AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊರಿಯನ್ ತಾಯಿಮಗನ ಜನಗಣಮನ ಮೆಚ್ಚಿದ ನೆಟ್ಟಿಗರು

National Anthem of India : 5ಲಕ್ಷಕ್ಕೂ ನೆಟ್ಟಿಗರ ಮನಕದ್ದಿದೆ ಈ ವಿಡಿಯೋ. ಭಾರತೀಯ ಅಪ್ಪ ಕೊರಿಯನ್ ಅಮ್ಮ, ಇಬ್ಬರ ಸಂಸ್ಕೃತಿಯನ್ನೂ ಮೈಗೂಡಿಸಿಕೊಳ್ಳುತ್ತಿರುವ ಈ ಬಾಲಕ.

Viral Video: ಕೊರಿಯನ್ ತಾಯಿಮಗನ ಜನಗಣಮನ ಮೆಚ್ಚಿದ ನೆಟ್ಟಿಗರು
ಕೋರಿಯನ್​ ತಾಯಿಯೊಬ್ಬಳು ಮಗನಿಗೆ ಜನಗಣಮನ ಕಲಿಸುತ್ತಿರುವುದು.
TV9 Web
| Updated By: ಶ್ರೀದೇವಿ ಕಳಸದ|

Updated on:Aug 26, 2022 | 10:26 AM

Share

Viral Video : ಕೊರಿಯನ್ ತಾಯಿಯೊಬ್ಬಳು ತನ್ನ ಮಗುವಿಗೆ ಭಾರತದ ರಾಷ್ಟ್ರಗೀತೆ ಹಾಡುವುದು ಹೇಗೆ ಎಂದು ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕಿಮ್ ಕೊರಿಯನ್. ಅವರ ಪತಿ ಭಾರತೀಯರು. ಮಗ ಆದಿ ಕೊರಿಯನ್ ಮತ್ತು ಭಾರತೀಯ ಸಂಸ್ಕೃತಿಗಳ ಬಗ್ಗೆ ಕಲಿಯುತ್ತಿರುವ ಚುರುಕುಗಣ್ಣಿನ ಪೋರ. ಈ ವಿಡಿಯೋ 5 ಲಕ್ಷ ವೀಕ್ಷಣೆ ಪಡೆದಿದೆ. ಈ ತಾಯಿಮಗನ ಬಗ್ಗೆ ನೆಟ್ಟಿಗರು ಹೆಮ್ಮೆ ಪಡುತ್ತಿದ್ದಾರೆ. ಒಂದೊಂದೇ ಸಾಲನ್ನು ತಾಯಿ ಹಾಡಿ ತೋರಿಸಿದಂತೆ ಮಗ ಅದನ್ನು ಹಾಡಿ ಒಪ್ಪಿಸುತ್ತಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Indian?Korean (@premkimforever)

1,29,000 ಕ್ಕೂ ಹೆಚ್ಚು ಲೈಕ್ಸ್ ಈ ವಿಡಿಯೋ ಪಡೆದಿದೆ. ಇನ್ನೇನು ಪ್ರತಿಕ್ರಿಯಿಸಿದಿವರ ಸಂಖ್ಯೆ 2,000 ತಲುಪಲಿದೆ.

ಪ್ರೇಮ್​ ಕಿಮ್​ ಫಾರೆವರ್ ಎಂಬ ಇನ್​ಸ್ಟಾಗ್ರಾಂ ಖಾತೆಯನ್ನು ಈಕೆ ಹೊಂದಿದ್ದಾರೆ. ಈರುಳ್ಳಿ ಪಕೋಡಾ ಮಾಡುವ ಈ ವಿಡಿಯೋ ಕೂಡ ನೋಡಿ.

ಸಂಸ್ಕೃತಿ ಎಂದಾಗ ಅದರಲ್ಲಿ ಅಡುಗೆ ಉಡುಗೆ ವಿಚಾರ ಆಚಾರ ಮುಂತಾದ ಸಂಗತಿಗಳೂ ಒಳಗೊಳ್ಳುತ್ತದೆಯಲ್ಲವೆ? ಪರಸ್ಪರ ಸ್ವೀಕರಿಸಿ ಅನುಸರಿಸಿದಲ್ಲಿ ಸಂಬಂಧದಲ್ಲಿ ಗೌರವ ಆಪ್ತತೆ ಹೆಚ್ಚಿ ಹರ್ಷದಾಯಕ ವಾತಾವರಣ ಸೃಷ್ಟಿಯಾಗುತ್ತದೆ.

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:22 am, Fri, 26 August 22