ಅಮಲಿನಲ್ಲಿ ಇದೇನೋ ಮಾಡಿಕೊಂಡೆಯೋ ‘ಆಧುನಿಕ ನಾಗೇಶ್ವರ’
Python : ಕುಡಿದ ಮತ್ತಿನಲ್ಲಿ ಹೆಬ್ಬಾವು ಹಾರದಂತೆಯೋ, ಹಗ್ಗದಂತೆಯೋ ಕಂಡಿರಬೇಕು. ಅಂತೂ ಕತ್ತಿಗೆ ಸುತ್ತಿಕೊಂಡಿದೆ. ಉಸಿರುಗಟ್ಟುತ್ತಿದ್ದಂತೆ ಒದ್ದಾಡತೊಡಗಿದ್ದಾನೆ. ಯಾವ ನಾಟಕದ ಪಾತ್ರವನ್ನು ಆವಾಹಿಸಿಕೊಂಡಿದ್ದನೋ ಏನೋ. ನೋಡಿ ವಿಡಿಯೋ.
Viral Video : ಜಾರ್ಖಂಡ್ನ ಗರ್ವಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪರಿಹಾರ ಪಂಚಾಯತ್ನ ಕಿಟಾಸೋಟಿ ಖುರ್ದ್ ಗ್ರಾಮದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕತ್ತಿಗೆ ಸುತ್ತಿಕೊಂಡಿದ್ದಾನೆ. ಈ ವ್ಯಕ್ತಿಯನ್ನು ಬಿರ್ಜಲಾಲ್ ರಾಮ್ ಭುಯಾನ್ ಎಂದು ಗುರುತಿಸಲಾಗಿದೆ. ಕುಡಿದ ನಶೆಯಲ್ಲಿ ಈ ಹಾವು ವಸ್ತ್ರದಂತೆ ಕಂಡಿದೆಯೋ, ಹಾರದಂತೆ ಕಂಡಿದೆಯೋ ಆ ನಾಗೇಶ್ವರನೇ ಬಲ್ಲ!
ಉಸಿರುಗಟ್ಟಿಸುವ ತನಕ ಈತ ಭ್ರಮೆಯಲ್ಲಿದ್ದನೇನೋ. ಇದು ತನ್ನ ಜೀವಕ್ಕೇ ಸಂಚಕಾರ ತರುವಂತಿದೆ ಎಂದು ಅರ್ಥವಾಗುತ್ತಿದ್ದಂಎ ಕತ್ತಿನಿಂದ ಹೆಬ್ಬಾವನ್ನು ಬಿಡಿಸಿಕೊಳ್ಳಲು ತಡಕಾಡಿದ್ದಾನೆ. ಆದರೆ ಹೇಳಿಕೇಳಿ ಹೆಬ್ಬಾವು! ಸುಮ್ಮನೆ ಬಿಟ್ಟುಹೋಗುವುದೇ? ಇವನ ಒದ್ದಾಟವನ್ನು ನೋಡಿದ, ಅಲ್ಲಿಯೇ ಇದ್ದ ಅವನ ಮಗ ಮತ್ತು ನೆರೆಹೊರೆಯವರು ಎಷ್ಟೋ ಹೊತ್ತಿನ ತನಕ ಹೆಬ್ಬಾವಿನ ಹಿಡಿತದಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಿರ್ಜಾಲಾಲ್ ಸಣ್ಣಪುಟ್ಟ ಗಾಯಕ್ಕೆ ಒಳಗಾಗಿದ್ಧಾನೆ. ಆದರೆ ಅವನ ಪ್ರಾಣ ಉಳಿಯಿತಲ್ಲ ಸದ್ಯ.
ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿ
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:56 am, Fri, 11 November 22