ಟಾಸ್ಕ್ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಮೊದಲ ವಾರವೇ ಸುಸ್ತು?
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಗಾನವಿ ಗೌಡ ಮೊದಲ ವಾರದಲ್ಲೇ ಹಿನ್ನಡೆ ಅನುಭವಿಸಿದ್ದಾರೆ. ಟಾಸ್ಕ್ ವಿಚಾರದಲ್ಲಿ ಸ್ವಂತ ತಂಡದವರೊಂದಿಗೇ ವೈರತ್ವ ಕಟ್ಟಿಕೊಂಡಿದ್ದು, ಅವರ ಸಹಸ್ಪರ್ಧಿಗಳೇ ಆಕೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇದರಿಂದ ಗಾನವಿ ಗೌಡ ಬಿಗ್ ಬಾಸ್ ಆಟದ ಆರಂಭದಲ್ಲೇ ಸುಸ್ತಾದಂತೆ ಕಾಣಿಸುತ್ತಿದ್ದಾರೆ.
ಬಿಗ್ ಬಾಸ್ ಉಳಿದ ರಿಯಾಲಿಟಿ ಶೋಗಳಂತೆ ಅಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತದೆ. ಉಳಿದ ಶೋಗಳಲ್ಲಿ ಅದ್ಭುತ ಆಟ ಪ್ರದರ್ಶನ ನೀಡಿ ಬಂದವರು ಇಲ್ಲಿ ನಡುಗಿ ಹೋದ ಸಾಕಷ್ಟು ಉದಾಹರಣೆ ಇದೆ. ಈಗ ಗಾನವಿ ಗೌಡ ಕೂಡ ಇದೇ ಸಾಲಿಗೆ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಹಳ್ಳಿ ಪವರ್ ಶೋನಲ್ಲಿ ಪವರ್ಫುಲ್ ಆಟ ಪ್ರದರ್ಶನ ನೀಡಿದ್ದರು ಗಾನವಿ. ಈಗ ಬಿಗ್ ಬಾಸ್ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಅವರ ಎಂಟ್ರಿ ಆಗಿದೆ. ಇವರು ಮೊದಲ ವಾರವೇ ಸುಸ್ತಾದರೇ ಎನ್ನುವ ಪ್ರಶ್ನೆ ಮೂಡಿದೆ. ಅವರ ವಿರುದ್ಧ ಅವರದ್ದೇ ತಂಡವೇ ನಿಂತಿದೆ. ಟಾಸ್ಕ್ ಆಡುವ ವಿಷಯಕ್ಕೆ ನಡೆದ ಕಿರಕ್ನಲ್ಲಿ ಅವರು ಸುಸ್ತಾದರೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

