70ರ ಮದುಮಗ 20ರ ಮದುಮಗಳು; ಮದುವೆಗಳು ಭೂಮಿಯ ಮೇಲೆಯೇ ಹೀಗೆ ನಿಶ್ಚಯಿಸಿಯೇ ನಡೆಯುತ್ತವೆ

Marriage : ಒಟ್ಟಿನಲ್ಲಿ ಮದುವೆಯಂತೂ ಆಗಿ ಹೋಗಿದೆ. ಕರೆದವರು ಹೋಗಿ ಊಟ ಮಾಡಿ ಹರಸಿ ಬಂದಿದ್ದಾರೆ. ಇನ್ನು ಅವಳುಂಟು ಅವನುಂಟು ಮತ್ತು ಪದೇಪದೇ ನೋಡುವ ನೀವುಂಟು. ಎಲ್ಲ ಮನುಷ್ಯರಾಟ! ಪಾಪ ದೇವರು.

70ರ ಮದುಮಗ 20ರ ಮದುಮಗಳು; ಮದುವೆಗಳು ಭೂಮಿಯ ಮೇಲೆಯೇ ಹೀಗೆ ನಿಶ್ಚಯಿಸಿಯೇ ನಡೆಯುತ್ತವೆ
70 yrs old groom married 20 yrs old bride
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 20, 2022 | 2:17 PM

Viral Video : ಯಾರು ಯಾರನ್ನು ಎಲ್ಲಿ ಯಾಕೆ ಯಾವಾಗ ಯಾತಕ್ಕೋಸ್ಕರ ಮದುವೆಯಾಗುತ್ತಾರೆ ಎನ್ನುವುದು ಅವರವರ ವೈಯಕ್ತಿಕ. ಮದುವೆಯಾಗುವವರು ಕರೆಯೋಲೆ ಕೊಟ್ಟರೆ ಹೋಗಿ ಹರಸಿ ಬರಬೇಕು. ಉಳಿದಂತೆ ಬಹಳ ಯೋಚಿಸಬಾರದು ನಿಜ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡುತ್ತಿದ್ದಂತೆ ಉದ್ಭವಿಸುವ ಪ್ರಶ್ನೆಗಳನ್ನು ಅದುಮಿಡಲಾದೀತೆ? ವರನಿಗೆ ವಯಸ್ಸು 70. ವಧುವಿಗೆ 20. ಇಷ್ಟು ಚಿಕ್ಕ ವಯಸ್ಸಿನ ಹುಡುಗಿಯನ್ನು ಇಷ್ಟು ವಯಸ್ಸಾದ ವ್ಯಕ್ತಿ ಹೇಗೆ ಮದುವೆಯಾದ? ಹೇಗೆಂದರೆ ಹೀಗೆ… ನೋಡಿ ವಿಡಿಯೋ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Bhutni_ke (@bhutni_ke_memes)

ನೆಟ್ಟಿಗರಂತೂ ಈ ವಿಡಿಯೋ ನೋಡಿ ನೋಡಿ ಹೌಹಾರುತ್ತಿದ್ದಾರೆ. ಅಂಥ ಏನು ಕಾರಣವಿತ್ತು ಈ ಹುಡುಗಿಗೆ ಇಷ್ಟು ವಯಸ್ಸಾದವನೊಂದಿಗೆ ಮದುವೆಯಾಗುವುದು ಎಂದು ಚಡಪಡಿಸುತ್ತಿದ್ದಾರೆ. ಒಮ್ಮೆ ಆಕೆಯ ಮುಖ ನೋಡಿ ಎಂಥ ಸಂತುಷ್ಟತೆ, ಹಾಗೆ ಈ ವರನ ಮುಖ ನೋಡಿ, ಆಹಾ ಎಂಥ ಶಾಂತತೆ. ನೆಟ್ಟಿಗರಂತೂ ಹೇಳಬಾರದ್ದನ್ನೆಲ್ಲ ಹೇಳುತ್ತಿದ್ದಾರೆ ಪ್ರತಿಕ್ರಿಯೆಗಳ ಮೂಲಕ. ‘ಅಲ್ಲಾ ಈ ಹುಡುಗಿ ಇಷ್ಟೊಂದು ಖುಷಿಯಿಂದ ಕುಳಿತಿರುವುದಕ್ಕೆ ಅಂಥಾ ಕಾರಣ ಏನಿರಬಹುದು?’ ಎಂದು ನೆಟ್ಟಿಗರೊಬ್ಬರು ಭಾರೀ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ‘ಪ್ರಸ್ತದ ಕಥೆ ಎಂತೋ’ ಎಂದು ಕತೂಹಲಿಯಾಗಿದ್ದಾರೆ ಇನ್ನೂ ಒಬ್ಬರು. ‘ಎಂಥಾ ಚೆಂದದ ಹುಡುಗಿ, ಇವಳಿಗೆ ಬೇರೆ ಯಾರೂ ಸಿಗಲಿಲ್ಲವಾ, ಎಂತ ಕಥೆ ಇವಳದು?’ ಎಂದು ಮತ್ತೊಬ್ಬರು ಸಂಕಟಪಟ್ಟಿದ್ದಾರೆ. ‘ಸುಮ್ಮನಿರಿ ಸಾಕು, ಮದುವೆಗೆ ವಯಸ್ಸು ಮುಖ್ಯ ಅಲ್ಲ ಮನಸ್ಸು’ ಎಂದು ಸಮಾಧಾನಿಸಿದ್ದಾರೆ ಯಾರೋ ಹೀಗೊಬ್ಬರು.

ಇವರ ವೇಷಭೂಷಣ ನೋಡುತ್ತಿದ್ದರೆ ಇವರು ಪಕ್ಕಾ ಉತ್ತರಭಾರತದವರೇ. ಅಲ್ಲಿ ಸಂಸಾರಗಳನ್ನು ಸಲುಹಲು ಹೀಗೆ ಮೂರು ಮೂರು ಮದುವೆಯಾಗುವ ಕ್ರಮ ಬೇರೆ ಇದೆ. ಈತನಿಗೆ ಈಗಾಗಲೇ ಹೆಂಡತಿಯರಿದ್ದಾರೋ ಇಲ್ಲವೋ ಅಥವಾ ಜೀವನದಲ್ಲಿ ಮೊದಲ ಬಾರಿಗೆ ಮದುವೆಯಾಗುತ್ತಿದ್ದಾನೋ ಏನೊಂದೂ ಮಾಹಿತಿ ಇಲ್ಲ.

ಒಟ್ಟಿನಲ್ಲಿ ಮದುವೆಯಂತೂ ಆಗಿ ಹೋಗಿದೆ. ಕರೆದವರು ಹೋಗಿ ಊಟ ಮಾಡಿ ಹರಸಿ ಬಂದಿದ್ದಾರೆ. ಇನ್ನು ಅವಳುಂಟು ಅವನುಂಟು ಮತ್ತು ಪದೇಪದೇ ನೋಡುವ ನೀವುಂಟು. ಎಲ್ಲ ಮನುಷ್ಯರಾಟ! ಪಾಪ ದೇವರು.

ಹೀಗವಳನ್ನು ಹರಕೆಯ ಕುರಿಯನ್ನಾಗಿಸಿದವರಿಗೆ ಏನಂತ ಹೇಳುವುದು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:57 pm, Thu, 20 October 22

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ