ತೆಲಂಗಾಣ : ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೊಟ್ಟ ಕಾಲೇಜು ಸಿಬ್ಬಂದಿ, ಮಂಗಳಸೂತ್ರ ತೆಗೆಸಿದ್ದಕ್ಕೆ ಆಕ್ಷೇಪ
Telangana : ಅಕ್ಟೋಬರ್ 16ರಂದು ಆದಿಲಾಬಾದಿನಲ್ಲಿ ತೆಲಂಗಾಣ ಲೋಕಸೇವಾ ಆಯೋಗವು ನಡೆಸಿದ ಗ್ರೂಪ್-1 ಪೂರ್ವಭಾವಿ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳು ಪರಸ್ಪರ ಟೀಕಾಪ್ರಹಾರಕ್ಕಿಳಿದಿದ್ದಾರೆ.
Viral Video : ಕರ್ನಾಟಕದ ಹಿಜಾಬ್ ವಿವಾದವು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿರುವಾಗ, ತೆಲಂಗಾಣದಲ್ಲಿ ಈ ಕುರಿತಾದ ವಿವಾದವು ಬಿರುಸು ಪಡೆದುಕೊಳ್ಳುವ ಲಕ್ಷಣ ತೋರುತ್ತಿದೆ. ತೆಲಂಗಾಣದ ಪರೀಕ್ಷಾ ಕೇಂದ್ರವೊಂದರಲ್ಲಿ ಭದ್ರತಾ ಸಿಬ್ಬಂದಿಯು ಹಿಂದೂ ಹೆಣ್ಣುಮಕ್ಕಳಿಗೆ ಮಂಗಳಸೂತ್ರ, ಬಳೆ, ಕಾಲುಚೈನು ತೆಗೆದಿಟ್ಟು ಕೊಠಡಿ ಪ್ರವೇಶಿಸಬೇಕೆಂದು ಕೇಳಿಕೊಂಡಿದೆ. ಆದರೆ, ಮುಸ್ಲಿಮ್ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸಿ ಪ್ರವೇಶಿಸಲು ಅವಕಾಶ ನೀಡಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ರಾಜಕೀಯ ಪಕ್ಷಗಳ ಮುಖಂಡರುಗಳು ಪರಸ್ಪರ ಟೀಕಾಪ್ರಹಾರ ಮಾಡಿದ್ದಾರೆ.
ಅಕ್ಟೋಬರ್ 16ರಂದು ಆದಿಲಾಬಾದ್‌ನ ವಿದ್ಯಾರ್ಥಿ ಜ್ಯೂನಿಯರ್ ಮತ್ತು ಡಿಗ್ರಿ ಕಾಲೇಜಿನಲ್ಲಿ ತೆಲಂಗಾಣ ಲೋಕಸೇವಾ ಆಯೋಗವು (TSPSC) ನಡೆಸಿದ ಗ್ರೂಪ್-1 ಪೂರ್ವಭಾವಿ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ. ಆದಿಲಾಬಾದ್‌ನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಹಿಂದೂ ಅಭ್ಯರ್ಥಿಗಳು ಮಾಂಗಲ್ಯ, ಕಿವಿಯೋಲೆ, ಕಾಲುಂಗುರ, ಕಾಲುಚೈನು ತೆಗೆಯಬೇಕೆಂದು ಭದ್ರತಾ ಸಿಬ್ಬಂದಿಯು ಮನವಿ ಮಾಡಿಕೊಂಡಿದೆ. ಆ ಪ್ರಕಾರ ಎಲ್ಲರೂ ಆಭರಣಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ, ಮುಸ್ಲಿಂ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
This happened yesterday at a Group-1 examination centre in Telangana.
Burqa is allowed but earrings, bangles and payal must be removed. Height of appeasement. Shameful indeed. pic.twitter.com/KL10IG054M
— Priti Gandhi – प्रीति गांधी (@MrsGandhi) October 18, 2022
‘ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಹಿಂದೂ ಹೆಣ್ಣುಮಕ್ಕಳಿಗೆ ಮಾತ್ರ ಗೆಜ್ಜೆ, ಮಾಂಗಲ್ಯ, ಕಿವಿಯೋಲೆ, ಬಳೆ ತೆಗೆದು ಪರೀಕ್ಷಾ ಕೊಠಡಿ ಪ್ರವೇಶಿಸಲು ತಿಳಿಸಿದೆ. ಇದು ನಾಚಿಕೇಗೇಡು ಸಂಗತಿ’ ಎಂದು ಬಿಜಿಪಿ ನಾಯಕಿ ಪ್ರೀತಿ ಗಾಂಧಿ ಪ್ರಸ್ತುತ ವಿಡಿಯೋಗೆ ಒಕ್ಕಣೆ ಬರೆದು ಟ್ವೀಟ್ ಮಾಡಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ (TRS)ಯು ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದು ರಾಜ್ಯದ ಇತರೇ ಬಿಜೆಪಿ ನಾಯಕರು ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಟಿಆರ್‌ಎಸ್ ನಾಯಕ ಕೃಷನ್ ಬುರ್ಖಾ ಧರಿಸಿದ ಮಹಿಳೆಯನ್ನು ತಪಾಸಣೆ ಮಾಡುತ್ತಿರುವ ವಿಡಿಯೋ ಟ್ವೀಟ್ ಮಾಡಿ, ‘ಇನ್ನೊಂದು ಪರೀಕ್ಷಾ ಕೇಂದ್ರದಲ್ಲಿ, ಸರ್ಕಾರದ ಪರೀಕ್ಷಾ ನಿಯಮಾವಳಿ ಪ್ರಕಾರ ಎಲ್ಲರಿಗೂ ಒಂದೇರೀತಿಯ ತಪಾಸಣೆ ಮಾಡಲಾಗಿದೆ. ಆದರೆ ಅಧಿಕಾರಿಗಳು ಬುರ್ಖಾ ತೆಗೆಯಲು ಮುಸ್ಲಿಂ ಮಹಿಳೆಯರಿಗೆ ಕೇಳಿಕೊಂಡಿಲ್ಲ. ಹಾಗಾಗಿ ಅವರು ಹಾಗೆಯೇ ಪರೀಕ್ಷಾ ಕೊಠಡಿ ಪ್ರವೇಶಿಸಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ, ಬಿಜೆಪಿಯು ಶಾಂತಿ ಕದಡಲು ಪ್ರಯತ್ನಿಸುತ್ತಿದೆ ಎನ್ನಿಸುತ್ತಿದೆ’ ಎಂದಿದ್ದಾರೆ.
At one Centre where TSPSC Group 1 Exam was held Police checked all aspirants as per Govt of India competitive exam guidelines without any partiality . But BJP who wants to disturb the communal peace and harmony of Telangana have shared few selective videos only ! pic.twitter.com/5bhiCG28HJ
— krishanKTRS (@krishanKTRS) October 18, 2022
ಗ್ರೂಪ್ 1 ಪರೀಕ್ಷೆ ನಡೆದ ಕೇಂದ್ರವೊಂದರಲ್ಲಿ ಮಾತ್ರ ಪೊಲೀಸರು ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದಾರೆ. ಭಾರತ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗಸೂಚಿಯನ್ನು ಅನುಸರಿಸಿದ್ದಾರೆ. ಆದರೆ ತೆಲಂಗಾಣದ ಸೌಹಾರ್ದತೆಯನ್ನು ಕದಡಲು ಬಿಜೆಪಿಯು ಇಂಥ ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಆದಿಲಾಬಾದ್‌ನ ಎಸ್ಪಿ ಡಿ. ಉದಯ್ ಕುಮಾರ್ ರೆಡ್ಡಿ, ‘ಹಿಂದೂ ಮಹಿಳೆಯರಿಗೆ ಉಳಿದ ಆಭರಣಗಳೊಂದಿಗೆ ಮಂಗಳಸೂತ್ರವನ್ನೂ ತೆಗೆದಿರಿಸಲು ಹೇಳಿದ್ದರಲ್ಲಿ ತಪ್ಪಿದೆ. ಅದನ್ನು ನಂತರ ಸರಿಪಡಿಸಿಕೊಳ್ಳಲಾಗಿದೆ. ಮಂಡಲ್ ಕಂದಾಯ ಅಧಿಕಾರಿಯ ತಪ್ಪಿನಿಂದ ಆರಂಭದಲ್ಲಿ ಇದೆಲ್ಲ ಘಟಿಸಿದೆ. ಆದರೆ ನಮಗೆ ಈ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಮಹಿಳೆಯರಿಗೆ ಮಂಗಳಸೂತ್ರ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುವು ಮಾಡಿಕೊಡಲಾಗಿದೆ.’ ಎಂದಿದ್ದಾರೆ.
ಇನ್ನಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:31 pm, Wed, 19 October 22