6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು

Bike Riding : ಇಡಿ ಸಂಸಾರದೊಂದಿಗೆ ಹೀಗೆ ಪ್ರಯಾಣಿಸುತ್ತಿರುವ ಇವರು ಎಂಥ ಕಷ್ಟಸಮಯದಲ್ಲಿಯೂ ಸಾಕಿದ ನಾಯಿಗಳನ್ನು ಬಿಟ್ಟು ಹೊರಟಿಲ್ಲ ನೋಡಿ ಎಂದಿದ್ದಾರೆ ಒಬ್ಬರು.

6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು
A man driving a bike along with six passengers and two dogs
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 23, 2022 | 10:24 AM

Viral Video : ಇತ್ತೀಚೆಗಷ್ಟೇ ಒಬ್ಬ ಮನುಷ್ಯ 9 ಮಕ್ಕಳನ್ನು ಸೈಕಲ್​ ಮೇಲೆ ಕೂರಿಸಿಕೊಂಡು ಪ್ರಯಾಣಿಸಿದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. ಈಗ ಬೈಕ್​ ಮೇಲೆ ಈ ವ್ಯಕ್ತಿ ಆರು ಜನರನ್ನು ಮತ್ತು ಎರಡು ನಾಯಿಗಳೊಂದಿಗೆ ಪ್ರಯಾಣಿಸುತ್ತಿದ್ದಾನೆ. ನೆಟ್ಟಿಗರೆಲ್ಲ ಹುಬ್ಬೇರಿಸಿಕೊಂಡು ಈ ವಿಡಿಯೋ ನೋಡುತ್ತಿದ್ದಾರೆ. ಸುರಕ್ಷತೆಯ ಬಗ್ಗೆ ವ್ಯಾಕುಲರಾಗಿದ್ದಾರೆ.

@Gulzar_sahab ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಬೈಕ್​ ಓಡಿಸುವವನ ಹಿಂದೆ ಒಬ್ಬ ಮಹಿಳೆ ಉಳಿದಂತೆ ಮಕ್ಕಳು, ನಾಯಿಗಳು ಮತ್ತು ಚೀಲಗಳಿವೆ. ಎಷ್ಟೊಂದು ವೇಗವಾಗಿ ಗಾಡಿ ಓಡಿಸುತ್ತಿದ್ದಾನೆ ಅದೂ ಹೆಲ್ಮೆಟ್​ ಇಲ್ಲದೆ.

ಅಕಸ್ಮಾತ್ ಪೊಲೀಸರಿಗೆ ಸಿಕ್ಕಿಹಾಕಿಕೊಂಡರೆ ದಂಡ ಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದು ಈ ಫೋಟೋಗೆ ನೋಟ್​ ಬರೆಯಲಾಗಿದೆ. 2.5 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 10,500 ಜನರು ಇದನ್ನು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಡಿ ಸಂಸಾರದೊಂದಿಗೆ ಹೀಗೆ ಪ್ರಯಾಣಿಸುತ್ತಿರುವ ಇವರು ಎಂಥ ಕಷ್ಟಸಮಯದಲ್ಲಿಯೂ ಸಾಕಿದ ನಾಯಿಗಳನ್ನು ಬಿಟ್ಟು ಹೊರಟಿಲ್ಲ ನೋಡಿ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ನಾಯಕನಾಯಿ; ಹಿಮಪ್ರದೇಶದಲ್ಲಿ ಹಸುಗಳಿಗೆ ದಾರಿ ಮಾಡಿಕೊಡುತ್ತಿರುವ ನಾಯಿಯ ವಿಡಿಯೋ ವೈರಲ್

ಕೆಟ್ಟ ಸಿನೆಮಾಕ್ಕೆ ಹಣ ಹಾಕುವ ಮಂದಿಗೆ ಇದನ್ನು ತೋರಿಸಿ ಎಂದಿದ್ದಾರೆ. ಇದು ಮಾನವೀಯತೆಗೆ ಸಾಕ್ಷಿ. ಉಳ್ಳವರು ಕಾರಿನಲ್ಲಿ ನಾಯಿಗಳನ್ನು ಕರೆದಕೊಂಡು ಹೋಗುತ್ತಾರೆ. ಆದರೆ ಇವರು ಇಷ್ಟು ಕಷ್ಟದ ಸಂದರ್ಭದಲ್ಲಿಯೂ ತಮ್ಮ ಸಾಕುನಾಯಿಗಳನ್ನು ಕರೆದೊಯ್ಯುತ್ತಿದ್ದಾರೆ. ಶ್ರೇಷ್ಠ! ಎಂದಿದ್ದಾರೆ

ನೋಡಿ ಮೋದಿ ಆಡಳಿತದಲ್ಲಿ ಭಾರತದ ಸ್ಥಿತಿ ಎಂದಿದ್ದಾರೆ ಇನ್ನೂ ಒಬ್ಬರು. ಇವರು ಓಡಿಸುತ್ತಿರುವ ಈ ಗಾಡಿಯ ಬಾಳಿಕೆಯ ವಿಷಯವಾಗಿ ಕಂಪೆನಿಯ ತಯಾರಕರು ಜಾಹೀರಾತಿಗಾಗಿ ಈ ವಿಡಿಯೋ ಉಪಯೋಗಿಸಿಕೊಳ್ಳಬಹುದು ಎಂದಿದ್ಧಾರೆ ಮತ್ತೊಬ್ಬರು. ಇದು ಯಾವ ಊರಿನದು ಎಂದು ಕೇಳಿದ್ದಾರೆ ಮಗದೊಬ್ಬರು.

ನಿಮ್ಮ ಊರಿನಲ್ಲಿಯೂ ಇಂಥ ಪರಿಸ್ಥಿತಿ ಇದೆಯಾ? ಇಂಥ ಸಾಹಸಕ್ಕೆ ನಿಮ್ಮ ಊರಿನ ಜನರು ಮುಂದಾಗುತ್ತಾರಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:23 am, Wed, 23 November 22