‘ಅಣ್ಣಾ, ನಿಮ್ಮ ಲ್ಯಾಪ್ಟಾಪ್ ಕದ್ದಿದ್ದಕ್ಕೆ ಕ್ಷಮಿಸಿ’ ಇಮೇಲ್ ಕಳಿಸಿದ ಕಳ್ಳ, ಅನುಕಂಪದ ಹೊಳೆ ಹರಿಸುತ್ತಿರುವ ನೆಟ್ಟಿಗರು
Laptop Thief : ಈ ವ್ಯಕ್ತಿಗೆ ಹೇಗೆ ಕಳ್ಳನೆಂದು ಹೇಳುವುದು? ಹೀಗೆ ಮೇಲ್ ಹಾಕಿದ್ದಾನೆಂದರೆ ಶಿಕ್ಷಣದ ಮಹತ್ವ, ಪ್ರಾಮಾಣಿಕತೆ, ತಿಳಿವಳಿಕೆ ಎಲ್ಲವೂ ಇದೆ ಎನ್ನುತ್ತಿದೆ ನೆಟ್ಮಂದಿ. ಲ್ಯಾಪ್ಟಾಪ್ ಮಾಲೀಕ ಕಳ್ಳನ ಒಳ್ಳೆಯತನದಿಂದ ಸಂದಿಗ್ಧಕ್ಕೆ ಬಿದ್ದಿದ್ದಾನೆ!

Viral : ನಿನ್ನೆ ಕಳ್ಳನೊಬ್ಬ ನನ್ನ ಲ್ಯಾಪ್ಟಾಪ್ ಕದ್ದಿದ್ದಾನೆ. ಅಲ್ಲದೆ, ನನ್ನ ಇಮೇಲ್ನಿಂದಲೇ ನನಗೆ ಮೇಲ್ ಕೂಡ ಕಳಿಸಿದ್ದಾನೆ. ಝ್ವೆಲ್ಲಿ ಥಿಕ್ಸೋ ಎಂಬ ಟ್ವಿಟರ್ ಖಾತೆದಾರರು, ಕಳ್ಳ ಕಳಿಸಿದ ಇಮೇಲ್ನ ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿದ್ದಾರೆ; ‘ಅಣ್ಣಾ, ನನಗೆ ಜೀವನ ಸಾಗಿಸಲು ಹಣದ ಅವಶ್ಯಕತೆ ಇದೆ. ಹಾಗಾಗಿ ನಿನ್ನೆ ನಿಮ್ಮ ಲ್ಯಾಪ್ಟಾಪ್ ಕದ್ದೆ. ಆದರೆ ನೀವು ಸಂಶೋಧನಾ ಪ್ರಸ್ತಾವನೆಯಲ್ಲಿ ತೊಡಗಿಕೊಂಡಿದ್ದರ ಪುರಾವೆ ಸಿಕ್ಕಿತು. ಆ ಫೈಲ್ ಅನ್ನು ಅಟ್ಯಾಚ್ ಮಾಡಿದ್ದೇನೆ ಮತ್ತು ಇದಕ್ಕೆ ಸಂಬಂಧಿಸಿದ ಯಾವುದಾದರೂ ಅತ್ಯವಶ್ಯಕವಾದ ಫೈಲ್ಗಳು ಬೇಕಿದ್ದರೆ ಸೋಮವಾರ 12 ಗಂಟೆಯೊಳಗೆ ತಿಳಿಸಿ. ಏಕೆಂದರೆ ಈ ಲ್ಯಾಪ್ಟಾಪ್ ಅನ್ನು ಯಾರಿಗೆ ಮಾರಬೇಕೆನ್ನುವುದು ಈಗಾಗಲೇ ನಿಗದಿಯಾಗಿ ಹೋಗಿದೆ. ಮತ್ತೊಮ್ಮೆ ಕ್ಷಮಿಸಿ ಅಣ್ಣಾ.’
They stole my laptop last night and they sent me an email using my email, I have mixed emotions now.? pic.twitter.com/pYt6TVbV1J
ಇದನ್ನೂ ಓದಿ— GOD GULUVA (@Zweli_Thixo) October 30, 2022
ನೆಟ್ಟಿಗರು ಈ ಕಳ್ಳನ ಬಗ್ಗೆ ಮರುಗಿ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಈ ಕಳ್ಳನಿಗೆ ಇದೇ ಲ್ಯಾಪ್ಟಾಪ್ ಅನ್ನೇ ಉಡುಗೊರೆಯಾಗಿ ಯಾಕೆ ನೀಡಬಾರದು? ಎಂದಿದ್ದಾರೆ ಒಬ್ಬರು. ದಯವಿಟ್ಟು ಈ ವ್ಯಕ್ತಿಗೆ ಯಾರಾದರೂ ಕೆಲಸ ನೀಡಲು ಸಾಧ್ಯವೇ? ಎಂದಿದ್ದಾರೆ ಮತ್ತೊಬ್ಬರು. ಇಷ್ಟೆಲ್ಲವನ್ನೂ ಪರಿಶೀಲಿಸಿದ್ದಾನೆ ಮತ್ತು ಶಿಕ್ಷಣದ ಮಹತ್ವದ ಅರಿವೂ ಇದೆ ಎಂದಮೇಲೆ ಅವನಲ್ಲಿ ಪ್ರಾಮಾಣಿಕತೆಯೂ ಇದೆ. ಇದು ನಿಜಕ್ಕೂ ಶ್ಲಾಘನೀಯ. ನಾನು ಇವನಿಗೆ ಲ್ಯಾಪ್ಟಾಪ್ನೊಂದಿಗೆ ಒಂದು ಕೆಲಸ ನೀಡಲು ತಯಾರು ಎಂದಿದ್ದಾರೆ ಇನ್ನೂ ಒಬ್ಬರು.
ಈ ವ್ಯಕ್ತಿಗೆ ಹಣದ ಅವಶ್ಯಕತೆ ಇದೆ. ಆದರೆ ಕೆಟ್ಟವರಲ್ಲ. ಸಂಶೋಧನೆಯ ಕಷ್ಟದ ಬಗ್ಗೆ ಅವರಿಗೆ ಅರಿವಿದೆ. ಪ್ರಾಮಾಣಿಕತೆ ಮತ್ತು ಬದ್ಧತೆ ಎರಡೂ ಇರುವ ವ್ಯಕ್ತಿ ಈತ. ನೈತಿಕತೆ ಕಳೆದುಕೊಂಡಿಲ್ಲ ಎಂದಿದ್ದಾರೆ ಮಗದೊಬ್ಬರು.
ಅಂತೂ ಈ ಪ್ರಕರಣದಿಂದ ಲ್ಯಾಪ್ಟಾಪ್ನ ಮಾಲೀಕರು ಸಂದಿಗ್ಧಕ್ಕೆ ಬಿದ್ದಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:28 am, Mon, 31 October 22