Viral Video : ನಾಯಿಗಾಗಿ ಮಗುವಿದ್ದ ಪ್ರ್ಯಾಮ್ ಕೈಬಿಟ್ಟ ಈ ಮನುಷ್ಯ!
Dog Video : ನೀವು ಎಲ್ಲಿ ಹೋಗುತ್ತೀರೋ ನಿಮ್ಮ ನಾಯಿಯೂ ನಿಮ್ಮನ್ನು ಹಿಂಬಾಲಿಸುತ್ತದೆ. ಮುಂದೇನಾಗುತ್ತದೆ ಇಲ್ಲಿ ನೋಡಿ...
Viral Video: ಒಬ್ಬ ವ್ಯಕ್ತಿ ಪ್ರ್ಯಾಮ್ನಲ್ಲಿ ತನ್ನ ಮಗುವನ್ನು ಕರೆದುಕೊಂಡು ಹೊರಗೆ ಹೋಗುತ್ತಿದ್ದಾನೆ. ಅವನನ್ನು ಹಿಂಬಾಲಿಸಿದ ಅವನ ನಾಯಿಯನ್ನು ಇನ್ನೊಂದು ನಾಯಿಯು ಅಟ್ಟಿಸಿಕೊಂಡು ಬರುತ್ತದೆ. ಆಗ ಆ ಮನುಷ್ಯ ನಾಯಿಯನ್ನು ರಕ್ಷಿಸಲು ಹೋಗಿ ಮಗುವಿದ್ದ ಪ್ರ್ಯಾಮ್ ಕೈಬಿಟ್ಟುಬಿಡುತ್ತಾನೆ! ಮುಂದೆ ಪ್ರ್ಯಾಮ್ ಎಲ್ಲಿಗೆ ಹೋಯಿತು, ಮಗು ಏನಾಯಿತು ಎಂದು ನೋಡಿದ ಯಾರಿಗೂ ಆತಂಕವಾಗುವಂತೆ ಇದೆ ಈ ವಿಡಿಯೋ.
My dog bolted out the front door and anarchy ensued from AnimalsBeingJerks
ಪ್ಲ್ಯಾಟ್ಫಾರ್ಮ್ ಅನಿಮಲ್ಸ್ ಬೀಯಿಂಗ್ ಜೆರ್ಕ್, ರೆಡ್ಡಿಟ್ನ ಖಾತೆಯಲ್ಲಿ ಬುಧವಾರ ಈ ವಿಡಿಯೋ ಪೋಸ್ಟ್ ಆಗಿದೆ. ‘ಅದಕ್ಕಾಗಿಯೇ ನಾವು ನಮ್ಮ ನಾಯಿಗಳಿಗೆ ಬೇಬಿ ಗೇಟ್ ವ್ಯವಸ್ಥೆ ಮಾಡಿಸಿದ್ದೇವೆ ಆಗ ನಾಯಿ ನಮ್ಮನ್ನು ಸುಲಭವಾಗಿ ಹಿಂಬಾಲಿಸಿಕೊಂಡು ಬಾರದು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಈ ಮನುಷ್ಯ ನಾಯಿ ಬೆನ್ನು ಹತ್ತಿಕೊಂಡು ಹೋದ, ಅವನ ಮಗು? ದೇವರೇ…’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಮಕ್ಕಳೂ ಒಂದೇ ಪ್ರಾಣಿಗಳೂ ಒಂದೇ. ಮನುಷ್ಯರಾದ ನಾವುಗಳು ಏಕಕಾಲಕ್ಕೆ ಹೇಗೆ ನಿಭಾಯಿಸಬೇಕು ಇಬ್ಬಿಬ್ಬರನ್ನು ಎನ್ನುವುದನ್ನು ಅತ್ಯಂತ ಜಾಗರೂಕತೆಯಿಂದ ಯೋಚಿಸಿ ನಡೆದುಕೊಳ್ಳಬೇಕು. ಎಲ್ಲ ನಡೆಯುವುದು ಒಂದು ಕ್ಷಣದಲ್ಲಿಯೆ!
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:24 am, Fri, 26 August 22