ಕ್ಷೌರ ಮಾಡಿ ಗ್ರಾಹಕರ ಹಣೆಗೆ ಮುತ್ತಿಟ್ಟು ಕಳಿಸುವ ಹೀಗೊಬ್ಬ ಮುತ್ತಪ್ಪ
Hairdresser Kisses on Forehead : ಹೇರ್ ಕಟ್ಗೆ ಹೋದಾಗ ಗ್ರಾಹಕರಿಗೆ ಏನು ಕೊಡುತ್ತಾರೆ? ನೀರು, ಚಹಾ, ಕಾಫಿ, ಜ್ಯೂಸು ಇತ್ಯಾದಿ. ಆದರೆ ಈ ಕೇಶವಿನ್ಯಾಸಕ ಮಾತ್ರ ಭಿನ್ನಾತಿಭಿನ್ನ! ವಿಡಿಯೋ ನೋಡಿ ಹೇಗೆ ಅಂತ. ನೆಟ್ಟಿಗರಂತೂ ಫುಲ್ ಫಿದಾ.
Viral Video : ನೀವು ಸಲೂನ್ ಅಥವಾ ಸ್ಪಾಗೆ ಹೋದಾಗ ನಿಮ್ಮನ್ನು ಪ್ರಸನ್ನಗೊಳಿಸಲು ಅಲ್ಲಿ ಉಚಿತವಾಗಿ ಚಹಾ, ಕಾಫಿ, ನೀರು, ಜ್ಯೂಸ್, ಕೇಕ್, ತಿಂಡಿತಿನಿಸು ಹೀಗೆ ಏನಾದರೂ ಕೊಟ್ಟು ಸತ್ಕರಿಸುತ್ತಾರೆ. ಇದು ಗ್ರಾಹಕರನ್ನು ಸೆಳೆಯುವ ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಸತತವಾಗಿ ಕಾಪಾಡಿಕೊಳ್ಳುವ ಒಂದು ವಿಧಾನ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಕೇಶವಿನ್ಯಾಸಕ ಕೂದಲನ್ನು ಕತ್ತರಿಸಿ ಚೊಕ್ಕಟ ಮಾಡಿದ ಮೇಲೆ ಗ್ರಾಹಕರ ಹಣೆಗೆ ಮುತ್ತಿಡುತ್ತಾನೆ! ಈ ಅನಿರೀಕ್ಷಿತಕ್ಕೆ ಗ್ರಾಹಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋ ನೋಡಬೇಕು ನೀವು.
ಇದನ್ನೂ ಓದಿView this post on Instagram
ಈ ವಿಡಿಯೋ ಈಗಾಗಲೇ 9.5 ಲಕ್ಷ ವೀಕ್ಷಕರನ್ನು ತಲುಪಿದೆ. 45,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಒಬ್ಬೊಬರ ಕೇಶವನ್ನು ವಿನ್ಯಾಸಗೊಳಿಸಿದ ನಂತರ ಅವರನ್ನು ತನ್ನತ್ತ ಹೊರಳಿಸಿಕೊಂಡು ಅವ ಹೀಗೆ ಮುತ್ತು ಕೊಟ್ಟಾಗ ಅವರ ನಗುವೇ ಸ್ವರ್ಗ ಅವನಿಗೆ. ಏನೇನೆಲ್ಲ ತಲೆಯಲ್ಲಿ ತುಂಬಿಸಿಕೊಂಡು ಗಂಭೀರವಾಗಿ ಕುಳಿತಿರುತ್ತಾರೋ ಏನೋ ಈ ಗ್ರಾಹಕರು, ಬರೀ ತಲೆಯನ್ನಷ್ಟೇ ಹಗೂರ ಮಾಡಿಕೊಂಡರೆ ಹೇಗೆ? ಮನಸ್ಸನ್ನೂ ಮಾಡಿಕೊಳ್ಳಬೇಕು ಎಂಬ ಧಾಟಿಯಲ್ಲಿ ಈ ಕೇಶವಿನ್ಯಾಸಕ ಈ ಉಪಾಯ ಹೂಡಿದ ಹಾಗಿದೆ.
ನೆಟ್ಟಿಗರಂತೂ ಎಂಥಾ ಖುಷಿ ಆಗುತ್ತದೆ ಈ ವಿಡಿಯೋ ನೋಡುತ್ತಿದ್ದರೆ ಎಂದಿದ್ದಾರೆ. ‘ಅಯ್ಯೋ ನನಗೂ ಇಂಥ ಮುತ್ತು ಬೇಕಿತ್ತು’ ಎಂದಿದ್ದಾರೆ ಒಬ್ಬರು. ‘ಎಂಥಾ ಟ್ವಿಸ್ಟ್ ಇದೆ ಈ ವಿಡಿಯೋದಲ್ಲಿ’ಎಂದು ಅಚ್ಚರಿಪಟ್ಟಿದ್ದಾರೆ ಇನ್ನೂ ಒಬ್ಬರು. ‘ಇವನು ಹೀಗೆ ಗ್ರಾಹಕರಿಗೆ ಮುತ್ತಿಟ್ಟಾಗೊಮ್ಮೆ ನನ್ನಷ್ಟಕ್ಕೆ ನಾನು ಜೋರಾಗಿ ನಗುತ್ತಿದ್ದೆ’ ಎಂದಿದ್ದಾರೆ ಮತ್ತೊಬ್ಬರು. ‘ನಾನಿದನ್ನು ಬಹಳ ಪ್ರೀತಿಸುತ್ತಿದ್ದೇನೆ. ಪ್ರೀತಿಗೆ ಪ್ರತಿಯೊಬ್ಬರೂ ಅರ್ಹರು’ ಎಂದಿದ್ದಾರೆ ಮಗದೊಬ್ಬರು.
ನಿಮಗೂ ಈಗ ಈತನ ಸಲೂನಿಗೆ ಹೋಗಬೇಕು ಅನ್ನಿಸುತ್ತಿದೆಯಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:03 pm, Thu, 20 October 22