‘ಕೇಕ್​ ಹೀಗೇ ತಿನ್ನಬೇಕು’ ಹೌದೌದು, ನಾವೂ ಪ್ರಯತ್ನಿಸುತ್ತೇವೆ ಎಂದ ನೆಟ್ಟಿಗರು

Birthday Cake : ಕೇಕ್ ಕಟ್ ಮಾಡಿದ ನಂತರ ಅದನ್ನು ಹೋಳುಹೋಳಾಗಿಸಿ ಎಲ್ಲರಿಗೂ ಹಂಚಿಬಿಟ್ಟರೆ ಹುಟ್ಟುಹಬ್ಬ ಮುಗಿಯಿತು ಎನ್ನುವ ಜಮಾನಾದಲ್ಲಿ ನೀವಿದ್ದೀರಲ್ವಾ? ಸ್ವಲ್ಪ ಹೊಸಕಾಲಕ್ಕೆ ಬನ್ನಿ, ಈ ಕಾಲದ ವಿಡಿಯೋ ನೋಡಿ.

‘ಕೇಕ್​ ಹೀಗೇ ತಿನ್ನಬೇಕು’ ಹೌದೌದು, ನಾವೂ ಪ್ರಯತ್ನಿಸುತ್ತೇವೆ ಎಂದ ನೆಟ್ಟಿಗರು
Baby‘s way of eating birthday cake
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 20, 2022 | 11:06 AM

Viral Video : ಹುಟ್ಟುಹಬ್ಬವೆಂದರೆ ಕಣ್ಮುಂದೆ ಬರುವುದು ಕೇಕ್​. ಈಗಂತೂ ಕಸ್ಟಮೈಸ್ಡ್​ ಕೇಕ್​ಗಳ ಜಮಾನಾ. ಬೇಕರಿಯವರಿಗೆ ನಿಮಗೆ ಬೇಕಾದ ಥೀಮ್​ ವಿವರಿಸಿದರೆ ಮರುದಿನವೇ ಕೇಕ್ ನಿಮ್ಮ ಮನೆ ತಲುಪಿರುತ್ತದೆ. ಮಗುವಿನ ಮೊದಲ ಹುಟ್ಟುಹಬ್ಬದ ತಯಾರಿ ಮತ್ತು ಸಂಭ್ರಮವನ್ನಂತೂ ವಿವರಿಸುವುದೇ ಬೇಡ. ಎದುರಿಗಿರುವ ಕೇಕ್​ ಮುಟ್ಟಲು ಜೀಕು ಹೊಡೆಯುವ ಮಗುವನ್ನು ಸಂಭಾಳಿಸುವ ಸರ್ಕಸ್​ ಇದೆಯಲ್ಲ! ಭಾರೀ ಮಜಾ ಇರುತ್ತದೆ. ಅಂತೂ ಕೇಕಿನ ವಿನ್ಯಾಸ ಕೆಡದಂತೆ ಮೆಲ್ಲ ಕೇಕ್​ ಕಟ್ ಮಾಡಿ, ಅದನ್ನು ಸಣ್ಣಸಣ್ಣ ಹೋಳುಗಳನ್ನಾಗಿಸಿ ಬಂದ ಅತಿಥಿಗಳಿಗೆ ಕೊಟ್ಟು ಉಪಚರಿಸಿದರೆ ದೊಡ್ಡ ಕೆಲಸ ಮುಗಿದಂತೆ! ಆದರೆ ಇದೀಗ ವೈರಲ್ ಆಗುತ್ತಿರುವ ಈ ಹುಟ್ಟುಹಬ್ಬದ ಕೇಕ್​ ಅವತಾರದ ವಿಡಿಯೋ ನೋಡಿ.

You only turn one once! from MadeMeSmile

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬಹಳ ಮುದ್ದಾಗಿದೆಯಲ್ಲ ಈ ಮಗು ಕೇಕ್​ ತಿನ್ನುವ ಪರಿ! ಈತನಕ ಈ ವಿಡಿಯೋ ಸುಮಾರು 60,000 ಮತಗಳನ್ನು ಗಳಿಸಿದೆ. ಇದನ್ನು ನೋಡಿದ ಅನೇಕರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ‘ನನಗೀಗ 40. ಈಗಲೂ ಹೀಗೆಯೇ ಮಾಡುತ್ತೇನೆ. ಈ ವಿಷಯವಾಗಿ ನನ್ನನ್ನು ಯಾರೂ ತಡೆಯರು’ ಎಂದಿದ್ದಾರೆ ಒಬ್ಬರು. ‘ನನಗೂ ಹೀಗೇ ಮಾಡುವ ಮನಸಿತ್ತು. ಏನು ಮಾಡುವುದು ನನಗೀಗ 40 ಆಗಿ ಹೋಯಿತಲ್ಲ’ ಎಂದಿದ್ದಾರೆ ಮತ್ತೊಬ್ಬರು. ‘ಇನ್ನುಮುಂದೆ ನನ್ನ ಹುಟ್ಟುಹಬ್ಬಕ್ಕೆ ನಾನೂ ಹೀಗೆ ಮಾಡುತ್ತೇನೆ’ ಎಂದು ಮಗದೊಬ್ಬರು ಹೇಳಿದ್ದಾರೆ. ‘ನನ್ನ 30ನೇ ಹುಟ್ಟುಹಬ್ಬದ ದಿನ ಹೀಗೇ ಕೇಕ್​ ತಿನ್ನಬೇಕೆಂದು ಬಯಸಿದೆ ಆದರೆ ಯಾಕೋ ಧೈರ್ಯವಾಗಲಿಲ್ಲ’ ಎಂದಿದ್ದಾರೆ ಇನ್ನೂ ಒಬ್ಬರು. ‘ಹೀಗೇ ಬದುಕಬೇಕು. ವೆರಿಗುಡ್​’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:05 am, Thu, 20 October 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್