AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್​ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ

Delivery Agent : ಆರ್ಡರ್ ಮಾಡಿದ್ದು ತಡವಾದರೆ ಕಂಪೆನಿಗೆ ಕಂಪ್ಲೆಂಟ್​ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ. ಆದರೆ ಈ ಗ್ರಾಹಕರು ಮಾತ್ರ ವಿಭಿನ್ನ! ನೋಡಿ ವಿಡಿಯೋ

ತಡವಾಗಿ ಬಂದಿದ್ದಕ್ಕೆ ಝೊಮ್ಯಾಟೋ ಏಜೆಂಟ್​ಗೆ ಆರತಿ ಮಾಡಿ ಸ್ವಾಗತಿಸಿದ ಗ್ರಾಹಕ
ಆಯಿಯೇ ಆಪಕಾ ಇಂತಜಾರ್ ಥಾ
TV9 Web
| Edited By: |

Updated on:Oct 08, 2022 | 1:06 PM

Share

Viral Video : ಅಡುಗೆ ಮಾಡಲು ಸಮಯವಿಲ್ಲವೆಂದೋ, ಉದಾಸೀನವೆಂದೋ ಅಥವಾ ಇನ್ನೇನೋ ಕಾರಣಕ್ಕೆ ಫುಡ್​ ಆರ್ಡರ್ ಮಾಡುತ್ತೀರಿ. ಆದರೆ ಕಾರಣಾಂತರದಿಂದ ಡೆಲಿವರಿ ಏಜೆಂಟ್​ ತಡವಾಗಿ ನಿಮ್ಮನ್ನು ತಲುಪುತ್ತಾರೆ. ಆಗ ಏನು ಮಾಡುತ್ತೀರಿ? ಜೋರಾಗಿ ಕೂಗಾಡುತ್ತೀರಿ, ಮೌನ ತಾಳುತ್ತೀರಿ ಅಥವಾ ತಡವಾಗಿದ್ದಕ್ಕೆ ಕಂಪೆನಿಗೆ ಕಂಪ್ಲೆಂಟ್​ ಮಾಡುತ್ತೀರಿ, ಪರ್ಯಾಯವಾಗಿ ಇನ್ನೇನೋ ಆಫರ್ ಪಡೆಯುತ್ತೀರಿ. ಇದೆಲ್ಲವೂ ಮಾಮೂಲು. ಆದರೆ ಆ ವಿಳಂಬಕ್ಷಣಗಳನ್ನು ಸಂತಸಕ್ಕೆ ತಿರುಗಿಸಿಕೊಳ್ಳುವ ಹಾಗೆ ಎಂದಾದರೂ ಯೋಚಿಸಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ. ಸಂಜೀವ್ ತ್ಯಾಗಿ ಎನ್ನುವ ಇನ್​ಸ್ಟಾಗ್ರಾಂ ಖಾತೆದಾರರು ದಸರಾ ದಿನದಂದು ಹಲ್ದೀರಾಮ್ಸ್​ನಿಂದ ಚೋಲೆ ಭಟುರೆ ಆರ್ಡರ್ ಮಾಡಿದ್ದರು. ಏಜೆಂಟ್​ ಒಂದು ಗಂಟೆ ತಡವಾಗಿ ಬಂದರು ಮುಂದೇನಾಯಿತು ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಗು ಬರುತ್ತಿದೆಯಲ್ಲ? ದೆಹಲಿಯ ಟ್ರಾಫಿಕ್ ಜಾಮ್​ನಿಂದ ಒಂದು ಗಂಟೆ ತಡವಾಗಿ ಬಂದ ಡೆಲಿವರಿ ಏಜೆಂಟ್​​ ಇಂಥ ಸರ್​ಪ್ರೈಝ್​ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ‘ಆಯಿಯೇ ಆಪಕಾ ಇಂತಜಾರ ಥಾ’ ಎಂದು ಹಾಡುತ್ತ ಡೆಲಿವರಿ ಏಜೆಂಟ್​ಗೆ ಸಂಜೀವ್​ ತಿಲಕ ಹಚ್ಚಿ ಸ್ವಾಗತಿಸಿದ್ದಾರೆ. ತಡವಾಗಿದ್ದಕ್ಕೆ ಬೈಗುಳ ತಿನ್ನಬೇಕಲ್ಲ ಎಂದುಕೊಂಡು ಬಂದಿದ್ದ ಏಜೆಂಟ್​ ನಸುನಗುತ್ತ ಆರತಿ ಮಾಡಿಸಿಕೊಂಡು ವಾಪಾಸಾಗಿದ್ದಾರೆ.

ಈ ವಿಡಿಯೋ ಅನ್ನು ಮೂರು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಪ್ರತಿಕ್ರಿಯೆಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ಬಹಳ ಖುಷಿ ಕೊಡುತ್ತದೆ ಈ ವಿಡಿಯೋ ಎಂದು ಕೆಲವರು, ಈ ಕಾಯುವಿಕೆ ಮತ್ತು ತಡ ಎನ್ನುವ ಸನ್ನಿವೇಶವನ್ನು ಹೀಗೆ ಸಂತಸದಿಂದ ಮಾರ್ಪಾಡಿಸಿಕೊಂಡ ಸಂಜೀವ್​ ಅವರಿಗೆ ಅಭಿನಂದನೆ ಎಂದಿದ್ದಾರೆ ಹಲವರು.

ಹೇಗಿದೆ ಈ ಐಡಿಯಾ? ಕೋಪ, ಬೇಜಾರು, ಅದು ಇದು ಎಲ್ಲ ಇದ್ದದ್ದೇ. ಒಮ್ಮೆ ಭಿನ್ನವಾಗಿ ಆಲೋಚಿಸುವುದನ್ನು ಕಲಿತರೆ ಎಲ್ಲವೂ ತಿಳಿಯಾಗಿ ಸುಂದರವಾದ ನೆನಪಾಗಿ ದಾಖಲಾಗುವುದಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:04 pm, Sat, 8 October 22

‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ