ಇಲ್ಲಿರುವ ‘8’ರ ನಡುವೆ ಅದೆಷ್ಟು ‘9’ ಅಡಗಿವೆ?; ವಿವೇಕ ಬಿಂದ್ರಾ ಕೇಳುತ್ತಿದ್ದಾರೆ
Brain Teaser : ನಿಮ್ಮ ಗೆಳತಿಯ ಮೂಡ್ ಸರಿ ಇಲ್ಲವೆ? ಗೆಳೆಯ ಕೋಪಿಸಿಕೊಂಡಿದ್ದಾನೆಯೆ? ಮಕ್ಕಳು ಹಟ ಮಾಡುತ್ತಿವೆಯೇ? ಅಜ್ಜಿ ಬೇಸರಿಕೊಂಡಿದ್ದಾರೆಯೆ? ಹಾಗಿದ್ದರೆ ಈ ಬ್ರೇನ್ ಟೀಸರ್ ತೋರಿಸಿ 10 ಸೆಕೆಂಡುಗಳಲ್ಲಿ ಉತ್ತರ ಕಂಡುಹಿಡಿಯಲು ಹೇಳಿ.
Trending : ಮೋಟಿವೇಷನಲ್ ಸ್ಪೀಕರ್ ವಿವೇಕ ಬಿಂದ್ರಾ ನೆಟ್ಟಿಗರಿಗೆ ಸವಾಲನ್ನು ಒಡ್ಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬ್ರೇನ್ ಟೀಸರ್ ಅನ್ನು ಪೋಸ್ಟ್ ಮಾಡಿದ ಅವರು, ಇಲ್ಲಿರುವ ‘8’ಗಳಲ್ಲಿ ಎಷ್ಟು ‘9’ ಅಡಗಿವೆ ಎಂದು ಕೇಳಿದ್ದಾರೆ. ಇಷ್ಟೊಂದು ಎಂಟುಗಳ ನಡುವೆ ಅಲ್ಲೆಲ್ಲೋ ಅಡಗಿರುವ ಒಂಬತ್ತನ್ನು ಹುಡುಕುವುದು ಕಷ್ಟವೆ? ಅಂತೂ ಸಾಕಷ್ಟು ಜನ ಕಮೆಂಟ್ ಮಾಡಿ ಉತ್ತರಿಸಿದ್ದಾರೆ. ಈ ಪೋಸ್ಟ್ ಹಂಚಿಕೊಂಡಾಗಿನಿಂದ ಈತನಕ 3,5000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 400ಕ್ಕೂ ಹೆಚ್ಚು ಜನ ಉತ್ತರಿಸಿದ್ದಾರೆ ಮತ್ತು 350ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.
कमेंट करके ज़रूर बताये। #VBQuiz #GuessTheNumber pic.twitter.com/1rSiglAXVD
ಇದನ್ನೂ ಓದಿ— Dr. Vivek Bindra (@DrVivekBindra) October 19, 2022
ಹತ್ತು ಸೆಕೆಂಡುಗಳಲ್ಲಿ ಮೂರು 9 ಗಳನ್ನು ಗುರುತಿಸಲು ಸಾಧ್ಯವಾಯಿತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ನನಗೆ 9 ಕಾಣಿಸುತ್ತಲೇ ಇಲ್ಲ. ಹಾಗಿದ್ದರೆ ನಾನು ಕಣ್ಣಿನ ಪರೀಕ್ಷೆ ಮಾಡಬೇಕೆ? ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು ನನಗೆ ನಾಲ್ಕು 9 ಕಂಡವು ಎಂದಿದ್ದಾರೆ.
ಕೆಲಸ ಮಾಡಿ ತಲೆ ಭಾರವಾದಾಗ, ಯೋಚಿಸಿ ಯೋಚಿಸಿ ಮನಸ್ಸು ಪಾತಾಳಕ್ಕಿಳಿದಾಗ ಮತ್ತು ನಿಮ್ಮ ಮನೆಯ ಮಕ್ಕಳು ಬಹಳ ಕಿರಿಕಿರಿ ಮಾಡುತ್ತಿದ್ದಾಗ, ಮನೆಯ ಹಿರಿಯರು ಬೇಸರದಲ್ಲಿದ್ದಾಗ, ನಿಮ್ಮ ಪ್ರೇಮಿ ಮುನಿಸಿಕೊಂಡಿದ್ದಾಗ ಇಂಥ ಬ್ರೇನ್ ಟೀಸರ್ಗಳನ್ನು ತೋರಿಸಿ. ನೋಡಿ ತತ್ಕ್ಷಣವೇ ಅವರ ಮೂಡ್ ಹೇಗೆ ಶಿಫ್ಟ್ ಆಗುತ್ತದೆ ಎಂದು.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:22 pm, Thu, 20 October 22