AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

97ನೇ ವಯಸ್ಸಿನಲ್ಲೂ ಓಟದ ಹುಮ್ಮಸ್ಸು: ಬೆಂಗಳೂರಿನ ‘ಮ್ಯಾರಥಾನ್ ತಾತ’ ಎನ್.ಎಸ್. ದತ್ತಾತ್ರೇಯ ಸ್ಫೂರ್ತಿದಾಯಕ ಕಥೆ!

ಬೆಂಗಳೂರಿನ 97 ವರ್ಷದ ವೃದ್ಧ ಎನ್.ಎಸ್. ದತ್ತಾತ್ರೇಯ ತಮ್ಮ 90ನೇ ವಯಸ್ಸಿನಲ್ಲಿ ಮ್ಯಾರಥಾನ್ ಆರಂಭಿಸಿ 300ಕ್ಕೂ ಹೆಚ್ಚು ಓಟಗಳನ್ನು ಪೂರ್ಣಗೊಳಿಸಿದ್ದಾರೆ. ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಈ 'ಮ್ಯಾರಥಾನ್ ತಾತ' ಯುವ ಪೀಳಿಗೆಗೆ ಆರೋಗ್ಯ ಹಾಗೂ ಫಿಟ್‌ನೆಸ್ ಜಾಗೃತಿ ಮೂಡಿಸುತ್ತಿರುವ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

97ನೇ ವಯಸ್ಸಿನಲ್ಲೂ ಓಟದ ಹುಮ್ಮಸ್ಸು: ಬೆಂಗಳೂರಿನ ‘ಮ್ಯಾರಥಾನ್ ತಾತ’ ಎನ್.ಎಸ್. ದತ್ತಾತ್ರೇಯ ಸ್ಫೂರ್ತಿದಾಯಕ ಕಥೆ!
ಎನ್.ಎಸ್. ದತ್ತಾತ್ರೇಯ
ಭಾವನಾ ಹೆಗಡೆ
|

Updated on: Jul 29, 2026 | 12:49 PM

Share

ಮುಖ್ಯಾಂಶಗಳು

  • 90ನೇ ವಯಸ್ಸಿನಲ್ಲಿ ಮ್ಯಾರಥಾನ್ ಪಯಣ ಆರಂಭಿಸಿ 300ಕ್ಕೂ ಹೆಚ್ಚು ಓಟ ಪೂರ್ಣಗೊಳಿಸಿದ 97ರ ವೃದ್ಧ ದತ್ತಾತ್ರೇಯ.
  • ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಹಲವು ಸ್ವರ್ಣ ಪದಕಗಳ ಸಾಧನೆ.
  • ಯುವಜನತೆಗೆ ದೈಹಿಕ ಚಟುವಟಿಕೆ ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಕರೆ.

ಬೆಂಗಳೂರು, ಜುಲೈ 29: ಸಾಮಾನ್ಯವಾಗಿ 90 ವರ್ಷ ದಾಟಿದ ಮೇಲೆ ಹೆಚ್ಚಿನವರು ಮನೆಯಲ್ಲೇ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆದರೆ ಬೆಂಗಳೂರಿನ 97 ವರ್ಷದ ವೃದ್ಧ ಎನ್.ಎಸ್. ದತ್ತಾತ್ರೇಯ (N S Dattatreya) ಅವರಿಗೆ ಓಟದ ಅಂಗಳದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ತಮ್ಮ 90ನೇ ವಯಸ್ಸಿನಲ್ಲಿ ಓಟ ಆರಂಭಿಸಿದ ಈ ‘ಮ್ಯಾರಥಾನ್ ತಾತ’, ಇಂದು ದೇಶಾದ್ಯಂತ ಸಾವಿರಾರು ಯುವಕರಿಗೆ ದೈಹಿಕ ಫಿಟ್‌ನೆಸ್‌ಗೆ ದಾರಿದೀಪವಾಗಿದ್ದಾರೆ.

90ನೇ ವಯಸ್ಸಿನಲ್ಲಿ ಆರಂಭವಾದ ಅದ್ಭುತ ಪಯಣ

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (SBM) ಮಾಜಿ ಮ್ಯಾನೇಜರ್ ಆಗಿರುವ ದತ್ತಾತ್ರೇಯ ಅವರು 1989ರಲ್ಲಿ ನಿವೃತ್ತರಾಗಿದ್ದರು. 2019ರ ಜನವರಿಯಲ್ಲಿ ನಡೆದ ‘ನಮೋಥಾನ್’ ಓಟದಲ್ಲಿ ಪಾಲ್ಗೊಂಡು ಸನ್ಮಾನಿತರಾದ ನಂತರ, 90ನೇ ವಯಸ್ಸಿನಲ್ಲಿ ಓಡಲು ಸಾಧ್ಯವಾದರೆ ಸುಮ್ಮನೆ ಏಕೆ ಕುಳಿತುಕೊಳ್ಳಬೇಕು? ಎಂಬ ಆಲೋಚನೆ ಅವರಲ್ಲಿ ಮೂಡಿತು. ಅಲ್ಲಿಂದ ಪ್ರಾರಂಭವಾದ ಅವರ ಎರಡನೇ ಇನಿಂಗ್ಸ್‌ನಲ್ಲಿ ಈವರೆಗೆ 300ಕ್ಕೂ ಹೆಚ್ಚು ಮ್ಯಾರಥಾನ್, ವಾಕಥಾನ್ ಮತ್ತು ಫಿಟ್‌ನೆಸ್ ಸ್ಪರ್ಧೆಗಳನ್ನು ಪೂರ್ಣಗೊಳಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವರ್ಣ ಪದಕಗಳ ಸಾಧನೆ

ಕೇವಲ ಸ್ಥಳೀಯ ಓಟಗಳಲ್ಲದೆ, ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ 2019ರ ಮಲೇಷ್ಯಾ ಕೂಟದಲ್ಲಿ 5 ಚಿನ್ನದ ಪದಕ ಹಾಗೂ 2025ರ ಚೆನ್ನೈ ಕೂಟದಲ್ಲಿ 4 ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ 28ಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಆರೋಗ್ಯವೇ ಭಾಗ್ಯ’ – ಯುವಜನತೆಗೆ ನೀಡಿದ ಸಂದೇಶ

ದಿನವೂ ವಾಕಿಂಗ್, ರನ್ನಿಂಗ್, ಟ್ರೆಡ್‌ಮಿಲ್ ಮತ್ತು ಸೈಕ್ಲಿಂಗ್ ಮಾಡುವ ದತ್ತಾತ್ರೇಯ ಅವರು ಶುದ್ಧ ಸಸ್ಯಾಹಾರಿ. “ಆರೋಗ್ಯವೇ ನಿಜವಾದ ಸಂಪತ್ತು. ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಶ್ರೇಷ್ಠ ಕೊಡುಗೆ ಎಂದರೆ ಉತ್ತಮ ಶಿಕ್ಷಣ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳ ಮೇಲೆ ಹೊರೆಯಾಗದಂತೆ ತಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು” ಎಂದು ಅವರು ಯುವ ಪೀಳಿಗೆಗೆ ಕಿವಿಮಾತು ಹೇಳುತ್ತಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ