Viral Video: ಮರಿಯಾನೆ ಮೊದಲ ಸಲ ಈ ಮೋಜಿಗೆ ಬಿದ್ದಾಗ
Baby Elephant : ಮೊದಲ ಸಲ ಬಬಲ್ಸ್ ಜೊತೆ ಆಟವಾಡುತ್ತಿರುವ ಈ ಮರಿಯಾನೆ. ನೆಟ್ಟಿಗರು ಮೈಮರೆತು ನೋಡುತ್ತಿರುವ ಈ ಮನೋಹರ ದೃಶ್ಯ.
Viral Video: ಪುಟ್ಟಾನೆಯು ನೀರುಗುಳ್ಳೆಗಳನ್ನು ಹಿಡಿಯಲು ಪ್ರಯತ್ನಿಸುತ್ತಿದೆ. ಬೇಬಿ ಬ್ರಾಜೋಸ್ ತನ್ನ ತಾಯಿ ಬ್ಲ್ಯೂಬೊನೆಟ್ನೊಂದಿಗೆ ಆಗಸ್ಟ್ 18ರಂದು ಈ ಮೋಜನ್ನು ಮೊದಲ ಬಾರಿ ಅನುಭವಿಸಿದ ದೃಶ್ಯ ಇದಾಗಿದೆ. ಬ್ರಾಜೋಸ್ಗೆ 10 ತಿಂಗಳು. ಈ ಮನೋಹರವಾದ ಕ್ಲಿಪ್ ಅನ್ನು ಈ ತನಕ 33,000 ಜನರು ವೀಕ್ಷಿಸಿದ್ದಾರೆ. 900 ಲೈಕ್ಸ್ ಪಡೆದಿದೆ. ಫೋರ್ಟ್ ವರ್ತ್ ಮೃಗಾಲಯದ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಇದೆ. ಮನುಷ್ಯರು ಮತ್ತು ಪರಿಸರದ ಮಧ್ಯೆ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಈ ಮೃಗಾಲಯವು ಹೊಂದಿದೆ.
ಇದನ್ನೂ ಓದಿ
Just ?popping? by! pic.twitter.com/xvCwazrEFm
— Fort Worth Zoo (@FortWorthZoo) August 18, 2022
ಆಟ, ಮೋಜು ಯಾರಿಗಿಷ್ಟವಿಲ್ಲ? ಅದರಲ್ಲೂ ಮರಿಗಳ, ಮಕ್ಕಳ ಜನ್ಮಸಿದ್ಧ ಹಕ್ಕು ಇದು! ಆಡಿಸುವವರಿಗೇ ಸುಸ್ತಾಗುವಷ್ಟು ಆಟಕ್ಕೆ ಬೀಳಿಸುತ್ತಲೇ ಇರುವ ಜಾಯಮಾನ ಈ ಪಿಳ್ಳೆಗಳದ್ದು.
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:45 pm, Fri, 26 August 22