ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಪಂಜಾಬಿನ ದೈಹಿಕ ತರಬೇತಿ ಶಿಕ್ಷಕಿಯರು
Suicide Threat : ಕೆಲಸವನ್ನು ಕಾಯಂಗೊಳಿಸದಿದ್ದರೆ ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಈ ಶಿಕ್ಷಕಿಯರು ಬೆದರಿಸಿದರು. ಇವರನ್ನು ಬೆಂಬಲಿಸಿ ಕೆಲವರು ಪ್ರತಿಭಟನೆಯನ್ನೂ ಮಾಡಿದರು. ಈ ವಿಡಿಯೋ ಈಗ ವೈರಲ್.
Viral Video : ಪಂಜಾಬ್ನ ಮೊಹಾಲಿಯ ಸೊಹಾನಾದಲ್ಲಿರುವ ಸಿಂಗ್ ಶಾಹೀದನ್ ಗುರುದ್ವಾರದ ಬಳಿ ಇಬ್ಬರು ದೈಹಕ ತರಬೇತಿ ಶಿಕ್ಷಕಿಯರು ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಯ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಈ ಘಟನೆ ಬುಧವಾರದ ಮಧ್ಯಾಹ್ನದಂದು ನಡೆದಿದೆ. ಸರ್ಕಾರಿ ಶಾಲೆಗಳಲ್ಲಿ ದೈಹಿಕ ತರಬೇತಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಇವರು ಈ ನಿರ್ಧಾರ ತಳೆದು ಪ್ರತಿಭಟಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಿಂದಿನ ‘ಪಂಜಾಬ್ ಸರ್ಕಾರವು ಉದ್ಯೋಗ ಕಾಯಂಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಅದೂ ಹುಸಿಯಾಯಿತು. ನಂತರ ಆಮ್ ಆದ್ಮಿ ಪಕ್ಷ ಕೂಡ ಏಳು ತಿಂಗಳಾದರೂ ಸುಳ್ಳು ಭರವಸೆ ನೀಡುತ್ತಲೇ ಬರುತ್ತಿದೆ’ ಎಂದು ದೈಹಿಕ ತರಬೇತಿ ಶಿಕ್ಷಕಿ ಸಿಪ್ಪಿ ಶರ್ಮಾ ಆರೋಪಿಸಿದ್ದಾರೆ.
Physical training instructor teacher Sippy Sharma says, “We were guaranteed jobs by previous Punjab govt, but never got one. At that time, AAP assured us of jobs, but even after 7months of AAP govt,still false assurance being given to us.”
ಇದನ್ನೂ ಓದಿ(Source:Selfmade video by Sippy Sharma) pic.twitter.com/oM7aTJLdII
— ANI (@ANI) October 5, 2022
ಸಿಪ್ಪಿ ಶರ್ಮಾ ಮತ್ತು ವೀರಪಾಲ್ ಕೌರ್ ಈ ಇಬ್ಬರೂ ಶಿಕ್ಷಕಿಯರು ಹೀಗೆ ಆತ್ಮಾಹುತಿ ಬೆದರಿಕೆ ಹಾಕಿದ್ದಕ್ಕೆ, ಅವರ ಬೆಂಬಲಿಗರು ವಿಮಾನ ನಿಲ್ದಾಣ ರಸ್ತೆಗುಂಟ ಪ್ರತಿಭಟನೆಗಿಳಿದ ಘಟನೆಯೂ ಆ ದಿನವೇ ನಡೆದಿದೆ.
ಯಾವ ಸರ್ಕಾರ ಬಂದರೂ ಸಮಸ್ಯೆಗಳು ಮಾತ್ರ ಹೆಚ್ಚುತ್ತಲೇ ಇವೆ. ಮನನೊಂದವರು ಉಪಾಯಗಾಣದೆ ಇನ್ನೇನು ಮಾಡಲು ಸಾಧ್ಯ? ಆದಷ್ಟು ಬೇಗ ಇಂಥ ಲಕ್ಷಾಂತರ ಮಂದಿಯ ಅಳಲು ಸರ್ಕಾರಕ್ಕೆ ತಲುಪಲಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:12 pm, Fri, 7 October 22