ಯುನೈಟೆಡ್​ ಏರ್​ಲೈನ್ಸ್​ನ ಬಿಝಿನೆಸ್​ ಕ್ಲಾಸ್​ನಲ್ಲಿ ಹಾವು ಪತ್ತೆ, ಪ್ರಯಾಣಿಕರು ಆತಂಕಕ್ಕೆ

Snake Spotted in Flight : ಈ ಪಟ್ಟೆಹಾವಿಗೆ ವಿಮಾನ ಪ್ರಯಾಣ ಮಾಡುವ ಬಯಕೆ ಉಂಟಾಗಿತ್ತೋ ಏನೋ. ಫ್ಲೊರಿಡಾದಿಂದ ನ್ಯೂಜೆರ್ಸಿಗೆ ಹೊರಟಿದ್ದ ವಿಮಾನವೇರಿ ಕುಳಿತುಬಿಟ್ಟಿದೆ. ಕೆಲಹೊತ್ತು ಪ್ರಯಾಣಿಕರು ಭಯಭೀತರಾಗಿದ್ದರು.

ಯುನೈಟೆಡ್​ ಏರ್​ಲೈನ್ಸ್​ನ ಬಿಝಿನೆಸ್​ ಕ್ಲಾಸ್​ನಲ್ಲಿ ಹಾವು ಪತ್ತೆ, ಪ್ರಯಾಣಿಕರು ಆತಂಕಕ್ಕೆ
Snake Spotted in Business Class Aboard United Airlines in New Jersey
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 19, 2022 | 2:57 PM

Viral : ಬ್ಯಾಗಿನಲ್ಲಿ ಹಾವು ಪತ್ತೆ, ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ಬೂಟಿನಲ್ಲಿ ಹಾವು ಪತ್ತೆ, ಕಮೋಡಿನಲ್ಲಿ ಹಾವು ಪತ್ತೆ ಹೀಗೆ ದಿನವೂ ಎಲ್ಲೆಂದರಲ್ಲಿ ಈ ನಾಗರಾಜನ ಹಾವಳಿ ಹೆಚ್ಚಾಗುತ್ತಿದೆ. ಇಷ್ಟು ದಿನ ನೆಲದ ಮೇಲೆ ಅಡಗಿ ಕುಳಿತುಕೊಳ್ಳುತ್ತಿದ್ದವನಿಗೆ ಆಕಾಶದಲ್ಲಿ ಹಾರಾಡುವ ಬಯಕೆಯಾಗಿದೆ. ಹೇಗೋ ಒಟ್ಟು ವಿಮಾನವೇರಿ ಕುಳಿತುಬಿಟ್ಟಿದ್ದಾನೆ, ಅದೂ ಬಿಝಿನೆಸ್ ಕ್ಲಾಸಿನಲ್ಲಿ! ಫ್ಲೊರಿಡಾದಿಂದ ನ್ಯೂಜೆರ್ಸಿಗೆ ಹೊರಟಿದ್ದ ವಿಮಾನದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಪ್ರಯಾಣಿಕರು ಕೆಲ ಕಾಲ ಭಯಗ್ರಸ್ಥರಾಗಿದ್ದರು.

ಸೋಮವಾರದಂದು ಫ್ಲೊರಿಡಾದ ಟ್ಯಾಂಪಾದಿಂದ ನ್ಯೂಜೆರ್ಸಿಗೆ ಪ್ರಯಾಣಿಸುತ್ತಿದ್ದ ಯುನೈಟೆಡ್​ ಏರ್​ಲೈನ್ಸ್​ನಲ್ಲಿ ಈ ಘಟನೆ ನಡೆದಿದೆ. ಬಿಝಿನೆಸ್​ ಕ್ಲಾಸ್​ನ ಪ್ರಯಾಣಿಕರು ವಿಮಾದಿಂದ ಕೆಳಗಿಳಿಯುತ್ತಿದ್ದಾರೆ ಈ ಪಟ್ಟೆ ಹಾವು  ಕಣ್ಣಿಗೆ ಬಿದ್ದಿದೆ. ಕೆಲಕಾಲ ಭಯದಿಂದ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ನಂತರ ಪೊಲೀಸರು ಮತ್ತು ವನ್ಯಜೀವಿ ರಕ್ಷಣಾ ತಂಡವು ನಡೆಸಿದ ಕಾರ್ಯಾಚರಣೆಯಿಂದ ಹಾವನ್ನು ಬಂಧಿಸಲಾಗಿದೆ. ಸದ್ಯ ಯಾರಿಗೂ ಯಾವುದೇ ರೀತಿಯ ಗಾಯ ಸಂಭವಿಸಿಲ್ಲ. ಕಾರ್ಯಾಚರಣೆಯೂ ಸುಸೂತ್ರವಾಗಿ ಸಾಗಿದೆ.

ಸಾಮಾನ್ಯವಾಗಿ 18-26 ಇಂಚುಗಳಷ್ಟು ಉದ್ದದ ಹಾವುಗಳು ಮನುಷ್ಯರು ಮತ್ತು ಸಾಕುಪ್ರಾಣಿಗಳಿಂದ ದೂರವಿರುತ್ತವೆ. ಯಾರಾದರೂ ಉದ್ದೇಶಪೂರ್ವಕವಾಗಿ ಅವುಗಳಿಗೆ ತೊಂದರೆ ನೀಡಲು ನೋಡಿದರೆ ಮಾತ್ರ ಕಚ್ಚದೇ ಬಿಡುವುದಿಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್ನು ನ್ಯೂಜೆರ್ಸಿಯಲ್ಲಿ ಪಟ್ಟೆಹಾವುಗಳು ಕಾಣಿಸಿಕೊಳ್ಳುವುದು ತೀರಾ ಸಾಮಾನ್ಯ. ಫೆಬ್ರವರಿಯಲ್ಲಿ ಮಲೇಷಿಯಾದ ಏರ್ ಏಷಿಯಾ ವಿಮಾನದಲ್ಲಿ ಇಂಥದೇ ಘಟನೆಯೊಂದು ನಡೆದಿತ್ತು. ವಿಮಾನ ಹಾರಾಡುತ್ತಿರುವಾಗ ಹಾವು ಪತ್ತೆಯಾಗಿತ್ತು.

ನೀವು ವಿಮಾನ ಏರಿದಾಗೆಲ್ಲ ಈ ಘಟನೆ ನೆನಪಾಗುವುದೇನೋ!

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 2:43 pm, Wed, 19 October 22