AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಾಕು ಚಿಂದಿ ಆಯ್ದಿದ್ದು ಇನ್ನು ತರಕಾರಿ ಮಾರಿ’; 75 ವರ್ಷದ ಅಜ್ಜಿಗೆ ಸಹಾಯ ಮಾಡಿದ ‘ತರುಣ’ ಬ್ಲಾಗರ್

Ragpicker start new life : ಬ್ಲಾಗರ್​ ಒಬ್ಬರು 75 ವರ್ಷದ ಚಿಂದಿ ಆಯುವ ಅಜ್ಜಿಗೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿದೆ. ಭಾರತಕ್ಕೆ ಇಂಥ ‘ತರುಣ’ರ ಅವಶ್ಯಕತೆ ಇದೆ ಎಂದಿದ್ದಾರೆ ನೆಟ್ಟಿಗರು. ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿ.

‘ಸಾಕು ಚಿಂದಿ ಆಯ್ದಿದ್ದು ಇನ್ನು ತರಕಾರಿ ಮಾರಿ’; 75 ವರ್ಷದ ಅಜ್ಜಿಗೆ ಸಹಾಯ ಮಾಡಿದ ‘ತರುಣ’ ಬ್ಲಾಗರ್
IAS officer shares video of blogger who helped 75 yr old ragpicker start new life
TV9 Web
| Updated By: ಶ್ರೀದೇವಿ ಕಳಸದ|

Updated on:Oct 19, 2022 | 12:04 PM

Share

Viral Video : 25 ಅಲ್ಲ, ಈ ಅಜ್ಜಿಗೆ 75! ಇನ್ನೂ ಎಷ್ಟು ವರ್ಷ ಇವರು ಹೀಗೆ ಬೀದಿಬೀದಿ ಅಲೆದು, ಕಸದತೊಟ್ಟಿಯಲ್ಲಿ ತಡಕಾಡುತ್ತ ಚಿಂದಿ ಆಯ್ದು ಜೀವನ ಸಾಗಿಸಬೇಕು? ಇದನ್ನು ನೋಡಿದ ಯಾರೂ ಮರುಗದೇ ಇರಲಾರರು. ನಮ್ಮ ಸುತ್ತಮುತ್ತ ಇಂಥ ಅನೇಕರನ್ನು ಕಾಣುತ್ತೇವೆ. ಆದರೆ ಅವರಿಗಾಗಿ ನಾವೇನು ಮಾಡುತ್ತ ಬಂದಿದ್ದೇವೆ? ನಮ್ಮ ನಮ್ಮ ಬೆಚ್ಚಗಿನ ಗೂಡುಗಳನ್ನು ರಕ್ಷಣೆ ಮಾಡಿಕೊಳ್ಳುವುದರಲ್ಲಿಯೇ ನಾವು ಮುಳುಗಿದ್ದೇವಲ್ಲವೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಬಹಳ ವಿಭಿನ್ನವಾಗಿದೆ. 75 ವರ್ಷದ ಅಜ್ಜಿಯೊಬ್ಬರಿಗೆ ಬ್ಲಾಗರ್ ಒಬ್ಬರು ಹೊಸ ಜೀವನಕ್ಕೆ ತೆರೆದುಕೊಳ್ಳಲು ಸಹಾಯ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಕರಗಿಸುತ್ತಿದೆ, ಅವರಲ್ಲಿ ಮಾನವೀಯತೆಯನ್ನು ಜಾಗೃತಗೊಳಿಸುವಂತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈತನಕ 1 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಇದನ್ನು ಟ್ವೀಟ್ ಮಾಡಿದವರು ಐಎಎಸ್ ಆಫೀಸರ್ ಅವನೀಶ ಶರಣ. ಅನೇಕರು ಈ ವಿಡಿಯೋ ಅನ್ನು ರೀಟ್ವೀಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿಯೂ ಅಜ್ಜಿ ಹೊಟ್ಟೆಪಾಡಿಗೆ ನಿತ್ಯವೂ ಓಡಾಡಿ ಚಿಂದಿ ಆಯ್ದು ಅದನ್ನು ಗುಜರಿ ಅಂಗಡಿಗೆ ಮಾರುವುದೆಂದರೆ ಮನಸ್ಸು ಪಿಚ್ಚೆನ್ನಿಸುತ್ತದೆ. ಸಹಾಯ ಮಾಡಿದರೂ ಆ ದಿನದ ಮಟ್ಟಿಗೆ. ದೀರ್ಘಕಾಲದಲ್ಲಿ ಆ ಸಹಾಯವನ್ನು ಕಾರ್ಯಗತಗೊಳಿಸಲು ಎಲ್ಲರೂ ಮುಂದಾಗಲಾರರು. ಅಲ್ಲೊಬ್ಬರು ಇಲ್ಲೊಬ್ಬರು ಈ ವಿಷಯವಾಗಿ ತೊಡಗಿಕೊಳ್ಳಬಹುದು. ಅಂಥವರ ಪೈಕಿ ಇದೀಗ ಬ್ಲಾಗರ್ ತರುಣ ಮಿಶ್ರಾ ಒಬ್ಬರು ಎನ್ನಿಸಿಕೊಂಡಿದ್ದಾರೆ. ಈ ಅಜ್ಜಿಗೆ ತರಕಾರಿ ಮಾರಿ ಜೀವನ ಸಾಗಿಸಲು ಎಲ್ಲ ರೀತಿಯ ಸಹಾಯ ಮಾಡಿದ್ದಾರೆ.

ಹೊಸ ವ್ಯಾಪಾರವನ್ನು ಆರಂಭಿಸಲು ತರಕಾರಿ ಗಾಡಿ, ತೂಕದ ಯಂತ್ರ, ಅವಶ್ಯಕ ತರಕಾರಿಗಳನ್ನು, ನಿತ್ಯಜೀವನಕ್ಕೆ ಬೇಕಾಗುವ ಬಟ್ಟೆಬರೆ, ಸೀರೆ, ದಿನಸಿಗಳನ್ನು ತರುಣ ಖರೀದಿಸಿ ಕೊಟ್ಟಿದ್ದಾರೆ.  ಖರೀದಿಸುವಾಗ ಈ ಅಜ್ಜಿಯನ್ನೂ ತಮ್ಮೊಂದಿಗೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುವುದು, ಮಧ್ಯದಲ್ಲೆಲ್ಲೋ ಗಲ್ಲಿಯಲ್ಲಿ ಅಜ್ಜಿಯೊಂದಿಗೆ ಕುಳಿತು ಚಹಾ ಕೂಡ  ಕುಡಿಯುವುದು, ನಂತರ ಎಲ್ಲ ಸಾಮಾನುಗಳನ್ನು ಅಜ್ಜಿಯ ಶೆಡ್ಡಿಗೆ ತಲುಪಿಸಿ ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆಯುವುದು ಎಲ್ಲವನ್ನೂ ಈ ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ನೋಡಿದ ನೆಟ್ಟಿಗರು ಬಹಳ ಖುಷಿಪಟ್ಟಿದ್ದಾರೆ. ಅಜ್ಜಿ ನೀಡಿದ ಆಶೀರ್ವಾದ ನಿಮ್ಮನ್ನು ಎತ್ತರಕ್ಕೇರಿಸುತ್ತದೆ ನೋಡುತ್ತಿರಿ ಬೇಕಿದ್ದರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಎಂಥ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ತರುಣ, ಮನ ತುಂಬಿಬರುತ್ತಿದೆ ಎಂದಿದ್ದಾರೆ ಮತ್ತೂ ಒಬ್ಬರು. ನಿಮ್ಮಂಥವರ ಸಂತತಿ ಹೆಚ್ಚಲಿ, ಭಾರತಕ್ಕೆ ಇಂಥವರ ಅವಶ್ಯಕತೆ ಇದೆ ಎಂದಿದ್ದಾರೆ ಮತ್ತೂ ಒಬ್ಬರು. ಸಿನೆಮಾ, ಶಾಪಿಂಗ್​, ಇಂಟರ್​ನೆಟ್​ ಎಂದು ಕಾಲ ಕಳೆಯುತ್ತಿರುವ ತರುಣ ಪೀಳಿಗೆ ಇಂಥ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಇದಕ್ಕೆ ತರುಣ ಮಾದರಿ ಎಂದಿದ್ದಾರೆ ಮಗದೊಬ್ಬರು.

ನಿಮಗೇನೆನ್ನಿಸುತ್ತದೆ ಈ ವಿಡಿಯೋ ನೋಡಿದರೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:46 am, Wed, 19 October 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?