ಇಶಾ ಯೋಗ ಕೇಂದ್ರದಲ್ಲಿ ‘ಇನ್‌ಸೈಟ್’ ನಾಯಕತ್ವ ಕಾರ್ಯಕ್ರಮದ 15ನೇ ಆವೃತ್ತಿಗೆ ಸದ್ಗುರು ಚಾಲನೆ
ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸದ್ಗುರು ಅಕಾಡೆಮಿಯು ಆಯೋಜಿಸಿರುವ 3 ದಿನಗಳ ಉದ್ಯಮ ನಾಯಕತ್ವ ಕಾರ್ಯಕ್ರಮದಲ್ಲಿ ಅದಾನಿ ಗ್ರೂಪ್, ಹೀರೋ ಫಿನ್‌ಕಾರ್ಪ್, ಭಾರತ್ ಮ್ಯಾಟ್ರಿಮೋನಿ, ಅಪೋಲೋ ಹಾಸ್ಪಿಟಲ್ಸ್, ಎಂಕೆ ವೆಂಚರ್ಸ್, ಅಗ್ನಿಕುಲ್ ಕಾಸ್ಮೋಸ್, ವಿಲ್ವಾ ಮತ್ತು ಮೊಗ್ಲಿಕ್ಸ್ ಸಂಸ್ಥೆಗಳ ಪ್ರಮುಖ ಉದ್ಯಮ ನಾಯಕರು ಒಂದೆಡೆ ಸೇರುತ್ತಿದ್ದಾರೆ. ಈ ‘ಇನ್‌ಸೈಟ್: ದಿ ಡಿಎನ್‌ಎ ಆಫ್ ಸಕ್ಸಸ್’ 15ನೇ ಆವೃತ್ತಿಗೆ ಇಂದು ಸದ್ಗುರು ಚಾಲನೆ ನೀಡಿದರು.

ನವದೆಹಲಿ, ನವೆಂಬರ್ 26: ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸದ್ಗುರು ಅಕಾಡೆಮಿಯು ಆಯೋಜಿಸಿರುವ 3 ದಿನಗಳ ಉದ್ಯಮ ನಾಯಕತ್ವ ಕಾರ್ಯಕ್ರಮವಾದ ‘ಇನ್‌ಸೈಟ್: ದಿ ಡಿಎನ್‌ಎ ಆಫ್ ಸಕ್ಸಸ್’ನ 15ನೇ ಆವೃತ್ತಿಯನ್ನು ಸದ್ಗುರು ಜಗ್ಗಿ ವಾಸುದೇವ್ ಇಂದು ಉದ್ಘಾಟಿಸಿದರು. 200ಕ್ಕೂ ಹೆಚ್ಚು ಉದ್ಯಮಿಗಳು, ವ್ಯಾಪಾರ ಮಾಲೀಕರು ಮತ್ತು ಹಿರಿಯ ಕಾರ್ಯನಿರ್ವಾಹಕರನ್ನು ಒಂದೆಡೆ ಸೇರಿಸಿರುವ ‘ಇನ್‌ಸೈಟ್ 2026’ ಒಂದು ಸಂಸ್ಥೆಯನ್ನು ಬೆಳೆಸುವ ಮತ್ತು ವ್ಯಕ್ತಿಯ ವೈಯಕ್ತಿಕ ಸಾಮರ್ಥ್ಯಗಳನ್ನು ವಿಸ್ತರಿಸುವ ವಿಜ್ಞಾನವನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸದ್ಗುರು, ಮಾನವನ ಬುದ್ಧಿಮತ್ತೆಯು ಸಂಗ್ರಹವಾದ ದತ್ತಾಂಶ (ಡೇಟಾ) ಮತ್ತು ಸೀಮಿತ ಗ್ರಹಿಕೆಗಳಲ್ಲಿ ಸಿಲುಕಿಕೊಂಡಿರುವುದರಿಂದ ಅದು ಹೇಗೆ ಒತ್ತಡದ ಮೂಲವಾಗುತ್ತದೆ ಎಂಬುದನ್ನು ವಿವರಿಸಿದರು. ಯಂತ್ರಗಳು ದಿನನಿತ್ಯದ ಪ್ರಕ್ರಿಯೆಗಳನ್ನು ಹೆಚ್ಚೆಚ್ಚು ನಿರ್ವಹಿಸುತ್ತಿರುವ ಈ ಕಾಲದಲ್ಲಿ, ಮಾನವರು ಕೇವಲ ದತ್ತಾಂಶ ಆಧಾರಿತ ಆಲೋಚನೆಗಳನ್ನು ಮೀರಿ ನೋಡಬೇಕು ಎಂದು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: ಅಮೆರಿಕದ ಹಿಂದೂ ದೇವಾಲಯದ ಮೇಲೆ ದಾಳಿ ಸಂಚು: ಯುವ ಪೀಳಿಗೆಯ ಬಗ್ಗೆ ಸದ್ಗುರು ಕಳವಳ, ದ್ವೇಷದ ವಿರುದ್ಧ ಎಚ್ಚರಿಕೆ
“ನಿಮ್ಮ ಚಟುವಟಿಕೆಯ ಸ್ವರೂಪ ಏನೇ ಇರಲಿ, ವ್ಯಾಪಾರ, ಕಲೆ, ಸಂಗೀತ, ಕ್ರೀಡೆ, ರಾಜಕೀಯ ಅಥವಾ ಆಧ್ಯಾತ್ಮಿಕತೆ ನಿಮ್ಮನ್ನು ಸಾಧ್ಯವಾದಷ್ಟು ಉನ್ನತ ಮಟ್ಟದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ” ಎಂದು ಸದ್ಗುರು ಸಭಿಕರಿಗೆ ತಿಳಿಸಿದರು.
ಇಂದಿನಿಂದ 3 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಭಾಷಣಕಾರರ ಪೈಕಿ ಸುದೀಪ್ತಾ ಭಟ್ಟಾಚಾರ್ಯ (ಅದಾನಿ ಗ್ರೂಪ್‌ನ ಸಿಇಒ), ಡಾ. ಸಂಗೀತಾ ರೆಡ್ಡಿ (ಅಪೋಲೋ ಹಾಸ್ಪಿಟಲ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ), ಅಭಿಮನ್ಯು ಮುಂಜಾಲ್ (ಹೀರೋ ಫಿನ್‌ಕಾರ್ಪ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ) ಮತ್ತು ಮುರುಗವೇಲ್ ಜಾನಕಿರಾಮನ್ (Matrimony.com ಸಂಸ್ಥಾಪಕ ಮತ್ತು ಸಿಇಒ) ಪ್ರಮುಖರು.
ಇದನ್ನೂ ಓದಿ: ‘ಕಣ್ಮರೆಯಾಗುತ್ತಿರುವ ಮುಖಗಳು’; ಹಿಮಾಲಯದ ಜನರ ಕುರಿತ ಸದ್ಗುರು ಫೋಟೋ ಪುಸ್ತಕ ಬಿಡುಗಡೆ
ಇವರೊಂದಿಗೆ ಮಧು ಕೇಲಾ (ಎಂಕೆ ವೆಂಚರ್ಸ್ ಸಂಸ್ಥಾಪಕ), ಶ್ರೀನಾಥ್ ರವಿಚಂದ್ರನ್ (ಅಗ್ನಿಕುಲ್ ಕಾಸ್ಮೋಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ), ಕೃತಿಕಾ ಕುಮಾರನ್ (ವಿಲ್ವಾ ಸ್ಟೋರ್ ಸಂಸ್ಥಾಪಕಿ ಮತ್ತು ಸಿಇಒ) ಮತ್ತು ರಾಹುಲ್ ಗರ್ಗ್ (Moglix.com ಮತ್ತು Credlix.com ಸಂಸ್ಥಾಪಕ) ಕೂಡ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
2012ರಲ್ಲಿ ಸದ್ಗುರು ಅವರಿಂದ ಸ್ಥಾಪಿಸಲ್ಪಟ್ಟ ಸದ್ಗುರು ಅಕಾಡೆಮಿಯ ಹಿಂದಿನ ಆವೃತ್ತಿಗಳಲ್ಲಿ ಈ ಪ್ರಮುಖ ಕಾರ್ಯಕ್ರಮವು ದಿವಂಗತ ರತನ್ ಟಾಟಾ, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ, ಮೇಕ್‌ಮೈಟ್ರಿಪ್ ಸಹ-ಸಂಸ್ಥಾಪಕ ದೀಪ್ ಕಲ್ರಾ, ಇಸ್ರೋ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮತ್ತು ಟೈಟಾನ್ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಾಮನ್ ಅವರಂತಹ ಪ್ರಮುಖ ಗಣ್ಯರನ್ನು ಆತಿಥ್ಯ ವಹಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




