Optical Illusion : ಈ ಕಾಡಿನಲ್ಲಿ ನರಿ ಅಡಗಿದೆ, 20 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
Brain Teaser : ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಈ ಕಾಡಿನ ಚಿತ್ರ ಬಹಳಷ್ಟು ಜನರಿಗೆ ಸವಾಲಾಗಿ ಪರಿಣಮಿಸಿದೆ. ಶೇ.1 ರಷ್ಟು ಜನರು ಮಾತ್ರ ಉತ್ತರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿಮಗೆ?
Optical Illusions : ಇತ್ತೀಚೆಗೆ ಸಾಕಷ್ಟು ಬ್ರೇನ್ಟೀಸರ್ಗಳನ್ನು ಇದೇ ವೇದಿಕೆಯಲ್ಲಿ ನೋಡಿದ್ದೀರಿ. ಸಾಕಷ್ಟು ಬ್ರೇನ್ಟೀಸರ್ಗಳ ಉತ್ತರಗಳನ್ನು ಕಂಡುಹಿಡಿದು ಖುಷಿಪಟ್ಟಿದ್ದೀರಿ. ಆದರೆ ಈಗ ಕೊಟ್ಟಿರುವ ಬ್ರೇನ್ ಟೀಸರ್ ಮಾತ್ರ ಬಹಳ ಕಷ್ಟಕರ ಎನ್ನುತ್ತಿದ್ದಾರೆ ನೆಟ್ಟಿಗರು. 20 ಸೆಕೆಂಡಿನಲ್ಲಿ ಗುರುತಿಸಲು ಸಾಧ್ಯವಿಲ್ಲ ಎಂದೂ ಹೇಳುತ್ತಿದ್ದಾರೆ. ಅಲ್ಲದೆ ಈ ತನಕ ಶೇ.1ರಷ್ಟು ಜನ ಮಾತ್ರ 20 ಸೆಕೆಂಡುಗಳಲ್ಲಿ ಗುರುತಿಸಲು ಶಕ್ಯವಾಗಿದೆ ಎಂದಿದ್ದಾರೆ. ನಿಮಗೆ ಇದು ಸಾಧ್ಯವಾಗುವುದೆ? ಪ್ರಯತ್ನಿಸಿ.
ಎತ್ತರವಾದ ಮರಗಳಿಂದ ತುಂಬಿದ ಈ ಕಾಡಿನಲ್ಲಿ ಕಾಲುದಾರಿಯೂ ಇದೆ. ಇಲ್ಲೇ ಎಲ್ಲೋ ಅಡಗಿರುವ ನರಿ ನಿದ್ರಿಸುತ್ತಿದೆ. ನಿಮಗೆ ಕೊಟ್ಟಿರುವ ಸಮಯ ಬರೀ 20 ಸೆಕೆಂಡುಗಳು ಮಾತ್ರ. ಹತ್ತಿರದಿಂದ ನೋಡಿದರೆ ನರಿ ಕಾಣುವುದೆ? ಎಷ್ಟೋ ಜನ ಹೀಗೆ ಹತ್ತಿರದಿಂದ ನೋಡಿದರೂ ನರಿಯ ಸುಳಿವು ಸಿಗದೆ ಬೇಸರಪಟ್ಟಿದ್ದಾರೆ.
ಸಿಗಲಿಲ್ಲವಾ?
ಈ ಚಿತ್ರದ ಬಲಮೂಲೆಯ ಆಕಾಶ ಗಮನಿಸಿ. ತೆಳ್ಳಗಿನ ರೆಂಬೆಕೊಂಬೆಗಳ ನಡುವೆ ಮಲಗಿರುವ ನರಿ ಕಾಣುತ್ತದೆ. ಮೊದಲಿಗೆ ಗೋಚರಿಸಲಾಗದು. ಮತ್ತ ಮತ್ತೆ ನೋಡಿ ವೃತ್ತಾಕಾರದಲ್ಲಿ ಮಲಗಿರುವ ನರಿ ಕಾಣುತ್ತದೆ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:33 am, Sat, 8 October 22