‘ನೀ ಕಥೆ ಓದುವ ರೀತಿಗೆ ನಾನಂತೂ ಹೀಗೇ ನಗುವುದು ಪಪ್ಪಾ’ ವೈರಲ್ ವಿಡಿಯೋ
Baby Laughing : ಬೂ...! ಕಥೆಯ ಪಾತ್ರಗಳನ್ನು ಅನುಕರಿಸಿ ತೋರಿಸುವ ಈ ಅಪ್ಪನ ರೀತಿಗೆ ಮಗು ನಗುವ ರೀತಿ ನೋಡಿ. ಅಪ್ಪ ಮಗುವಿನ ಈ ಜೋಡಿ ನೆಟ್ಟಿಗರನ್ನು ಮರಳು ಮಾಡುತ್ತಿದೆ.
Viral Video : ಈ ಪುಟ್ಟಕೂಸುಗಳದ್ದು ಅಮ್ಮನೊಂದಿಗಿನ ಬಂಧ ಒಂದು ರೀತಿಯಾದರೆ ಅಪ್ಪನೊಂದಿಗಿನ ಬಂಧವೇ ಮತ್ತೊಂದು ರೀತಿ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಕಥೆ ಹೇಳುತ್ತಿರುವ ಅಪ್ಪ ನಡುನಡುವೆ ಆಯಾ ಪಾತ್ರಗಳ ಧ್ವನಿಯನ್ನು, ಸಂಭಾಷಣೆಯನ್ನು ಅನುಕರಿಸುತ್ತಿದ್ದಾರೆ. ಆಗ ಈ ಮಗು ನಗುವ ರೀತಿ ಮಾತ್ರ ಅನುಪಮ. ಮಗುವಿನಿಂದ ಇಂಥ ನಗು ಹೊಮ್ಮುವುದು, ಹೊಮ್ಮಿಸುವುದು ಮಾತ್ರ ಎಂದಿಗೂ ಅನನ್ಯ. ಟ್ವಿಟರ್ನ ಗುಡ್ನ್ಯೂಸ್ ಕರೆಸ್ಪಾಂಡೆಂಟ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
Storytime with dad. Watch this baby crack up at her dad reading the sound “BOOOO!” (?:beccaleigh288)
— GoodNewsCorrespondent (@GoodNewsCorres1) October 4, 2022
ಬೂ… ಎಂದು ಅಪ್ಪ ತನ್ನ ಕಥೆಯ ಮಧ್ಯೆ ಹೀಗೆ ಹೇಳಿದಾಗೆಲ್ಲ ಮಗು ಕಿಲಕಿಲನೆ ನಗುವ ರೀತಿ ನೆಟ್ಟಿಗರನ್ನು ಮೋಡಿ ಮಾಡುತ್ತಿದೆ. ಅದರ ನಗುವನ್ನು ಕಂಡು ಈ ಅಪ್ಪ ಮತ್ತೆ ಮತ್ತೆ ವಿವಿಧ ರೀತಿಯಲ್ಲಿ ಬೂ ಎನ್ನುತ್ತಾರೆ. ಅದಕ್ಕೆ ತಕ್ಕಂತೆ ನಗುತ್ತಲೇ ಇರುತ್ತದೆ ಮಗು. 3 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 1,000ಕ್ಕಿಂತಲೂ ಹೆಚ್ಚು ರೀಟ್ವೀಟ್, 12,000ಕ್ಕಿಂತಲೂ ಹೆಚ್ಚು ಲೈಕ್ಸ್ ಈ ವಿಡಿಯೋಗೆ ಲಭ್ಯವಾಗಿವೆ.
ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ ಬಹುಶಃ ನಿಮ್ಮ ಇಂದಿನ ಬೇಸರ ಕಳೆಯುವಲ್ಲಿ ಯಶಸ್ವಿಯಾಗಬಹುದೇನೋ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ