AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಳಿಗೆ​ ಮೇಲೆ ಯುವತಿಯ ‘ರಂಗೀಲೊ ಮಾರೋ ಢೋಲನಾ’ದ ರಂಗು

Rangilo Maro Dholna : 23 ವರ್ಷಗಳಿಂದಲೂ ಕೇಳಿಬರುತ್ತಿರುವ ಈ ಹಾಡು ನೆನಪಿದೆಯಾ? ಶಾಲಾಕಾಲೇಜು ವಾರ್ಷಿಕೋತ್ಸವದ ರಾಷ್ಟ್ರಗೀತೆಯಂತೆ ಪ್ರಸಿದ್ಧವಾಗಿತ್ತು. ಈಗ ಈ ಹಾಡಿಗೆ ನರ್ತಿಸಿದ ಈ ಯುವತಿಯ ಎನರ್ಜಿ ಲೆವೆಲ್ ನೋಡಿ.

ಮಾಳಿಗೆ​ ಮೇಲೆ ಯುವತಿಯ ‘ರಂಗೀಲೊ ಮಾರೋ ಢೋಲನಾ’ದ ರಂಗು
Woman Dances Joyfully to Rangilo Maro Dholna on Terrace
TV9 Web
| Edited By: ಶ್ರೀದೇವಿ ಕಳಸದ|

Updated on:Oct 20, 2022 | 12:15 PM

Share

Viral Video : ಕಲೆ ಇರುವುದೇ ಸಂತೋಷ ಪಡೆಯುವುದಕ್ಕೆ. ಕಲೆಯ ಕಲಿಕೆಗೆ ವಯಸ್ಸು ಎಂದೂ ಸಮಸ್ಯೆ ಅಲ್ಲ. ಹಾಗೆ ಪ್ರದರ್ಶನಕ್ಕೂ. ಪ್ರದರ್ಶನದ ಬಗ್ಗೆ ಯೋಚಿಸಿದರೆ ಇಂದು ದೊಡ್ಡ ದೊಡ್ಡ ವೇದಿಕೆಯೇ ಆಗಬೇಕಂತಿಲ್ಲ. ಎಲ್ಲಿರುತ್ತೀರೋ ಅಲ್ಲಿಂದಲೇ ನರ್ತಿಸಿ ಸಾಮಾಜಿಕ ಜಾಲತಾಣಗಳಿಗೆ ರೀಲ್​ ಮಾಡಿ ಹಾಕಬಹುದು. ನೆಟ್ಟಿಗರೇ ವೀಕ್ಷಕಪ್ರಭುಗಳು. ಅಂತಿಮವಾಗಿ ಕಲೆಯ ಸಾರ್ಥಕತೆ ಏನು? ಖುಷಿಪಡು, ಖುಷಿಪಡಿಸು. ಇದು ಸಂವಾದಮುಖಿ. ಸುಮಾರು 23 ವರ್ಷಗಳಿಂದಲೂ ಕೇಳಿಬರುತ್ತಿರುವ ಸೂಪರ್ ಹಿಟ್ ಹಾಡು ‘ರಂಗೀಲೋ ಮಾರೋ ಢೋಲನಾ’ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಶುಭಾ ಮುದ್ಗಲ್ ಮತ್ತು ಗಾಯಕ ಸುಖ್ವಿಂದರ್ ಸಿಂಘ್​ ಹಾಡಿರುವ ಹಾಡಿದು. ಶಾಲಾಕಾಲೇಜು ವಾರ್ಷಿಕೋತ್ಸವದ ರಾಷ್ಟ್ರಗೀತೆ ಎಂಬಂತೆ ಇದು ಜನಜನಿತವಾಗಿತ್ತು. ಈ ಹಾಡಿಗೆ ನರ್ತಿಸಿದ್ದಾಳೆ ಈ ಯುವತಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Pranalimusic (@pranalimusic)

ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೀಗೆ ಖಾತೆದಾರರು ನಿಯಮಿತವಾಗಿ ರೀಲ್ಸ್ ಮಾಡುತ್ತಿರುತ್ತಾರೆ. Pranalimusic and Dheerajpatil ಎಂಬ ಇನ್​ಸ್ಟಾಗ್ರಾಂ ಪುಟವನ್ನು ನಿರ್ವಹಿಸುತ್ತಿರುವ ಈ ಯುವತಿ ಹೀಗೆ ಟೆರೇಸ್​ ಮೇಲೆ ಹೋಗಿ ಶುಭಾ ಮುದ್ಗಲ್ ಅವರ ಹಾಡಿಗೆ ನರ್ತಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಇದು ನಾನು ಬಾಲ್ಯದಲ್ಲಿ ಕೇಳುತ್ತಿದ್ದ ನನ್ನ ಮೆಚ್ಚಿನ ಹಾಡು ಎಂದು ಕ್ಯಾಪ್ಷನ್ ಸೇರಿಸಿದ್ದಾರೆ. ಈ ವಿಡಿಯೋ 38,000ಕ್ಕೂ ಹೆಚ್ಚು ಜನರಿಗೆ ಇಷ್ಟವಾಗಿದೆ. ಬಹಳ ಚೆನ್ನಾಗಿ ಡ್ಯಾನ್ಸ್​ ಮಾಡಿದ್ದೀರಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದ್ದೀರಿ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ವಾವ್​ ನಿಮ್ಮ ನೃತ್ಯ ಬಹಳ ಚೆನ್ನಾಗಿದೆ, ಸದಾ ಸುಖಿಯಾಗಿರಿ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಎನರ್ಜಿ ಲೆವಲ್​ ಬಹಳ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದಿದ್ದಾರೆ ಮಗದೊಬ್ಬರು.

ಹಾಡು ಹಳೆಯದಾದರೇನು ಭಾವ ನವನವೀನ ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:08 pm, Thu, 20 October 22

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!