ದೀಪಾವಳಿ ನಾಲ್ಕ ದಿನಾ ಇರಾಕ್ ಒಬಾಮಾ ಬರಾಕ್; ಇಲ್ಲಿದೆ ನೆಟ್ಟಿಗರು ಎಬ್ಬಿಸಿದ ಮಜಕೂರ

Barack Obama : 2015ರ ಗಣರಾಜ್ಯೋತ್ಸವಕ್ಕೆ ದೆಹಲಿಗೆ ಆಗಮಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ, ‘ನಾನು ಮೋದಿಯವರಂತೆ ಕುರ್ತಾ ಧರಿಸಬೇಕು’ ಎಂದಿದ್ದರು. ಆ ಆಸೆ ನೆರವೇರಿತೋ ಬಿಟ್ಟಿತೋ, ಇಲ್ಲಂತೂ ಶೇರ್ವಾನಿ ತೊಟ್ಟಿದ್ದಾರೆ!

ದೀಪಾವಳಿ ನಾಲ್ಕ ದಿನಾ ಇರಾಕ್ ಒಬಾಮಾ ಬರಾಕ್; ಇಲ್ಲಿದೆ ನೆಟ್ಟಿಗರು ಎಬ್ಬಿಸಿದ ಮಜಕೂರ
This mannequin has an uncanny resemblance to Barack Obama
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 20, 2022 | 3:51 PM

Trending : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಅವರು ಶೇರ್ವಾನಿ ತೊಟ್ಟು ಯಾಕೆ ಹೀಗೆ ಗಂಭೀರವದನರಾಗಿದ್ದಾರೆ? ಅಳತೆ ಸರಿ ಹೋಗುತ್ತಿಲ್ಲವೆ, ಬಣ್ಣ ಇಷ್ಟವಾಗಿಲ್ಲವೆ, ಶೇರ್ವಾನಿ ನಿಮಗೊಪ್ಪುವುದಿಲ್ಲ ಎಂದು ಎದುರಿಗೆ ನಿಂತ ಮಿಶೆಲ್​ ಹೇಳುತ್ತಿದ್ದಾರೆಯೇ? ಅಥವಾ ಯಾವ ನಾಟಕಕ್ಕೆ ಬರಾಕ್​ ಹೀಗೆ ಬಣ್ಣ ಹಚ್ಚಿಕೊಂಡು ವೇಷ ತೊಟ್ಟುಕೊಂಡಿದ್ದೋ? ಒಟ್ಟಿನಲ್ಲಿ ಗೊಂದಲ ಉಂಟಾಗ್ತಿದೆಯಲ್ಲವಾ? ಹೌದು, ಶೇರ್ವಾನಿ ಧರಿಸಿರುವ ಈ ಆಕೃತಿಯ ಫೋಟೋ ಅಂತರ್ಜಾಲದಲ್ಲಿ ಓಡಾಡುತ್ತಿದ್ದಂತೆ, ‘ಓಹೋ ದೀಪಾವಳಿಗೆ ತಯಾರಾಗಿ ಬಂದಿದ್ದಾರಾ ಒಬಾಮಾ ಸಾಹೇಬ್ರು’ ಎಂದು ನೆಟ್ಟಿಗರು ತಮಾಷೆ ಮಾಡುತ್ತಾ ರೀಟ್ವೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
70ರ ಮದುಮಗ 20ರ ಮದುಮಗಳು; ಮದುವೆಗಳು ಭೂಮಿಯ ಮೇಲೆಯೇ ಹೀಗೆ ನಿಶ್ಚಯಿಸಿಯೇ ನಡೆಯುತ್ತವೆ
Image
ಕೇರಳದಲ್ಲಿ ದೀಪಾವಳಿಯನ್ನು ಅಷ್ಟೊಂದು ಸಂಭ್ರಮದಿಂದ ಆಚರಿಸುವುದಿಲ್ಲ, ಕಾರಣ ಇಲ್ಲಿದೆ
Image
ಮಾಳಿಗೆ​ ಮೇಲೆ ಯುವತಿಯ ‘ರಂಗೀಲೊ ಮಾರೋ ಢೋಲನಾ’ದ ರಂಗು
Image
‘ಕೇಕ್​ ಹೀಗೇ ತಿನ್ನಬೇಕು’ ಹೌದೌದು, ನಾವೂ ಪ್ರಯತ್ನಿಸುತ್ತೇವೆ ಎಂದ ನೆಟ್ಟಿಗರು

pic.twitter.com/4Zv32NXykn

400 ಜನರು ಈ ಪೋಸ್ಟ್​ ಅನ್ನು ರೀಟ್ವೀಟ್​ ಮಾಡಿ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಶೇರ್ವಾನಿ ಬಣ್ಣ ಸ್ವಲ್ಪ ಗಾಢವಾಯಿತಲ್ಲ?’ ಎಂದಿದ್ದಾರೆ ಒಬ್ಬರು. ಇನ್ನೂ ಒಬ್ಬರು ಬರಾಕ್​ ಒಬಾಮಾ ಅವರ ಕುಟುಂಬದ ಫೋಟೋ ಅನ್ನು ತಮಿಳಿನ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶಾಪ್​ ಮಾಡಿ ಟ್ವೀಟ್ ಮಾಡಿದ್ದಾರೆ. ಯಾರೋ ಒಬ್ಬರು, ‘ದೀಪಾವಳಿಯ ಶುಭಾಶಯಗಳು ಮಿಶೆಲ್​’ ಎಂದು ಶುಭ ಕೋರಿದ್ದಾರೆ. ‘ಅರೆ ಹೌದಲ್ಲ ಇದು ಬರಾಕ್​ ಥರಾನೇ ಕಾಣ್ತಾ ಇದೆ, ಯಾಕೆ ಹೀಗೆ? ಎಂದು ಮತ್ತೊಬ್ಬರು ಕೇಳಿದ್ದಾರೆ. ‘ಬರಾಕ್ ಶೇರ್ವಾನಿ ಹಾಕಿಕೊಂಡರೆ, ಮಿಶೆಲ್​ ಏನು ತೊಟ್ಟುಕೊಳ್ಳಬಹುದು?’ ಎಂದು ಪ್ರಶ್ನಿಸಿದ್ದಾರೆ ಇನ್ನೂ ಒಬ್ಬರು. ‘ಚಾಂದನೀ ಚೌಕ್​ಗೆ ಸ್ವಾಗತ’ ಎಂದು ಸ್ವಾಗತಿಸಿದ್ದಾರೆ ಮತ್ತೊಬ್ಬರು.

ಎರಡು ದಿನಗಳ ಹಿಂದೆ ಟ್ವೀಟ್ ಮಾಡಲಾದ ಈ ಪೋಸ್ಟ್​ ಅನ್ನು ಸುಮಾರು 5,000 ಜನರು ಇಷ್ಟಪಟ್ಟಿದ್ದಾರೆ. ಈ ಆಕೃತಿ ಥೇಟ್​ ಬರಾಕ್​ ಒಬಾಮಾ ಅವರಂತೆಯೇ ಇದೆ ಎನ್ನುವುದನ್ನು ನೀವು ಒಪ್ಪುತ್ತೀರಾ?

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:36 pm, Thu, 20 October 22

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ