Viral Video: ಜಗಳವಾಡುತ್ತಾ ಹುಲಿಯನ್ನು ಕಚ್ಚಿದ ನಾಯಿ; ಹುಲಿ ಏನು ಮಾಡಿತು ನೋಡಿ
ಹುಲಿ ಮತ್ತು ನಾಯಿಯ ನಡುವಿನ ಕಾಳಗವಿದು. ಹುಲಿಯ ಕತ್ತನ್ನು ಕಚ್ಚಿ ಎಳೆದ ನಾಯಿಗೆ ಹುಲಿಯ ಕೈಯಿಂದ ಒಂದೇಟು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹುಲಿಗಳು ನಾಯಿಗಳ ಮೇಲೆ ಹೆಚ್ಚಾಗಿ ದಾಳಿ ನಡೆಸುತ್ತವೆ. ಕೆಲವೊಮ್ಮೆ ಜೊತೆಯಾಗಿ ಕಾಣಿಸಿಕೊಂಡೂ ಸಹ ಇವುಗಳು ಪರಸ್ಪರ ವೈರಿಗಳಂತೆ. ನೀವು ಹುಲಿ ನಾಯಿಯೊಂದಿಗೆ ಜಗಳವಾಡುವುದನ್ನು ನೋಡಿರುತ್ತೀರಿ. ಆದರೆ ನಾಯಿಯು ಹುಲಿಯೊಂದಿಗೆ ಜಗಳವಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲವಾದರೆ ವಿಡಿಯೋವೊಂದು ನಿಮಗಾಗಿ ಕಾಯುತ್ತಿದೆ. ಅಂತರ್ಜಾಲದಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದು ನಾಯಿ ಮತ್ತು ಹುಲಿಯ ನಡುವೆ ನಡೆದ ಕಾಳಗವನ್ನು ತೋರಿಸುತ್ತದೆ. ಈ ವಿಡಿಯೋವನ್ನು animals_powers ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 18 ಸಾವಿರಕ್ಕೂ ಹೆಚ್ಚು ಲೈಕ್ಗಳು, 4.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ. ವಿಡಿಯೋ ನೋಡಿದ ಒಂದಷ್ಟು ಮಂದಿ ಅಚ್ಚರಿಗೊಂಡಿದ್ದಾರೆ.
ಎರಡು ದಿನಗಳ ಹಿಂದೆ ಅನಿಮಲ್ಸ್ ಪವರ್ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಿಂದ ಹಂಚಿಕೊಂಡ ವೀಡಿಯೊದಲ್ಲಿ ಗೋಲ್ಡನ್ ರಿಟ್ರೈವರ್ ನಾಯಿ ಹುಲಿಯ ಕತ್ತನ್ನು ಕಚ್ಚುವುದನ್ನು ಕಾಣಬಹುದು. ಇವುಗಳ ಪಕ್ಕವೇ ಸಿಂಹವೊಂದು ಕುಳಿತಿರುತ್ತದೆ. ಇದು ಹುಲಿ ಮತ್ತು ನಾಯಿ ನಡುವಿನ ಜಗಳವನ್ನು ನೋಡಿಯೂ ನೋಡದಂತೆ ಇದ್ದುಬಿಡುತ್ತದೆ. ನಾಯಿ ಹುಲಿಯ ಕತ್ತನ್ನು ಕಚ್ಚಿ ಎಳೆಯುತ್ತಿದ್ದಾಗ ನೋವು ಅನುಭವಿಸಿದ ಹುಲಿರಾಯನು, ನಾಯಿಗೆ ಹೊಡೆಯುತ್ತದೆ. ಆದರೂ ನಾಯಿ ಕಚ್ಚಿ ಎಳೆಯುವುದನ್ನು ಮುಂದುವರಿಸುವುದನ್ನು ನೋಡಬಹುದು. ಆದರೆ ಇವೆರೆಡರ ನಡುವಿನ ಕಾಳದಲ್ಲಿ ಕೊನೆಯಲ್ಲಿ ಯಾರು ಗೆದ್ದರು ಎಂಬುದು ವಿಡಿಯೋದಲ್ಲಿ ಕಾಣವುದಿಲ್ಲ.
ವಿಡಿಯೋ ನೋಡಿದ ನೆಟ್ಟಿಗರನ್ನು ಅಚ್ಚರಿ ಹಾಗೂ ಬೆರಗು ಗೊಳಿಸಿದೆ. ಅದರಂತೆ ಅನೇಕರು ಕಾಮೆಂಟ್ಗಳನ್ನು ಮಾಡಿದ್ದು, ‘‘ಒಂದು ದಿನ ಅದು ಬದಲಾಗಲಿದೆ‘‘ ಒಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ‘ವಿಶ್ವಾಸ‘ ಎಂದು ಬರೆದು ನಗುವ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ.
View this post on Instagram
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Sun, 9 October 22