ಕೇರಳದಲ್ಲಿ ದೀಪಾವಳಿಯನ್ನು ಅಷ್ಟೊಂದು ಸಂಭ್ರಮದಿಂದ ಆಚರಿಸುವುದಿಲ್ಲ, ಕಾರಣ ಇಲ್ಲಿದೆ

Kerala : ಕೇರಳವು ವಿವಿಧ ಸಮುದಾಯಗಳಿಂದ ಕೂಡಿದ್ದು ಬಹುಮುಖಿ ಸಂಸ್ಕೃತಿಯನ್ನು ಹೊಂದಿದೆ. ಹಾಗಾಗಿ ಇಲ್ಲಿ ಹಬ್ಬಗಳ ಮಹತ್ವ, ಆಚರಣೆ ಕೂಡ ಉತ್ತರ ಭಾರತದ ವೈದಿಕ ಸಂಸ್ಕೃತಿಗಿಂತ ವಿಭಿನ್ನವಾಗಿರುತ್ತದೆ.

ಕೇರಳದಲ್ಲಿ ದೀಪಾವಳಿಯನ್ನು ಅಷ್ಟೊಂದು ಸಂಭ್ರಮದಿಂದ ಆಚರಿಸುವುದಿಲ್ಲ, ಕಾರಣ ಇಲ್ಲಿದೆ
Why the festival of lights is not celebrated widely in Kerala
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 20, 2022 | 1:13 PM

Trending : ನಮ್ಮ ಭಾರತ ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ದೇಶ. ವಿವಿಧ ಭಾಷೆ, ಆಚರಣೆ, ಪ್ರತೀತಿಗಳಿಂದ ಕೂಡಿದ ವೈವಿಧ್ಯಮಯ ನೆಲ. ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆ, ಸಂಭ್ರಮ.  ಇನ್ನೇನು ದೀಪಾವಳಿ ಹತ್ತಿರದಲ್ಲಿಯೇ ಇದೆ. ಎಲ್ಲೆಡೆ ಈಗಾಗಲೇ ಜೋರು ತಯಾರಿ ಶುರುವಾಗಿದೆ. ಆದರೆ ಕೇರಳದಲ್ಲಿ ಮಾತ್ರ ದೀಪಾವಳಿಯನ್ನು ಅಷ್ಟೊಂದು ವಿಜೃಂಭಣೆಯಿಂದ ಆಚರಿಸುವ ಕ್ರಮ ಇಲ್ಲ. ಕೇರಳ ದಕ್ಷಿಣ ಭಾರತದ ಭಾಗವೇ ಆಗಿದ್ದರೂ ಕೂಡ ಅಕ್ಕಪಕ್ಕದ ರಾಜ್ಯಗಳು ಆಚರಿಸಿದಷ್ಟು ಜೋರಾದ ಸಂಭ್ರಮ ಅಲ್ಲಿರುವುದಿಲ್ಲ. ಇದಕ್ಕೆ ಇದರದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ. ಕೇರಳ ದ್ರಾವಿಡ ಸಂಸ್ಕೃತಿಯನ್ನು ಹೊಂದಿರುವುದೇ ಇದಕ್ಕೆ ಕಾರಣ.

ದಕ್ಷಿಣ ಭಾರತವು ದ್ರಾವಿಡ ಸಂಸ್ಕೃತಿಯನ್ನು ಅನುಮೋದಿಸಿದರೆ, ಉತ್ತರ ಭಾರತವು ವೈದಿಕ ಸಂಸ್ಕೃತಿಯಿಂದ ಪೋಷಿತವಾಗಿದೆ. ಕೇರಳವನ್ನು ಅಸುರ ರಾಜನಾದ ಮಹಾಬಲಿಯು ಆಳಿದನೆಂಬ ಪ್ರತೀತಿ ಪುರಾಣಗಳಲ್ಲಿದೆ. ಹಾಗಾಗಿ ಮಹಾಬಲಿಯ ನೆನಪಿಗಾಗಿ ಕೇರಳದಲ್ಲಿ ಆಚರಿಸುವ ಸಂಭ್ರಮದ ಮತ್ತು ದೊಡ್ಡ ಹಬ್ಬ ಓಣಂ. ಇನ್ನು ಉತ್ತರಭಾರತದಲ್ಲಿ ದೀಪಾವಳಿಯು, ರಾಮನು ರಾವಣನ ವಿರುದ್ಧ ವಿಜಯ ಸಾಧಿಸಿದುದನ್ನು ಸಾಂಕೇತಿಸುತ್ತದೆ. ಆದ್ದರಿಂದ ರಾಕ್ಷಸನ ಹತ್ಯೆಯನ್ನು ಮಲಯಾಳಿಗಳು ಸಂಭ್ರಮಿಸಲಾರರು ಹಾಗೆಯೇ ರಾಮನ ಪುನರಾಗಮನವನ್ನೂ ಸ್ವಾಗತಿಸಲಾರರು. ಆದರೆ ಕೃಷ್ಣನ ಆರಾಧಕರಾದ ಮಲಯಾಳಿಗಳು ಕೃಷ್ಣನು ನರಕಾಸುರನನ್ನು ವಧೆ ಮಾಡಿದ ಎನ್ನುವುದನ್ನು ಮಾತ್ರ ಒಪ್ಪುತ್ತಾರೆ.

ಕೇರಳವು ಹಿಂದೂ, ಕ್ರಿಶ್ಚಿಯನ್​, ಮುಸ್ಲಿಮ್​ ಮತ್ತು ಇತರೇ ಸಮುದಾಯದವರಿಂದ ಮಿಳಿತಗೊಂಡು ಬಹುಮುಖಿ ಸಂಸ್ಕೃತಿಯಿಂದ ರೂಪುಗೊಂಡಿದೆ. ಆ ಕಾರಣದಿಂದಾಗಿ ಇಲ್ಲಿಯ ಆಚರಣೆಗಳಿಗೆ ಅದರದೇ ಆದ ಹಿನ್ನೆಲೆ, ಮಹತ್ವ ಮತ್ತು ವೈಶಿಷ್ಟ್ಯ ಇದೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ಆಚರಿಸುವ ಹಬ್ಬಗಳೆಲ್ಲವನ್ನೂ ಇಲ್ಲಿ ಅಷ್ಟೇ ಸಂಭ್ರಮದಿಂದ ಆಚರಿಸುವ ಕ್ರಮ ಇಲ್ಲ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:55 pm, Thu, 20 October 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ