ಕಿಡ್ನ್ಯಾಪರ್ ಬಂದಿದ್ದಾರೆ ಎಚ್ಚರ; ಸಿಂಹದಮರಿಯನ್ನು ಅಪಹರಿಸಿದ ಕೋತಿ

Kidnapping : ಸಿಂಹಗಳ ಅಪ್ಪ ಅಮ್ಮ ದಣಿದಿರಬೇಕು. ಮರಿಗಳನ್ನು ಕೋತಿಗಳು ಆಟವಾಡಿಸುತ್ತಿವೆ ಎಂದಿದ್ದಾರೆ ಒಬ್ಬರು. ಪ್ರಾಣಿಗಳ ಈ ಗುಣ ಮನುಷ್ಯರಲ್ಲಿ ಇಲ್ಲವಾಗಿ ಹೋಯಿತಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.

ಕಿಡ್ನ್ಯಾಪರ್ ಬಂದಿದ್ದಾರೆ ಎಚ್ಚರ; ಸಿಂಹದಮರಿಯನ್ನು ಅಪಹರಿಸಿದ ಕೋತಿ
Monkeys Kidnap Lion Cubs Remind Netizens Of Lion King
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 12, 2022 | 11:56 AM

Viral Video : ಈ ಕೋತಿಗಳಿಗೆ ಸಿಂಹಗಳ ಮೇಲೆ ಕೋಪ ಬಂದಿದೆಯೋ, ಅಥವಾ ಈ ಸಿಂಹದ ಮರಿಯ ಮೇಲೆ ಮುದ್ದು ಬಂದಿದೆಯೋ ಗೊತ್ತಿಲ್ಲ. ಅಂತೂ ಈ ಎರಡೂ ಮಂಗಗಳು ಈ ಮರಿಯನ್ನು ಎತ್ತಿಕೊಂಡು ಸರಸರನೇ ಮರ ಏರಿ ಕುಳಿತುಬಿಟ್ಟಿವೆ. ಯಾಕೆ ಹೀಗೆ ಮಾಡಿದವು ಎನ್ನುವುದನ್ನು ಯೋಚಿಸುತ್ತ ನೆಟ್ಟಿಗರು ತಲೆಯಿಂದ ಕೈಬರಳನ್ನೇ ತೆಗೆಯುತ್ತಿಲ್ಲ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ನೋಡಲು ತುಸು ವಿಚಿತ್ರವಾದ ವಿಡಿಯೋ ಇದು. ವೈರಲ್ ಆಗುತ್ತಿರುವ ಈ ವಿಡಿಯೋ ನೋಡುತ್ತಿರುವ ನೆಟ್ಟಿಗರು ಲಯನ್​ ಕಿಂಗ್​ ಸಿನೆಮಾದ ದೃಶ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ಮರಿ ಇದೆ ಎಂದಮೇಲೆ ಅದರ ಅಪ್ಪನೋ ಅಮ್ಮನ ಇರಬೇಕಲ್ಲ ಸುತ್ತಮುತ್ತಲೂ? ಅವುಗಳು ಕಾಣುತ್ತಿಲ್ಲ. ಹಾಗಿದ್ದರೆ ಹೇಗೆ ಎಲ್ಲಿಂದ ಹೀಗೆ ಹಾರಿಸಿಕೊಂಡು ಬಂದಿವೆ ಈ ಕೋತಿಗಳು? ಹೇಳಿಕೇಳಿ ಕೋತಿ, ಎಗರುವುದೇ ಜನ್ಮಸಿದ್ಧ ಹಕ್ಕು. ಎಗರುವುದನ್ನೇ ನೆಚ್ಚಿಕೊಂಡಿರುವವರಿಂದ ಸತ್ಯ ಕಂಡುಕೊಳ್ಳಲು ಸಾದ್ಯವೇ? ಇಷ್ಟೇ ಇಷ್ಟು ಸಣ್ಣ ಕ್ಲಿಪ್​ ಇದು. ಎಂಥಾ ಸಂದಿಗ್ಧಕ್ಕೆ ತಳ್ಳಿದೆಯಲ್ಲವೆ?

ಆದರೆ ನೆಟ್ಟಿಗರು ಮಾತ್ರ ಬಹಳ ಸೂಕ್ಷ್ಮವಾಗಿ ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಸಿಂಹಗಳ ಅಪ್ಪ ಅಮ್ಮ ದಣಿದಿರಬೇಕು. ಮರಿಗಳನ್ನು ಕೋತಿಗಳು ಆಟವಾಡಿಸುತ್ತಿವೆ ಎಂದಿದ್ದಾರೆ ಒಬ್ಬರು. ಪ್ರಾಣಿಗಳ ಈ ಗುಣ ಮನುಷ್ಯರಲ್ಲಿ ಇಲ್ಲವಾಗಿ ಹೋಯಿತಲ್ಲ ಎಂದು ಬೇಸರಿಸಿಕೊಂಡಿದ್ದಾರೆ ಇನ್ನೊಬ್ಬರು.

ಆದರೆ, ಎಷ್ಟು ಕಾಳಜಿಯಿಂದ ತಮ್ಮದೇ ಮರಿಯೆಂಬಂತೆ ಹಿಡಿದುಕೊಂಡು ಓಡಾಡುತ್ತಿವೆ ನೋಡಿ ಕೋತಿಗಳು.  ಮರಿಸಿಂಹವೂ ಸುಮ್ಮನೆ ತೆಕ್ಕೆಯೊಳಗೆ ಕುಳಿತಿದೆ.

ಏನನ್ನಿಸುತ್ತಿದೆ ಈ ವಿಡಿಯೋ ನೋಡಿದ ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ