Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಗಿನ್ನೀಸ್ ದಾಖಲೆ; ಜಗತ್ತಿನಲ್ಲೇ ಅತೀ ದೊಡ್ಡ ಪಾದಗಳನ್ನು ಹೊಂದಿರುವ ಮಹಿಳೆ

Guinness World Record : ತಾನ್ಯಾ ಹರ್ಬರ್ಟ್​ ಬಲಪಾದವು ಸುಮಾರು 33.1 ಸೆಂ.ಮೀ (13.3 ಇಂಚು), ಎಡಪಾದವು 32.5 ಸೆಂ.ಮೀ (12.79 ಇಂಚು. ಚಪ್ಪಲಿಯ ಅಳತೆ 18! ಈ ವಿಡಿಯೋದಲ್ಲಿ ಅವರ ಸಂದರ್ಶನ ನೋಡಬಹುದು.

ವಿಶ್ವ ಗಿನ್ನೀಸ್ ದಾಖಲೆ; ಜಗತ್ತಿನಲ್ಲೇ ಅತೀ ದೊಡ್ಡ ಪಾದಗಳನ್ನು ಹೊಂದಿರುವ ಮಹಿಳೆ
Texas Woman Holds Guinness Record for Worlds Largest Feet Her Shoe Size Will Shock You
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 18, 2022 | 11:42 AM

Viral : ಆಗಾಗ ಗಿನ್ನೀಸ್​ ದಾಖಲೆ ಬರೆದವರ ಬಗ್ಗೆ ಓದುತ್ತಿರುತ್ತೀರಿ. ಈ ಬಾರಿ ಅಮೆರಿಕದ ತಾನ್ಯಾ ಹರ್ಬರ್ಟ್ ಎನ್ನುವವರ ಬಗ್ಗೆ ನೀವು ಓದಬಹುದು. ಇವರು ತಮ್ಮ ಅತೀ ದೊಡ್ಡ ಪಾದಗಳಿಂದಾಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇವರ ಬಲಪಾದವು ಸುಮಾರು 33.1 ಸೆಂ.ಮೀ (13.3 ಇಂಚು), ಎಡಪಾದವರು 32.5 ಸೆಂ.ಮೀ (12.79 ಇಂಚು). ಇವರ ಚಪ್ಪಲಿಯ ಅಳತೆಯು 18. ಅಮೆರಿಕದಲ್ಲಿ ವಾಸಿಸುವ ಮಹಿಳೆಯರ ಎತ್ತರ ಸಾಮಾನ್ಯವಾಗಿ 6ರಿಂದ 9 ಅಡಿ. ಈಕೆ ರುಮೇಯ್ಸಾ ಗೆಲ್ಸಿಗಿಂತ ಮೂರು ಇಂಚು ಕಡಿಮೆ ಎತ್ತವನ್ನು ಹೊಂದಿದ್ದಾರೆ. ಇವರ ಎತ್ತರ 7.7 ಅಡಿ.

ಬೂಟು ಅಥವಾ ಚಪ್ಪಲಿಗಳಿಗಾಗಿ ಅಂಗಡಿಗಳನ್ನು ಹುಡುಕಾಡುವುದೇ ತನಗೆ ದೊಡ್ಡ ಕೆಲಸ ಎನ್ನುತ್ತಾರೆ ತಾನ್ಯಾ, ‘ಗಂಡಸರಿಗೆ ಸಾಮಾನ್ಯವಾಗಿ 16 ನಂಬರಿನ ಚಪ್ಪಲಿಗಳು ಲಭ್ಯ. ಆದರೆ ನನ್ನ ಚಪ್ಪಲಿಯ ಅಳತೆಯೇ 18. ಹೈಸ್ಕೂಲು ಓದುತ್ತಿದ್ದಾಗಲೇ ನನ್ನ ಪಾದಗಳು ಬಹಳ ಸಾಕಷ್ಟು ಉದ್ದವಿದ್ದವು. ನನ್ನ ಎತ್ತರದ ದೇಹದಿಂದಾಗಿ ನಾನು ಕುಗ್ಗುತ್ತಿದ್ದೆ. ಆದರೆ ನನ್ನ ಪೋಷಕರು ನನ್ನಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ತುಂಬುತ್ತ ಬೆಳೆಸಿದರು. ಬಹಳಷ್ಟು ಪ್ರೀತಿಸಿದರು. ನನ್ನ ಸ್ನೇಹಿತರೂ ನನ್ನ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದರು. ಆದರೂ ಪಠ್ಯೇತರ ಚಟುವಟಿಕೆಗಳಲ್ಲಿ ನನಗೆ ಅಷ್ಟೊಂದು ಆಸಕ್ತಿ ಇರುತ್ತಿರಲಿಲ್ಲ. ಹೀಗಾಗಿ ಕ್ರೀಡಾ ತರಬೇತುದಾರರು ಈ ಬಗ್ಗೆ ಬೇಸರಗೊಳ್ಳುತ್ತಿದ್ದರು. ಏಕೆಂದರೆ ನಾನು ಬಾಸ್ಕೆಟ್​ ಬಾಲ್​ನಲ್ಲಿ ಕೌಶಲ ಸಾಧಿಸಬೇಕೆಂದು ಅವರು ಇಚ್ಛಿಸಿದ್ದರು. ಆದರೆ ನಾನು ಮಾತ್ರ ಯಾವಾಗಲೂ ಶಿಕ್ಷಣದ ಕಡೆಯೇ ಹೆಚ್ಚು ಗಮನ ಕೊಡುತ್ತಿದ್ದೆ.’ ಎಂದಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ನಾನು ಯಾವಾಗಲೂ ಗಂಡಸರು ಧರಿಸುವ ಟೆನ್ನಿಸ್​ ಬೂಟುಗಳನ್ನೇ ಖರೀದಿಸುತ್ತೇನೆ. ಅವು ಹಾಳಾಗದಂತೆ ಕಾಪಾಡಿಕೊಳ್ಳುತ್ತೇನೆ. ಸಾಮಾನ್ಯವಾಗಿ 12 ಅಥವಾ 13 ಸೈಝಿನ ಚಪ್ಪಲಿಗಳಿಗಾಗಿ ಮಹಿಳೆಯರು ಹುಡುಕಾಟ ನಡೆಸಿರುತ್ತಾರೆ. ಆದರೆ ನಾನು 18 ನಂಬರಿನ ಚಪ್ಪಲಿಯನ್ನು ಹುಡುಕುತ್ತಿರುತ್ತೇನೆ’ ಎಂದಿದ್ಧಾರೆ.

ಗಂಡಸರ ಚಪ್ಪಲಿ ಬೂಟು ಹುಡುಕುವುದು ಸುಲಭ. ಆದರೆ ಹೆಣ್ಣುಮಕ್ಕಳ ಚಪ್ಪಲಿ ಹುಡುಕುವುದು ಅತೀ ದುಸ್ತರದ ಕೆಲಸ ಅದರಲ್ಲೂ ನನ್ನ ವಿಷಯವಾಗಿ ಎಂದಿದ್ದಾರೆ ಆಕೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!