ಜರ್ಮನ್ಲ್ಲಿದೆ ಎಂದಿಗೂ ಬಳಸದ 10,000 ಬೆಡ್‌ರೂಮ್ ಉಳ್ಳ ಹೋಟೆಲ್
ಜರ್ಮನಿಯ ಬಾಲ್ಟಿಕ್ ದ್ವೀಪದ ಬಿಳಿ ಮರಳಿನ ಕಡಲತೀರದಲ್ಲಿ 10,000 ಮಲಗುವ ಕೋಣೆ ಇರುವ ನಾಜಿ ಹೋಟೆಲ್ ವಿಶ್ವದ ಅತಿದೊಡ್ಡ ಹೋಟೆಲ್
ವಿಚಿತ್ರ ಎನಿಸಿದರು ಇದು ಸತ್ಯ ಜರ್ಮನಿಯ ಬಾಲ್ಟಿಕ್ ದ್ವೀಪದ ಬಿಳಿ ಮರಳಿನ ಕಡಲತೀರದಲ್ಲಿ 10,000 ಮಲಗುವ ಕೋಣೆ ಇರುವ ನಾಜಿ ಹೋಟೆಲ್ ವಿಶ್ವದ ಅತಿದೊಡ್ಡ ಹೋಟೆಲ್ ಇದೆ. ಈ ಹೋಟೆಲ್ನ್ನು ಎಂದಿಗೂ ಬಳಸಿಲ್ಲ. ಇದನ್ನು ನಿರ್ಮಿಸಿ ಸುಮಾರು 70 ವರ್ಷಗಳಾದರೂ ಇಲ್ಲಿಯವರೆಗು ಯಾರು ಇದನ್ನು ಬಳಸಿಲ್ಲ. ಈ ಹೋಟೆಲ್ನ್ನು 1936 ಮತ್ತು 1939 ರ ನಡುವೆ ನಿರ್ಮಿಸಲಾಯಿತು.
ಜರ್ಮನ್ ಕೆಲಸಗಾರರಿಗೆ ವಿಶ್ರಾಂತಿ ಪಡೆಯಲು ಮತ್ತು ನಾಜಿ ಧರ್ಮ ಪ್ರಚಾರಕರು ವಿಶ್ರಾಂತಿ ಪಡೆಯಲು ಈ ಹೋಟೆಲ್ನ್ನು ನಿರ್ಮಿಸಲಾಯಿತು. ಸ್ಥಳೀಯರು ಈ ಹೋಟೆಲ್ನ್ನು ಕೊಲೋಸಸ್ ಎಂದು ಕರೆಯುತ್ತಾರೆ. ಈ ಹೋಟೆಲ್ ಒಂದೇ ರೀತಿಯ ಎಂಟು ಕಟ್ಟಡಗಳನ್ನು ಒಳಗೊಂಡಿದೆ. ಇದು 4.5 ಕಿಮೀ ಉದ್ದವಿದೆ. ಕಡಲತೀರದಿಂದ ಸರಿಸುಮಾರು 150 ಮೀ. ದೂರವಿದೆ. ಇದನ್ನು ನಿರ್ಮಿಸಲು 9,000 ಕಾರ್ಮಿಕರು ಮೂರು ವರ್ಷ ಸಮಯ ತೆಗೆದುಕೊಂಡರು. ಈ ಹೋಟೆಲ್ ಚಿತ್ರಮಂದಿರ, ಸಭಾಂಗಣಗಳು, ಈಜುಕೊಳಗಳನ್ನು ಹೊಂದಿದೆ.
5 ರಿಂದ 2.5 ಮೀ ವಿಸ್ತೀರ್ಣದ ಪ್ರತಿ ಕೊಠಡಿಯು ಎರಡು ಹಾಸಿಗೆಗಳು, ವಾರ್ಡ್ರೋಬ್ ಮತ್ತು ಸಿಂಕ್ನ್ನು ಹೊಂದಿದೆ. ಪ್ರತಿ ಮಹಡಿಯಲ್ಲಿ ಸಾಮೂಹಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳು ಮತ್ತು ಬಾಲ್ರೂಂಗಳು ಇವೆ. ಮಧ್ಯದಲ್ಲಿ, ಮಿಲಿಟರಿ ಆಸ್ಪತ್ರೆ ಇದೆ.
2011 ರಲ್ಲಿ, ಒಂದು ಬ್ಲಾಕ್ನ್ನು 400 ಹಾಸಿಗೆಯ ಹಾಸ್ಟೆಲ್ ಆಗಿ ಪರಿವರ್ತಿಸಲಾಯಿತು. ಟೆನ್ನಿಸ್ ಕೋರ್ಟ್‌ಗಳು ಮತ್ತು ಈಜುಕೊಳ ಮತ್ತು ಸಣ್ಣ ಶಾಪಿಂಗ್ ಸೆಂಟರ್‌ಗಳನ್ನು ಒಳಗೊಂಡಿರುವ 300 ಹಾಸಿಗೆಗಳೊಂದಿಗೆ ಹೋಟೆಲ್ನ್ನು ಆಧುನಿಕ ರಜಾದಿನದ ರೆಸಾರ್ಟಾಗಿ ಪರಿವರ್ತಿಸುವ ಯೋಜನೆ ರೂಪಿಸಲಾಗಿದೆ.