಹಲಿಯ ಪಾರ್ಕ್​ನಲ್ಲಿ ಮೂವರು ಯುವಕರು ಅಡ್ಡಗಟ್ಟಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.  ಪೊಲೀಸರ ಸೋಗಿನಲ್ಲಿ ಬಂದ ಮೂವರು ಕಾಮುಕರು, ಆಕೆಯ ಸ್ನೇಹಿತನಿಗೆ ಬೆದರಿಕೆಯೊಡ್ಡಿ, ದಕ್ಷಿಣ ದೆಹಲಿಯ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ ಯುವತಿಯ ಮೇಲೆ ಗ್ಯಾಂಗ್‌ರೇಪ್ ನಡೆಸಿದ್ದಾರೆ. ಸೆಪ್ಟೆಂಬರ್ 21ರಂದು ಈ ಭೀಕರ ಘಟನೆ ನಡೆದಿದೆ. ಆ ಯುವತಿ ತೀವ್ರ ನೋವಿನಿಂದ ಅಳುತ್ತಿದ್ದರೂ ಹಾಗೂ 'ಏನೇ ಕೇಳುವುದಿದ್ದರೂ ನನ್ನ ತಾಯಿಯ ಬಳಿ ಮಾತನಾಡಿ' ಎಂದು ಬೇಡಿಕೊಂಡರೂ ಕರುಣೆ ತೋರದ ಮೂವರೂ ಆರೋಪಿಗಳು, ಚಾಕುವಿನಿಂದ ಬೆದರಿಸಿ ಒಬ್ಬರಾದ ನಂತರ ಒಬ್ಬರಂತೆ ಅತ್ಯಾಚಾರ ನಡೆಸಿದರು.

ಜನ್ಮದಿನ ಕರಾಳ ದಿನವಾಯ್ತು; ದೇವಸ್ಥಾನದಿಂದ ಬರುವಾಗ ಕುತ್ತಿಗೆಗೆ ಚಾಕು ಹಿಡಿದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!
ಆಸ್ಥಾ ಕುಂಜ್ ಪಾರ್ಕ್​Image Credit source: TV9
ಸುಷ್ಮಾ ಚಕ್ರೆ
|

Updated on: Sep 25, 2026 | 3:33 PM

Share

ನವದೆಹಲಿ, ಸೆಪ್ಟೆಂಬರ್ 25: ತನ್ನ 17ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಯುವತಿಯನ್ನು ಅಡ್ಡ ಹಾಕಿದ್ದ ಮೂವರು ಯುವಕರು ಆಕೆಯ ಕುತ್ತಿಗೆಗೆ ಚಾಕು ಹಿಡಿದು, ಎಳೆದುಕೊಂಡು ಹೋಗಿ, ಸಾಮೂಹಿಕ ಅತ್ಯಾಚಾರ ನಡೆಸಿರುವ ಭೀಕರ ಘಟನೆ ದೆಹಲಿಯಲ್ಲಿ ನಡೆದಿದೆ. ಸೋಮವಾರ ಸಂಜೆ ತನ್ನ ಹುಟ್ಟುಹಬ್ಬದ ಪ್ರಯುಕ್ತ ಕಾಳ್ಕಾಜಿ ಮಂದಿರಕ್ಕೆ ಹೋಗಲು ಮನೆಯಿಂದ ಹೊರಟಿದ್ದ ಯುವತಿ ದೇವಸ್ಥಾನದಿಂದ ವಾಪಾಸ್ ಬರುವಾಗ ದಕ್ಷಿಣ ದೆಹಲಿಯ ಪ್ರಸಿದ್ಧ ಆಸ್ಥಾ ಕುಂಜ್ ಪಾರ್ಕ್‌ನೊಳಗೆ ನಡೆಯುತ್ತಾ ಹೋಗುತ್ತಿದ್ದಳು. ಆಗ ಆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಯುವತಿಯ ಪಾಲಿಗೆ ಆ ದಿನ ಕರಾಳದಿನವಾಗಿ ಮಾರ್ಪಟ್ಟಿದೆ.

ಸೋಮವಾರ ಸಂಜೆಯೇ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಆಕೆ ಆ ದಿನ ನಡೆದ ಘಟನೆಯನ್ನು ನೆನಪಿಸಿಕೊಂಡು, ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಆ ದಿನ ಏನೆಲ್ಲ ನಡೆಯಿತು ಎಂಬ ಭಯಾನಕ ವಿವರ ಹೊರಬಿದ್ದಿದೆ. ಆಸ್ಥಾ ಕುಂಜ್ ಪಾರ್ಕ್​ನಿಂದ ಕಾಂಡೋಮ್​ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಅಂದಹಾಗೆ, ದೆಹಲಿಯಲ್ಲಿ ಸುಮಾರು 200 ಎಕರೆ ವಿಸ್ತೀರ್ಣದಲ್ಲಿರುವ ಈ ಆಸ್ಥಾ ಕುಂಜ್ ಪಾರ್ಕ್​ ಪೊಲೀಸ್ ದಾಖಲೆಯಲ್ಲಿ ಡಾರ್ಕ್ ಸ್ಪಾಟ್​ ಎಂದು ಈಗಾಗಲೇ ಗುರುತಿಸಲ್ಪಟ್ಟಿದೆ. ಸಾಕಷ್ಟು ವಿಶಾಲವಾಗಿರುವುದರಿಂದ ಈ ಪಾರ್ಕ್​ನೊಳಗೆ ಎಲ್ಲ ಕಡೆಯೂ ಕಣ್ಗಾವಲಿಡಲು ಸಾಧ್ಯವಿಲ್ಲ. ಇದೇ ಕಾರಣದಿಂದ ಇಲ್ಲಿ ಆಗಾಗ ಕಳ್ಳತನ, ಗಲಾಟೆ ಮುಂತಾದ ಘಟನೆಗಳು ನಡೆಯುತ್ತಿರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ತರುಣ್ ತೇಜ್‌ಪಾಲ್‌ಗೆ 2 ವಾರಗಳೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ

ಎಫ್​ಐಆರ್​​ನಲ್ಲೇನಿದೆ?:

ತನ್ನ ಮೇಲೆ ಅತ್ಯಾಚಾರ ನಡೆದ ದಿನದ ಘಟನೆಯನ್ನು ಆ ಯುವತಿ ವಿವರಿಸಿದ್ದಾಳೆ. ಅದರ ಅನುಸಾರ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ಸೋಗಿನಲ್ಲಿ ಬಂದ ಮೂವರು ಆರೋಪಿಗಳು, ಆಕೆಯ ಕತ್ತಿಗೆ ಚಾಕುವನ್ನಿಟ್ಟು, ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆಯೊಡ್ಡಿ ಒಬ್ಬರಾದ ನಂತರ ಒಬ್ಬರಂತೆ ವಿಕೃತಿ ಮೆರೆದಿರುವುದು ಎಫ್‌ಐಆರ್ ವಿವರಗಳಿಂದ ದೃಢಪಟ್ಟಿದೆ. ಹುಟ್ಟುಹಬ್ಬದ ದಿನ ಕಾಳ್ಕಾಜಿ ಮಂದಿರದಲ್ಲಿ ದರ್ಶನ ಮುಗಿಸಿ ಇಸ್ಕಾನ್ ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯೆ ಪಾರ್ಕ್‌ನಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ತಡೆದ ಆರೋಪಿಗಳು, ತಾವು ‘ಪೋಲಿಸರು’ ಎಂದು ಹೇಳಿಕೊಂಡರು. ನಂತರ ಯುವತಿಯ ಸ್ನೇಹಿತನಿಗೆ ಕಪಾಳಮೋಕ್ಷ ಮಾಡಿ, ಇಬ್ಬರ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡರು.

ಆಗ ಆ ಯುವತಿ ಕಿರುಚಾಡಿದಾಗ ಆಸಿಫ್ ಎಂಬ ಆರೋಪಿಗೆ ಗನ್ ತೆಗೆಯುವಂತೆ ಸೂಚಿಸಲಾಯಿತು. ಆತ ಪಿಸ್ತೂಲ್ ತೋರಿಸಿ ಬೆದರಿಸಿದನು. ನಂತರ ಆರೋಪಿಗಳು ಚಾಕುಗಳನ್ನು ಹೊರತೆಗೆದು, ಯುವತಿಯ ಕತ್ತಿನ ಮೇಲೆ ಹಿಡಿದು ಪಾರ್ಕ್‌ನ ಅತ್ಯಂತ ಕತ್ತಲಾದ ಮತ್ತು ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಎಳೆದೊಯ್ದರು. ಆಕೆ ತೀವ್ರ ನೋವಿನಿಂದ ಅಳುತ್ತಾ, ಬೇಡಿಕೊಂಡರೂ ಕರುಣೆ ತೋರದ ಮೂವರೂ ಕಾಮುಕರು, ಚಾಕುವಿನಿಂದ ಆಕೆಯ ಕತ್ತಿಗೆ ಚುಚ್ಚುವುದಾಗಿ ಬೆದರಿಸಿ, ಒಬ್ಬರಾದ ನಂತರ ಒಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದರು. ಶಬ್ದ ಮಾಡಿದರೆ ಅಥವಾ ಕಿರುಚಾಡಿದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಹೆದರಿಸಿದ್ದರು.

ಇದನ್ನೂ ಓದಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಕೇಸ್​​ ಮರು ತನಿಖೆಗೆ ಸುಪ್ರೀಂಕೋರ್ಟ್​ ಅಸ್ತು

ಕೊಲೆ ಬೆದರಿಕೆ ಹಾಕಿ ಪರಾರಿ:

ಅತ್ಯಾಚಾರ ನಡೆಸಿದ ನಂತರ, ಆ ಯುವತಿಯ ಸ್ನೇಹಿತನನ್ನು ಸ್ಥಳಕ್ಕೆ ಕರೆತಂದ ಆರೋಪಿಗಳು, ಫೋನ್‌ಗಳನ್ನು ವಾಪಾಸ್ ಕೊಟ್ಟು ತಕ್ಷಣವೇ ಅಲ್ಲಿಂದ ಹೋಗಲು ಆದೇಶಿಸಿದರು. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಪಾರ್ಕ್‌ನಿಂದ ಹೊರಬಂದ ತಕ್ಷಣವೇ ಸಂತ್ರಸ್ತೆ ತನ್ನ ಸ್ನೇಹಿತನಿಗೆ ನಡೆದ ಘಟನೆಯನ್ನು ತಿಳಿಸಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರೂ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಪ್ರಸ್ತುತ ಅವರು ಪೊಲೀಸ್ ವಶದಲ್ಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More