ಹಾಡುತ್ತಿರುವ ಆ ಒಬ್ಬರು ಯಾರು? ಉಳಿದವರೆಲ್ಲ ಲಿಪ್ಸಿಂಕ್ ಮಾಡುತ್ತಿದ್ದಾರೆ
Lip Syncing : ಇಲ್ಲಿರುವ ಇಷ್ಟು ಕಲಾವಿದರಲ್ಲಿ ನಿಜವಾಗಿಯೂ ಹಾಡುತ್ತಿರುವವರು ಯಾರು? ಉಳಿದವರೆಲ್ಲ ಲಿಪ್ ಸಿಂಕ್ ಮಾಡುತ್ತಿದ್ದಾರೆ. ನೋಡಿ ಗುರುತಿಸಬಹುದಾ?
Viral Video : ಲಾಸ್ ಏಂಜಲೀಸ್ನ ಕ್ಯಾಪೆಲ್ಲಾ ತಂಡವು ಪ್ರಸ್ತುತಪಡಿಸಿದ ಈ ಹಾಡಿನ ವಿಡಿಯೋ ನೋಡಿ. ನೆಟ್ಟಿಗರನ್ನು ಮೋಡಿ ಮಾಡಿದ್ದಷ್ಟೇ ಅಲ್ಲ ತಲೆಕೆರೆದುಕೊಳ್ಳುವಂತೆಯೂ ಮಾಡಿದೆ. ಏಕೆಂದರೆ ಈ ತಂಡವು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ ಒಂದು ಸವಾಲನ್ನು ಎಸೆದಿದೆ. ಆ ಸವಾಲನ್ನೇ ಈಗ ನಿಮ್ಮೆದುರು ಇಡುತ್ತಿದ್ದೇವೆ. ಇಲ್ಲಿ ಒಟ್ಟು ಏಳು ಜನ ಕಲಾವಿದರಿದ್ದಾರೆ. ಹಾಡುತ್ತಿರುವವರು ಒಬ್ಬರೇ ಒಬ್ಬರು, ಉಳಿದವರು ಹಾಡಿಗೆ ತಕ್ಕಂತೆ ಲಿಪ್ಸಿಂಕ್ ಮಾಡುತ್ತಿದ್ದಾರೆ. ‘ಬ್ಯಾಡ್ ಬ್ಲಡ್’ ಹಾಡನ್ನು ಹಾಡುತ್ತಿರುವವರು ಯಾರೆಂದು ಗುರುತಿಸಬಲ್ಲಿರಾ?
ಇದನ್ನೂ ಓದಿView this post on Instagram
ಗೊತ್ತಾಯಿತಾ ಯಾರು ಹಾಡುತ್ತಿರುವರೆಂದು? ಕೆಲ ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಈಗಾಗಲೇ 8.2ಕ್ಕಿಂತಲೂ ಹೆಚ್ಚು ವೀಕ್ಷಕರನ್ನು ಸೆಳೆದಿದೆ. ಸಾಕಷ್ಟು ಜನರು, ನಿಜವಾಗಲೂ ಹಾಡುತ್ತಿರುವ ಏಕೈಕ ಕಲಾವಿದರು ಯಾರೆಂದು ಊಹಿಸಿ ಕಮೆಂಟ್ ಮಾಡಿದ್ದಾರೆ. ಕೆಲವರು ಲಿಪ್ ಸಿಂಕ್ ಮಾಡಿದವರನ್ನು ಮೆಚ್ಚಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನ ಈ ಪೋಸ್ಟ್ ಇಷ್ಟಪಟ್ಟಿದ್ದಾರೆ.
ಎಮೆಲಿಯಾ ಎನ್ನುವವರೇ ಈ ಹಾಡನ್ನು ಹಾಡಿದ್ದು, ಉಳಿದವರೆಲ್ಲರೂ ಲಿಪ್ಸಿಂಕ್ ಮಾಡಿದ್ದಾರೆ ಎಂದಿದ್ದಾರೆ ಅನೇಕರು.
ನಿಮ್ಮ ಉತ್ತರ ಏನಾಗಿತ್ತು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:16 pm, Sat, 8 October 22