ಮದುವೆಯ ದಿನ ಮೊಮ್ಮಗಳ ತೆಕ್ಕೆಯಲ್ಲಿ ಮಗುವಿನಂತಾದ ಅಜ್ಜ

Grandfather Love : ಅಜ್ಜ ಮೊಮ್ಮಗಳ ಬಾಂಧವ್ಯವನ್ನು ಸಾರುವ ಈ ವಿಡಿಯೋ ಅನ್ನು ಈಗಾಗಲೇ ಸುಮಾರು 9 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಹಣ್ಣಣ್ಣು ಅಜ್ಜನ ಮುಖ ನೋಡಿದರೆ ಸಾಕು ಅವನೆದೆಯ ಭಾಷೆಯನ್ನು ಅರ್ಥ ಮಾಡಿಕೊಳ್ಳಲು.

ಮದುವೆಯ ದಿನ ಮೊಮ್ಮಗಳ ತೆಕ್ಕೆಯಲ್ಲಿ ಮಗುವಿನಂತಾದ ಅಜ್ಜ
Bride and her grandfather dancing at the wedding
Follow us
TV9 Web
| Updated By: ಶ್ರೀದೇವಿ ಕಳಸದ

Updated on: Oct 19, 2022 | 4:29 PM

Viral Video : ಮದುವೆ ಎಂದಮೇಲೆ ಕೇಳಬೇಕೆ? ಸಿಂಗಾರ, ಅಲಂಕಾರ, ತಮಾಷೆ, ನಗು, ಸಣ್ಣ ಆತಂಕ, ಭಾರೀ ನಿರೀಕ್ಷೆ ಹೀಗೆ ಇನ್ನೂ ಏನೇನೋ. ಸಂಗೀತ, ನೃತ್ಯದ ಮೆಹಫಿಲು, ಕುಣಿ, ಕುಣಿಸು, ಕುಪ್ಪಳಿಸಿ ಖುಷಿ ಪಡು, ಪಡಿಸು ಮತ್ತೂ ಏನೇನೋ. ಕೊನೆಗೆ ಕಣ್ಣುತುಂಬಿಕೊಂಡ ವಧು ಗಂಡನ ಮನೆಗೆ ಹೋಗುವುದು, ಅತ್ತ ಗಂಡನ ಮನೆಯವರು ಖುಷಿಯಿಂದ ಸ್ವಾಗತಿಸುವುದು. ಸಾಮಾನ್ಯವಾಗಿ ಮದುವೆಯ ದಿನ ವಾತಾವರಣ ಹೀಗಿರುತ್ತದೆ. ಇಲ್ಲೊಂದು ಮದುವೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ತನ್ನ ಅಜ್ಜನೊಂದಿಗೆ ನರ್ತಿಸುತ್ತಿದ್ದಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಈತನಕ 9.1 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಯೂ ಆರ್ ಮೈ ಸನ್​ ಶೈನ್​ ಎಂಬ ಹಾಡು ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಹಣ್ಣುಹಣ್ಣಾದ ಅಜ್ಜ, ಮೊಮ್ಮಗಳ ತೆಕ್ಕೆಗೆ ಮಗುವಿನಂತೆ ಅಪ್ಪಿಕೊಂಡಿದ್ದಾರೆ. ಐದೂವರೆ ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ಅನ್ನು ಇಷ್ಟಪಟ್ಟಿದ್ದಾರೆ. ಎಂಥ ಭಾವಪೂರ್ಣ ಸನ್ನಿವೇಶವಿದು ಎಂದು ನೆಟ್ಟಿಗರು ಮಿಡಿದಿದ್ದಾರೆ. ಧನ್ಯವಾದ ನಿಮಗೆ, ಹೀಗೆ ನೀವು ಅವರನ್ನು ನೃತ್ಯಕ್ಕೆ ಆಹ್ವಾನಿಸಿದ್ದಕ್ಕೆ ಎಂದಿದ್ದಾರೆ ಮತ್ತೂ ಒಬ್ಬರು. ಭಾವಪೂರ್ಣ ಗಳಿಗೆಗಳು ಹೀಗೇ. ಎಲ್ಲರ ಕಣ್ಣಂಚನ್ನೂ ತೋಯಿಸಿಬಿಡುತ್ತವೆ. ಸಂಬಂಧಗಳ ಬಂಧ ಸದಾ ಹೀಗೆಯೇ.

ಏನೆನ್ನಿಸುತ್ತಿದೆ ಈ ವಿಡಿಯೋ ನೋಡಿದ ನಿಮಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ