ಪೆಂಗ್ವಿನ್​ಮರಿಯ ನೀರಡಿಕೆ ನೀಗಿಸಿದ ಈ ವ್ಯಕ್ತಿಗೆ ನೆಟ್ಟಿಗರಿಂದ ಧನ್ಯವಾದ

Thirsty Baby Penguin : ಹೀಗೆ ನೀರು ಕುಡಿಸುತ್ತಿರುವ ವ್ಯಕ್ತಿ ಯಾರೆಂಬುದು ವಿಡಿಯೋದಲ್ಲಿ ಕಾಣಲಾರದು. ಬಾಟಲಿಯಿಂದ ಹರಿಯುತ್ತಿರುವ ನೀರು ಈ ಪುಟ್ಟಪೆಂಗ್ವಿನ್​ಗೆ ಜಲಪಾತದಂತೆ ತೋರಿರಲು ಸಾಕು. 4 ಲಕ್ಷ ಜನರ ಗಮನ ಸೆಳೆದಿದೆ ಈ ವಿಡಿಯೋ.

ಪೆಂಗ್ವಿನ್​ಮರಿಯ ನೀರಡಿಕೆ ನೀಗಿಸಿದ ಈ ವ್ಯಕ್ತಿಗೆ ನೆಟ್ಟಿಗರಿಂದ ಧನ್ಯವಾದ
Viral Video Man Offers Water to Thirsty Baby Penguin
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 19, 2022 | 6:00 PM

Viral Video : ದಯೆ, ಕರುಣೆ, ಸಹಾಯ ಈ ಮೂರು ಗುಣಗಳು ಮನುಷ್ಯತ್ವಕ್ಕೆ ಬಹಳೇ ಮುಖ್ಯ. ನಾವೆಲ್ಲ ಇಂದು ಬದುಕಿದ್ದೇವೆ ಎನ್ನುವುದಕ್ಕೆ ಸಾಕ್ಷಿಯೇ ಈ ಗುಣಗಳು. ಸಾಮಾನ್ಯವಾಗಿ ಈ ಗುಣಗಳು ನಮಗರಿವಿಲ್ಲದೆಯೇ ಎಳವೆಯಲ್ಲಿಯೇ ಮೈಗೂಡಿರುವಂಥವು. ಇಂಥ ವ್ಯಕ್ತಿಯು ಎದುರಿಗಿರುವವರು ವ್ಯಕ್ತಿಯೋ ಪ್ರಾಣಿಯೋ ಪಕ್ಷಿಯೋ ಎಂದೆಲ್ಲ ನೋಡದೆ ಸಹಾಯಕ್ಕೆ ಮುಂದಾಗುತ್ತಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ವ್ಯಕ್ತಿಯೊಬ್ಬರು ಮರಿಪೆಂಗ್ವಿನ್​ಗೆ ಬಾಟಲಿಯಿಂದ ನೀರು ಕುಡಿಸುತ್ತಿದ್ದಾರೆ. ಹೀಗೆ ನೀರು ಕುಡಿಸುತ್ತಿರುವ ವ್ಯಕ್ತಿ ಯಾರೆಂಬುದು ವಿಡಿಯೋದಲ್ಲಿ ಕಾಣಲಾರದು. ತುಂಬಾ ಪುಟ್ಟ ಮರಿ ಇದು. ಬಾಟಲಿಯ ಬಾಯಿ ಮಾತ್ರ ಇಷ್ಟು ದೊಡ್ಡದು. ಜಲಪಾತದಂತೆ ತೋರುತ್ತಿದೆಯೋ ಏನೋ ಈ ಮರಿಗೆ ಈ ನೀರಿನ ಹರಿವು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಗೆ ನಿಲ್ಲಲೂ ಕಲಿಯದಂಥ ಬಹಳೇ ಪುಟ್ಟಮರಿ ಇದು. ಗುಂಪಿನಿಂದ ತಪ್ಪಿಸಿಕೊಂಡ ಹಾಗಿದೆ. ಇದನ್ನು ನೋಡಿಕೊಳ್ಳುತ್ತಿದ್ದ ಅಪ್ಪ ಎಲ್ಲಿಹೋಗಿದ್ದಾನೋ ಮಾರಾಯಾ. ಈ ಪಾಪಚ್ಚಿ ಮಾತ್ರ ಹೀಗೆ ಅಲೆದುಕೊಂಡು, ಗಂಟಲಾರಿಸಿಕೊಂಡಿದೆ. ಅಂತೂ ಈ ವ್ಯಕ್ತಿ ಅದಕ್ಕೆ ನೀರು ಕೊಟ್ಟು ಕಾಪಾಡಿದ್ದಾರೆ. ಅಕ್ಟೋಬರ್ 17ರಂದು ಈ ವಿಡಿಯೋ ಅನ್ನು ಗೇಬ್ರಿಯಲ್ ಕಾರ್ನೋ ಎಂಬುವವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈತನಕ ಸುಮಾರು 4,63,000 ಜನರು ಈ ವಿಡಿಯೋ ನೋಡಿದ್ದಾರೆ. 26,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸುಮಾರು 8000ಕ್ಕಿಂತಲೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ.

ಈ ಮುದ್ದುಮರಿಯ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ನೀವು ಇದಕ್ಕೆ ಸಹಾಯ ಮಾಡಿದ್ದಕ್ಕೆ ಧನ್ಯವಾದ ಎಂದು ಒಬ್ಬ ನಟ್ಟಿಗು ಪ್ರತಿಕ್ರಿಯಿಸಿದ್ದಾರೆ. ಪಾಪ ಚಿಕ್ಕದು ಬೇಗ ತನ್ನ ಕುಟುಂಬವನ್ನು ಸೇರಿಕೊಳ್ಳಲಿ ಎಂದು ಅನೇಕರು ಹಾರೈಸಿದ್ಧಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:58 pm, Wed, 19 October 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ