AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಲ್​ಭರ್ ಹಾಡಿಗೆ ರಸ್ತೆಯಲ್ಲಿ ಕುಣಿದ ಈ ಹುಡುಗಿ, ಜೊತೆಯಾದ ಆಟೊ ಡ್ರೈವರ್

Sushmita Sen : ಹೀಗೆ ಬೀದಿಯಲ್ಲಿ ಈ ಹುಡುಗಿ ನರ್ತಿಸಿದರೆ ಮಾತ್ರ ಇದು ವೈರಲ್ ಆಗುತ್ತಿರಲಿಲ್ಲ. ಜೊತೆಗೆ ನರ್ತಿಸಿರುವುದು ಆಟೋ ಡ್ರೈವರ್​ ಕೂಡ! ನೋಡಿ ಒಮ್ಮೆ ಈ ವಿಡಿಯೋ.

ದಿಲ್​ಭರ್ ಹಾಡಿಗೆ ರಸ್ತೆಯಲ್ಲಿ ಕುಣಿದ ಈ ಹುಡುಗಿ, ಜೊತೆಯಾದ ಆಟೊ ಡ್ರೈವರ್
Girl dances to Sushmita Sens Dilbar song on street auto rickshaw driver joins her
TV9 Web
| Updated By: ಶ್ರೀದೇವಿ ಕಳಸದ|

Updated on:Oct 08, 2022 | 11:09 AM

Share

Viral Video : ಈ ವಿಡಿಯೋ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು ಇದೀಗ ವೈರಲ್ ಆಗುತ್ತಿದೆ. ಈತನಕ 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 6,000 ಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಹಾಗಿದ್ದರೆ ಯಾವುದು ಈ ವಿಡಿಯೋ? ಸುಷ್ಮಿತಾ ಸೇನ್​ರ ದಿಲ್​ಭರ್ ಹಾಡಿಗೆ ಯುವತಿಯೊಬ್ಬಳು ನಡುರಸ್ತೆಯಲ್ಲಿ ನರ್ತಿಸಿದ ವಿಡಿಯೋ ಇದು. ಇಷ್ಟೇ ಆದರೆ ಇದು ವೈರಲ್ ಆಗುತ್ತಿರಲಿಲ್ಲ. ಅಲ್ಲಿರುವ ಆಟೋ ಡ್ರೈವರ್ ಕೂಡ ಈ ಹಾಡಿಗೆ ನರ್ತಿಸಿದ್ದಾನೆ. ಹಾಗಾಗಿ ನೆಟ್​ಮಂದಿ ಕುತೂಹಲದಿಂದ ನೋಡುತ್ತಿದ್ದಾರೆ.

ಹೀಗೆ ನರ್ತಿಸಿದ ಆಟೋ ಡ್ರೈವರ್​ನ ಆತ್ಮವಿಶ್ವಾಸವನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಬಹಳಷ್ಟು ಜನರಿಗೆ ಈ ವಿಡಿಯೋ ಉತ್ಸಾಹವನ್ನು ತುಂಬಿದೆ ‘ಆಹ್​ ಎಂಥ ಖುಷಿಯಾಯ್ತು ಈ ವಿಡಿಯೋ ನೋಡಿ’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಇದು ತಮಾಷೆ ಎನ್ನಿಸುತ್ತಿದೆ ನೋಡಲು’ ಎಂದಿದ್ದಾರೆ ಮತ್ತೊಬ್ಬರು. ‘ಹೀಗೆ ನರ್ತಿಸಲು ಧೈರ್ಯ ಬೇಕು. ನರ್ತಿಸಿ ನರ್ತಿಸಿ’ ಎಂದಿದ್ಧಾರೆ ಮಗದೊಬ್ಬರು.

ನೃತ್ಯ ಕೊಡುವ ಸ್ಪೂರ್ತಿ ಶಕ್ತಿ  ಮತ್ತು ಖುಷಿ ಬಹಳ ದೊಡ್ಡದು. ಒಮ್ಮೆ ಹುಕಿ ಹೊಕ್ಕಿತೋ ತಾವು ಎಲ್ಲಿದ್ದೇವೆ ಸುತ್ತಮುತ್ತ ಏನಿದೆ ಯಾರಿದ್ದಾರೆ ಎನ್ನುವುದನ್ನೂ ಮರೆತು ನರ್ತಿಸಬೇಕು ಎನ್ನಿಸುತ್ತದೆ ಕೆಲವರಿಗೆ. ಹೀಗೆ ಮನರಂಜನೆ ಒದಗಿದಾಗ ಜನರೂ ಹುರುಪುಗೊಳ್ಳುತ್ತಾರೆ.

ಈಗಿನ ದಿನಗಳಲ್ಲಿ ರಸ್ತೆಗಳಲ್ಲಿ ಕುಣಿಯುವುದೇ ಭೇಷ್ ಹೀಗೆ ಯಾರಾದರೂ ಸಾಥ್ ಕೊಡುತ್ತಾರೆ ಎಂಬ ಶೀರ್ಷಿಕೆ ಈ ವಿಡಿಯೋಗಿದೆ. ನಿಮಗೇನು ಅನ್ನಿಸುತ್ತೆ ಈ ಶೀರ್ಷಿಕೆ ಮತ್ತು ವಿಡಿಯೋ ನೋಡಿದಾಗ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:08 am, Sat, 8 October 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ