ಜರ್ಮನ್ ಕಾನ್ಸುಲೇಟ್ ಕಚೇರಿಯೊಳಗೆ ಕ್ರಿಕೆಟ್ ಆಡುತ್ತಿರುವ ಅಧಿಕಾರಿಗಳ ವಿಡಿಯೋ ವೈರಲ್
Cricket : ಜರ್ಮನ್ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಂದ ಕ್ರಿಕೆಟ್ ಕಲಿಯುತ್ತಿದ್ಧಾರೆ. ನೆಟ್ಟಿಗರು, ಆಡಿ ಸರ್ ನೀವು ಬಿಡಬೇಡಿ ಎಂದು ಇವರ ಆಟದ ಬಗ್ಗೆ ವಿಮರ್ಶೆ ಮಾಡುತ್ತ ಹುರಿದುಂಬಿಸುತ್ತಿದ್ದಾರೆ.
Viral Video : ನಿಮಗಿಷ್ಟವಾದ ಆಟ ಯಾವುದು ಎಂದು ಕೇಳಿದರೆ ಬಹುತೇಕ ಭಾರತೀಯರು ಹೇಳುವುದು ಕ್ರಿಕೆಟ್. ಎಂಥ ಸಂದರ್ಭದಲ್ಲಿಯೂ ಟೀವಿಯಲ್ಲಿ ಈ ಆಟವನ್ನು ವೀಕ್ಷಿಸದೇ ಇರರು. ಹಾಗೆಯೇ ಸಮಯ ಸಿಕ್ಕರೆ ಗಲ್ಲಿಯಲ್ಲಿ ಆಟವಾಡದೇ ಬಿಡರು. ಇದೀಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜರ್ಮನ್ ಕಾನ್ಸುಲೇಟ್ ಅಧಿಕಾರಿಯೊಬ್ಬರು; ‘ಊಟದ ಬಿಡುವಿನಲ್ಲಿ ನನ್ನ ಭಾರತೀಯ ಸಹೋದ್ಯೋಗಿಗಳು, ಜರ್ಮನ್ ಸಹೋದ್ಯೋಗಿಗಳಿಗೆ ಕ್ರಿಕೆಟ್ ಆಡುವುದು ಹೇಗೆ ಎಂದು ಕಲಿಸಲು ಯತ್ನಿಸುತ್ತಿದ್ದಾರೆ. ಕಾನ್ಸುಲೇಟ್ ಅದರ ಪಾಡಿಗೆ ಇನ್ನೂ ಇದೆ’ ಎಂದು ತಮಾಷೆಯ ವಿಡಿಯೋ ಟ್ವೀಟ್ ಮಾಡಿದ್ದಾರೆ.
During lunch break my Indian colleagues try to teach my German colleagues how to play #cricket Happy to report that the consulate is still intact ?? pic.twitter.com/6HmqWBjrAm
ಇದನ್ನೂ ಓದಿ— Achim Burkart (@GermanCG_BLR) November 22, 2022
ಈ ವಿಡಿಯೋದಲ್ಲಿ ಬೆಂಗಳೂರಿನ ಕೇರಳ ಮತ್ತು ಕರ್ನಾಟಕದ ಜರ್ಮನ್ ಕಾನ್ಸುಲೇಟ್ ಅಚಿಮ್ ಬುರ್ಕಾರ್ಟ್ ತಮ್ಮ ಭಾರತೀಯ ಸಹೋದ್ಯೋಗಳೊಂದಿಗೆ ಕಚೇರಿಯೊಳಗೆ ಕ್ರಿಕೆಟ್ ಆಟವಾಡಿದ್ದಾರೆ. ಅಚಿಮ್ ಈ ಆಟವನ್ನು ಉತ್ಸಾಹ ಮತ್ತು ಆನಂದದಿಂದ ಆಡಿದ್ದನ್ನು ಗಮನಿಸಬಹುದಾಗಿದೆ. 32,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ರೀಟ್ವೀಟ್ ಮಾಡಿದ್ದಾರೆ.
ಜರ್ಮನಿಯಲ್ಲಿಯೂ ಕ್ರಿಕೆಟ್ ಅನ್ನು ಶುರುಮಾಡುವುದು ಒಳ್ಳೆಯದು ಎನ್ನಿಸುತ್ತೆ ಎಂದಿದ್ದಾರೆ ಒಬ್ಬರು. ನೋಡಲು ಇದು ಬಹಳ ಅದ್ಭುತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಹೌದು ಇದು ಅದ್ಭುತವಾಗಿದೆ ಇಂಥ ಅಭ್ಯಾಸಗಳು ಇರಲಿ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮಗೆ ಏನನ್ನಿಸಿತು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ