Trending: ಟ್ರೆಂಡ್ನಲ್ಲಿದೆ ಈ ‘ಜೆಲ್ಲಿಫಿಷ್ ಹೇರ್ಕಟ್’
Jellyfish Haircut : ಕೆಲವರು ಪ್ರಾಚೀನ ಈಜಿಪ್ಟ್ ಕಾಲದಲ್ಲಿ ಈ ಹೇರ್ಕಟ್ ಇತ್ತು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಜಪಾನಿನಲ್ಲಿ ಎನ್ನುತ್ತಿದ್ಧಾರೆ. ನೀವೇನು ಹೇಳುತ್ತೀರಿ?
Viral Post: ಜೆಲ್ಲಿಫಿಷ್ ಹೇರ್ಕಟ್ ಈಗ ವೈರಲ್ ಆಗಿದೆ. ಮ್ಯಾಗಜೀನ್ ಶೂಟ್‌ಗಾಗಿ ನಿಕೋಲ್ ಕಿಡ್‌ಮನ್ ಈ ಹೇರ್ಕಟ್ ಮಾಡಿಸಿಕೊಂಡು ಆನ್ಲೈನ್ನಲ್ಲಿ ಟ್ರೆಂಡಿಂಗ್ ಶುರು ಮಾಡಿದ್ದಾರೆ. ಟ್ರೆಂಡಿಂಗ್ ಎಂದರೆ, ಔಟ್ ಆಫ್ ದಿ ಬಾಕ್ಸ್ ಅಥವಾ ಅಪರೂಪ ಎಂಬಂಥ ಯಾವ ಸಂಗತಿಯೂ ಈವತ್ತು ಆನ್ಲೈನ್ ಮೂಲಕ ಗಮನ ಸೆಳೆಯುವುದು. ನೆಟ್ಟಿಗರಿಂದ ಈ ಹೇರ್ಕಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Look, y’all! The internet has discovered black hairstyles from the 80s and 90s! They’re calling it “jellyfish hair” pic.twitter.com/vgyu595ivh
— Ron DeSantis’ Juicy Cantilevered Tiddies (@silentpyjamas) August 23, 2022
ಈ ಹೇರ್ಕಟ್ ಪ್ರಾಚೀನ ಈಜಿಪ್ಟಿನವರು ಜಾರಿಗೆ ತಂದರು ಎಂದು ಯಾರೋ ಒಬ್ಬ ನೆಟ್ಟಿಗರು ಹೇಳಿದ್ದಾರೆ. ಇನ್ನೊಬ್ಬರು ಜಪಾನ್ನಲ್ಲಿ ಇದು ಜನಪ್ರಿಯಗೊಂಡಿದೆ ಎಂದಿದ್ದಾರೆ. ಈ ಹಿಂದೆ ಇದನ್ನು ಹಿಮ್ ಕಟ್ ಎಂದು ಕರೆಯುತ್ತಿದ್ದರು ಎಂದು ಮತ್ತೊಬ್ಬರು ಹೇಳಿದ್ದಾರೆ.
The #PerfectIcon #NicoleKidman
? Preorder Issue 3 now: https://t.co/u8NUZV1sjB pic.twitter.com/MZS6fiDSCZ
— PERFECT (@theperfectmag) August 22, 2022
ಯಾವುದೂ ಇದ್ದಕ್ಕಿದ್ದಂತೆ ಉದ್ಭವಿಸುವುದಿಲ್ಲ. ಈ ಫ್ಯಾಷನ್ ಎನ್ನುವುದುದೇ ವಿಭಿನ್ನವಾಗಿ ಕಾಣಿಸಿಕೊಂಡು ಗಮನ ಸೆಳೆಯಲು. ಸ್ವಲ್ಪ ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ನಂತರ ಮತ್ತೆ ಮರಕಳಿಸುತ್ತದೆ. ನಡುವೆ ಪೀಳಿಗೆ ದಾಟಿಕೊಂಡು ಹೋಗಿರುತ್ತದೆ.
ಏನನ್ನಿಸುತ್ತದೆ ಈ ಜೆಲ್ಲಿಫಿಷ್ ಕಟ್ ಬಗ್ಗೆ ನಿಮಗೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:27 pm, Fri, 26 August 22