‘ಅಯ್ಯೋ ನಮ್ಮ ಪ್ರಿಯ ದೋಸೆಯೂ ‘ಜಂಕ್ ಫುಡ್’ ಆಗುತ್ತಿದೆಯೇ?’ ನೆಟ್ಟಿಗರ ಅಳಲು
Dosa : ಈ ದೋಸೆಯೊಳಗೆ ಒಂದಾದ ಮೇಲೊಂದು ಪದಾರ್ಥಗಳನ್ನು ಹಾಕುವುದನ್ನು ನೋಡಿಯೇ ಬಹುಶಃ ಜನ್ಮದಲ್ಲಿ ದೋಸೆ ಬಗ್ಗೆ ವೈರಾಗ್ಯ ತಾಳುತ್ತೀರೇನೋ ಎಂಬ ಭಯ ಉಂಟಾಗುತ್ತಿದೆ.
Viral Video : ದೋಸೆ ಎಂದರೆ ಮೂರು ಸುತ್ತು ಕಾವಲಿ ಮೇಲೆ ಹಿಟ್ಟು ಹುಯ್ದರೆ ಮುಗಿಯಿತು ಎನ್ನುವ ಕಾಲ ಇದಲ್ಲವೇ ಅಲ್ಲ. ಮಸಾಲೆ ದೋಸೆ, ಸೆಟ್ ದೋಸೆ, ಮೆದು ದೋಸೆ, ತುಪ್ಪದ ದೋಸೆ, ರವಾ ದೋಸೆ, ಖಾಲೀ ದೋಸೆ ತಿಂದ ದಕ್ಷಿಣ ಭಾರತೀಯರಿಗೆ ಉತ್ತರ ಭಾರತದ ಮಂದಿ ಬೀದಿಬದಿ ಮಾಡುವ ಈ ದೋಸೆಯ ಬಗ್ಗೆ ತಕರಾರು ಇದ್ದೇ ಇದೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ಈ ದೋಸೆಯೊಳಗೆ ಒಂದಾದ ಮೇಲೊಂದು ಪದಾರ್ಥಳು ಬೀಳುವುದನ್ನು ನೋಡುತ್ತ ನೋಡುತ್ತ ಬೇಸ್ತು ಬೀಳುವುದೊಂದು ಬಾಕಿ!
View this post on Instagram
ಇತ್ತೀಚಿಗೆ ಬೀದಿಬದಿಯ ಹೋಟೆಲ್ ವ್ಯಾಪಾರಿಯೊಬ್ಬರು ಅದ್ದೂರಿ ದೋಸೆ ನೋಡಿದಿರಲ್ಲ? ತವಾ ಮೇಲೆ ಹರಡಿದ ದೋಸೆ ಹಿಟ್ಟಿನ ಮೇಲೆ ಸರೀ ಬೆಣ್ಣೆ ಹಾಕುತ್ತಾರೆ. ಜೊತೆಗೆ ಗೋಡಂಬಿ ಮತ್ತು ಖಾರಪುಡಿ, ಟೊಮ್ಯಾಟೋ, ಕ್ಯಾಪ್ಸಿಕಂ, ಈರುಳ್ಳಿ, ಮೆಯಾನೇಸ್ ಸಾಸ್ ಇಲ್ಲಿಗೆ ದೋಸೆ ಮಾಡುವುದು ಮುಗಿಯಿತು ಎಂದು ನೀವು ಅಂದುಕೊಂಡರೆ ಖಂಡಿತಾ ತಪ್ಪು! ಇದೆಲ್ಲವನ್ನೂ ದೋಸೆಯ ಮೇಲೆ ತೀಡಿತೀಡಿ ಇಡಲಾಗುತ್ತದೆ. ಭರ್ತಿ ಚೀಝ್ ತುರಿದು ಹರಡಲಾಗುತ್ತದೆ. ನಂತರ ಉರಿಯುತ್ತಿರುವ ಮಣ್ಣಿನ ಮಡಕೆ ತಂದು ಅದರಲ್ಲಿ ತ್ರಿಕೋನಾಕಾರದ ದೋಸೆಯನ್ನು ಸುತ್ತಿ ಇಡಲಾಗುತ್ತದೆ.
ಇದನ್ನು ನೋಡಿದ ಒಬ್ಬ ನೆಟ್ಟಿಗರಂತೂ, ‘ನಾನು ನೋಡಿದ ಅತ್ಯಂತ ಕೆಟ್ಟ ದೋಸಾ ಮಾಡುವ ವಿಧಾನ’ ಎನ್ನುತ್ತಿದ್ದಾರೆ. ‘ಇಷ್ಟೊಂದು ಚೀಝ್, ಬೆಣ್ಣೆಯನ್ನು ತಿಂದವರ ಆರೋಗ್ಯ ಏನಾಗಬೇಕು?’ ಎಂದು ಮತ್ತೊಬ್ಬರು ತಕರಾರು ಎತ್ತಿದ್ದಾರೆ. ‘ಇದನ್ನು ನಾನಂತೂ ಜಂಕ್ ದೋಸೆ ಎನ್ನುತ್ತೇನೆ’ ಎಂದಿದ್ದಾರೆ ಮಗದೊಬ್ಬರು. ‘ನನ್ನ ಪ್ರಿಯವಾದ ದೋಸೆ ಕೂಡ ಜಂಕ್ ಫುಡ್ ಆಯಿತೇ?’ ಎಂದು ಬೇಸರಿಸಿಕೊಂಡಿದ್ದಾರೆ ಹಲವರು.
ನಿಮಗೆ ಈ ದೋಸೆ ಬೇಕೆನ್ನಿಸುತ್ತಿದೆಯಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:35 pm, Fri, 7 October 22