ಆನ್ಲೈನಲ್ಲಿ ಹಾವಳಿ ಎಬ್ಬಿಸಿರುವ ಈ ಮುದ್ದುಪ್ರಚಂಡೆಯರ ವಿಡಿಯೋ
Mr and Mrs 55 : ‘ಜಾನೆ ಕಂಹಾ ಮೇರಾ ಜಿಗರ್ ಗಯಾ ಜೀ’ ಹಾಡಿಗೆ ಅಭಿನಯಿಸಿದ್ದಾರೆ ಈ ಅಕ್ಕತಂಗಿಯರು. ಒಂದು ಮಿಲಿಯನ್ಗಿಂತಲೂ ಹೆಚ್ಚು ಜನ ಇದನ್ನು ನೋಡಿ ಖುಷಿಪಟ್ಟಿದ್ದಾರೆ. ನೀವೂ ನೋಡಿ.
Viral Video : ರೀಲ್ಸ್ ರೀಲ್ಸ್ ರೀಲ್ಸ್. ಬದುಕೇ ಪೂರ್ತಿ ರೀಲ್ಸ್ಮಯವಾಗಿ ಹೋಗಿದೆ. ಅದರಲ್ಲೂ ಕೊರೊನಾ ದೆಸೆಯಿಂದಲಂತೂ ಇದರ ಹಾವಳಿ ಕೇಳುವುದೇ ಬೇಡ. ಈಗ ಈ ಮುದ್ದಾದ ಅಕ್ಕತಂಗಿಯರು ಆನ್ಲೈನ್ನಲ್ಲಿ ಹಾವಳಿ ಎಬ್ಬಿಸಿದ್ದಾರೆ. ‘ಮಿಸ್ಟರ್ ಅಂಡ್ ಮಿಸೆಸ್ 55’ ಸಿನೆಮಾದ ‘ಜಾನೆ ಕಂಹಾ ಮೇರಾ ಜಿಗರ್ ಗಯಾ ಜೀ’ ಎಂಬ ಹಾಡಿಗೆ ಅಭಿನಯಿಸಿದ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ ರಮೇಶ್ ಭಂಡಾರಿ ಎಂಬುವವರು, 50ರ ದಶಕದಲ್ಲಿ ಬಿಡುಗಡೆಗೊಂಡ ಈ ಚಿತ್ರದ ಹಾಡನ್ನು ಕೇಳುವುದೇ ಒಂದು ಚೆಂದದ ಅನುಭವ. ಅದಕ್ಕೆ ಈ ಮಕ್ಕಳು ಹೀಗೆಲ್ಲ ಮುದ್ದುಮುದ್ದಾಗಿ ಅಭಿನಯಿಸಿದ ಮೇಲಂತೂ…
View this post on Instagram ಇದನ್ನೂ ಓದಿ
ಶಾಲೆಗೆ ಹೊರಟು ನಿಂತ ಅಕ್ಕತಂಗಿಯರನ್ನು ತಡೆದು ಹೀಗೆ ರೀಲ್ಸ್ ಮಾಡಿಸಿದಂತಿದೆ. ಒಂದು ಮಿಲಿಯನ್ ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. 10,000ಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯ ಇಷ್ಟಪಟ್ಟಿದ್ದಾರೆ. ಆಹಾ ಆ ಮುರಿದ ಹಲ್ಲು! ಸಾಕಷ್ಟು ಜನರ ಗಮನ ಅಲ್ಲಿಯೇ ಹೋದಹಾಗಿದೆ. ಎಂಥಾ ಡ್ರಾಮಾಬಾಝ್ ಈ ಮಕ್ಕಳದು! ಲವ್ ಯೂ ಎಂದಿದ್ದಾರೆ ನೆಟ್ಟಿಗರೊಬ್ಬರು. ಚಿಕ್ಕದು ಮಾತ್ರ ಬಹಳ ಮಜವಾಗಿದೆ ಎಂದು ತಂಗಿಯನ್ನು ಕೊಂಡಾಡಿದ್ದಾರೆ ಇನ್ನೂ ಒಬ್ಬರು .
ಈ ಹಾಡನ್ನು ಅಂದು ಸಂಯೋಜಿಸಿದವರು ಒ.ಪಿ. ನಯ್ಯರ್. ಈ ಹಾಡಿನಲ್ಲಿ ಅಭಿನಯಿಸಿದವರು ಜಾನಿ ವಾಕರ್ ಮತ್ತು ಯಾಸ್ಮಿನ್.
ಹೀಗೆ ನೀವೂ ಒಮ್ಮೆ ಅಭಿನಯಿಸಿ ರೀಲ್ ಮಾಡಿದರೆ ಹೇಗಿರುತ್ತೆ? ಕಲ್ಪಿಸಿಕೊಳ್ಳುತ್ತಿದ್ದೀರಾ?
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ
Published On - 1:56 pm, Sat, 8 October 22