ಗುಜರಾತ್ನ ಮೆಟ್ರೋ ಸ್ಟೇಷನ್ನಲ್ಲಿ ಗುಟ್ಕಾ ಕಲೆ, ನಾಗರಿಕ ಪ್ರಜ್ಞೆಯನ್ನು ಪ್ರಶ್ನಿಸುತ್ತಿರುವ ನೆಟ್ಟಿಗರು
Gutka : ಹತ್ತು ದಿನಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಅಹಮದಾಬಾದಿನ ಮೊಟೆರಾ ಸ್ಟೇಡಿಯಮ್ ಬಳಿಯ ಮೆಟ್ರೋ ಸ್ಟೇಷನ್ನ ಮೂಲೆಮೂಲೆಯಲ್ಲಿ ಗುಟ್ಕಾ ಕಲೆಗಳು ಕಾಣಿಸುತ್ತಿವೆ. ಹೀಗಾದರೆ ಸುಧಾರಣೆ ಹೇಗಾದೀತು ಎಂದು ನೆಟ್ಟಿಗರು ಕಳವಳಗೊಂಡಿದ್ದಾರೆ.
Viral Video : ನಿಗದಿತ ಸಮಯಕ್ಕೆ ಸ್ವಚ್ಛವಾದ ಮತ್ತು ಹವಾನಿಯಂತ್ರಿತ ರೈಲಿನಲ್ಲಿ ಪ್ರಯಾಣಿಸಬಹುದು ಎಂಬ ಕಾರಣಕ್ಕೆ ಕೊಲ್ಕತ್ತಾ, ಬೆಂಗಳೂರು, ಅಹಮದಾಬಾದ್, ಪುಣೆ, ಲಕ್ನೋ, ದೆಹಲಿಯ ಅನೇಕ ನಿವಾಸಿಗಳು ಮೆಟ್ರೋ ಪ್ರಯಾಣವನ್ನು ಇಷ್ಟಪಡುತ್ತಾರೆ. ಆದರೆ, ಅಕ್ಟೋಬರ್ 6 ರಂದು ಉದ್ಘಾಟನೆಗೊಂಡ ಗುಜರಾತಿನ ಅಹಮದಾಬಾದಿನ ಮೊಟೆರಾ ಸ್ಟೇಡಿಯಮ್ ಮೆಟ್ರೋ ಸ್ಟೇಷನ್ ಬಗ್ಗೆ ಮಾತ್ರ ಅಪಸ್ವರ ಕೇಳಿಬರುತ್ತಿದೆ. ಕಾರಣ ಈ ಸ್ಟೇಷನ್ನಲ್ಲಿ ಪ್ರಯಾಣಿಕರು ಎಲ್ಲೆಂದರಲ್ಲಿ ಗುಟ್ಕಾ ಉಗುಳಿ ಅನಾಗರಿಕತನ ಪ್ರದರ್ಶಿಸಿದ್ದಾರೆ. ನಿಲೇಶ್ ಷಾ ಎಂಬುವವರು ವಾಟ್ಸಪ್ನಲ್ಲಿ ಫಾರ್ವರ್ಡ್ ಆಗಿರುವ ವಿಡಿಯೋ ಅನ್ನು ಟ್ವೀಟ್ ಮಾಡಿದ್ಧಾರೆ.
What’s app forward.
ಇದನ್ನೂ ಓದಿIt is in Gujarati and about Ahmedabad Metro but is applicable to everyone.
Hope we will improve pic.twitter.com/qQapJnrF3A
— Nilesh Shah (@NileshShah68) October 15, 2022
ಈತನಕ ಸುಮಾರು 2 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ನೆಟ್ಟಿಗರು ಬಹಳ ಖಾರವಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ‘ಹೀಗಾದರೆ ಸುಧಾರಣೆ ಹೇಗಾದೀತು ಸರ್? ಯಾರೋ ಸೆಲೆಬ್ರಿಟಿಗಳು ಜಾಹೀರಾತಿನ ಮೂಲಕ ತಂಬಾಕಿನ ಉತ್ಪನ್ನಗಳಿಗೆ ಪ್ರಚಾರ ನೀಡುತ್ತಾರೆ. ಇದನ್ನು ನೋಡಿದ ಜನ ಪ್ರಭಾವಿತರಾಗಿ ನಾಗರಿಕ ಪ್ರಜ್ಞೆಯನ್ನು ಮರೆಯುತ್ತಾರೆ. ನಮ್ಮಲ್ಲಿ ನಾಗರಿಕ ಪ್ರಜ್ಞೆ ಜಾಗೃತವಾಗಬೇಕೆಂದರೆ ನಮಗೆ ಒಳ್ಳೆಯ ಸಂಸ್ಕೃತಿ ಮತ್ತು ಪರಿಸರ ಬೇಕು. ಆದರೆ ಇಂದು ನಾವಿದನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದಿದ್ದಾರೆ ಒಬ್ಬ ಖಾತೆದಾರರು. ‘ಅನಾಗರಿಕತನ ಪ್ರದರ್ಶಿದವರನ್ನು ಸಿಸಿಟಿವಿಯಲ್ಲಿ ಸಹಾಯದಿಂದ ಪತ್ತೆ ಮಾಡಬಹುದು’ ಎಂದಿದ್ದಾರೆ ಮತ್ತೊಬ್ಬರು.
ನಿಮಗೇನೆನ್ನಿಸುತ್ತಿದೆ ಈ ವಿಡಿಯೋ ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:04 am, Wed, 19 October 22