ಈ ಮಗು ಅಳುತ್ತಿಲ್ಲ, ಪಾಠ ಮಾಡುತ್ತಿದೆ! ಈ ವಿಡಿಯೋ ಒಮ್ಮೆ ಮಾತ್ರ ನೋಡಿ
A little boy's unmatched energy : ಮಾರಾಯಾ ಗ್ಯಾರಂಟೀ ರಾಜಕಾರಣಿಯೇ ಆಗುತ್ತಿ. ಇಲ್ಲ ಇವ ಟಿವಿ ಆ್ಯಂಕರ್ ಆಗುತ್ತಾನೆ. ಖಂಡಿತ ಫುಟ್ಬಾಲ್ ಕೋಚ್ ಆಗ್ತಾನೆ; ನೆಟ್ಟಿಗರು ಈ ಹುಡುಗನ ಅಗಾಧ ಕಂಠಸಿರಿಯನ್ನು ಹೀಗೆಲ್ಲ ಬಣ್ಣಿಸುತ್ತಿದ್ದಾರೆ.
Viral Video : ಬೆಳಗ್ಗೆ ಯಾಕಾದರೂ ಆಗತ್ತೋ? ಈ ಚಳಿ ಮಳೆಯಲ್ಲಿ ಮಕ್ಕಳನ್ನು ಎಬ್ಬಿಸಿ ಶಾಲೆಗೆ ಕಳಿಸುವುದು ಹೇಗೋ ಎಂತೋ… ಹೀಗಂತ ನೀವು ಮಣಮಣಿಸುತ್ತ ಕುಳಿತಿದ್ದರೆ ದಯವಿಟ್ಟು ಈ ವಿಡಿಯೋ ನೋಡಿ. ನಿಮ್ಮಲ್ಲಿರೋ ಬೇಸರವೆಲ್ಲ ಕಾಲುಕೀಳುತ್ತದೆ. ಹಾಗಿದೆ ಈ ವಿಡಿಯೋ ಟಾನಿಕ್! ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ಹುಡುಗನಿಗೆ ಕೋಪವೂ ಬಂದಿಲ್ಲ ಹಾಗೇ ಅಳು, ಹಟ ಇನ್ನೇನೂ. ತನ್ನ ಸಹಪಾಠಿಗಳಿಗೆ ಈ ಪರಿ ಉತ್ಸಾಹದಲ್ಲಿ ಪಾಠ ಮಾಡುತ್ತಿದ್ದಾನೆ. ಒಂದೊಂದು ಶಬ್ದವನ್ನು ಹೇಳುವಾಗಲೂ ಅವನ ಗಂಟಲಿನ ನರಗಳು ಉಬ್ಬುವುದನ್ನು ಗಮನಿಸಿ. ಆಗತ್ತಾ ನಿಮಗೆ ಹೀಗೆ ಪಾಠ ಮಾಡಲು? ಆಗಲ್ಲ ತಾನೆ? ಕಲೀರಿ ಹಾಗಿದ್ದರೆ ಈ ವಿಡಿಯೋ ನೋಡಿ.
ऐसे ही सोच रहा हूँ कि ये बच्चा बड़ा हो कर क्या बनेगा।
ड्रिल उस्ताद या फुटबाल कोच? नेता? या फिर टीवी एंकर ? pic.twitter.com/MA3MxhUBur
— Arun Bothra ?? (@arunbothra) October 19, 2022
ಈ ವಿಡಿಯೋ ರೀಟ್ವೀಟ್ ಮಾಡಿದ ನೆಟ್ಟಿಗರು, ಈತ ಖಂಡಿತ ಟಿವಿ ಆ್ಯಂಕರ್ ಆಗುತ್ತಾನೆ ಎನ್ನುತ್ತಿದ್ದಾರೆ.ಇಲ್ಲ ಇವ ಫುಟ್ಬಾಲ್ ತರಬೇತುದಾರ ಆದರೂ ಆದನೇ ಎನ್ನುತ್ತಿದ್ದಾರೆ ಕೆಲವರು. ಇಲ್ಲ ರಾಜಕಾರಣಿಯಾಗಲು ಇವ ಸೂಕ್ತ ಎನ್ನುತ್ತಿದ್ದಾರೆ ಇನ್ನೂ ಹಲವರು. ಇದೆಲ್ಲವೂ ಟಿವಿ ಆ್ಯಂಕರ್ಗಳ ಪ್ರಭಾವವೇ ಎನ್ನುತ್ತಿದ್ದಾರೆ ಒಬ್ಬರು. ಬೇಡ ಮಾರಾಯಾ ನೀ ಹೀಗೆಲ್ಲ ಕಿರುಚುವುದನ್ನು ಕಲಿಯಬೇಡ ನಮ್ಮ ರಾಜಕಾರಣಿಗಳು, ಟಿವಿ ಆ್ಯಂಕರ್ಗಳು ಈಗಾಗಲೇ ಇದ್ದಾರೆ. ನೀನೂ ಈ ಸಾಲಿಗೆ ಸೇರಬೇಡ ಎನ್ನುತ್ತಿದ್ದಾರೆ ಮತ್ತೊಬ್ಬರು. ಈಗಾಗಲೇ ಈ ವಿಡಿಯೋ 1.5 ಮಿಲಿಯನ್ ವೀಕ್ಷಕರನ್ನು ತಲುಪಿದೆ.
ಏನೇ ಹೇಳಿ ಆ ಹುಡುಗನ ತನ್ಮಯತೆ, ಉತ್ಸಾಹ ಮಾತ್ರ ಅಗಾಧ. ಅವನಲ್ಲಿರುವ ಶಕ್ತಿಯನ್ನು ಸಾಣೆ ಹಿಡಿಯುವಂಥ ಶಿಕ್ಷಕರು ಸಿಗುತ್ತಾ ಹೋದರೆ ಸಾಕು.
ನಿಮಗೇನೆನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದಂತೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:23 pm, Thu, 20 October 22