ನಾನೂ ಡ್ಯಾನ್ಸ್ ಮಾಡಬೇಕು; ‘ಸೆಕ್ಯೂರಿಟಿ ಗಾರ್ಡ್’ ಚಿಯರ್ ಲೀಡರ್ಸ್ ಜೊತೆ ನರ್ತಿಸಿದ ವಿಡಿಯೋ ವೈರಲ್
Cheer Leaders : ಹೀಗಿವರು ಮಧ್ಯೆ ಪ್ರವೇಶಿಸಿದಾಗ ಚಿಯರ್ ಲೀಡರ್ಸ್ ಕೋಪದಿಂದ ಹೊರಹೋಗುವಂತೆ ಸೂಚಿಸಿದರು. ಆದರೆ ತಾನೂ ಡ್ಯಾನ್ಸ್ ಮಾಡಲೇಬೇಕು ಸೆಕ್ಯೂರಿಟಿ ಗಾರ್ಡ್ ಹಟ ಹಿಡಿದರು. ಮುಂದೇನಾಯಿತು ನೋಡಿ.
Viral Video : ಫುಟ್ಬಾಲ್ ಸ್ಟೇಡಿಯಂನಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬರು ಚಿಯರ್ ಲೀಡರ್ಗಳೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಚಿಯರ್ಲೀಡರ್ಗಳು ತಮ್ಮ ಪಾಡಿಗೆ ತಾವು ಡ್ಯಾನ್ಸ್ ಮಾಡುತ್ತಿದ್ದರು. ಕ್ರೀಡಾಪ್ರೇಮಿಗಳೆಲ್ಲ ಅದನ್ನು ಆಸ್ವಾದಿಸುತ್ತಿದ್ದರು. ಇದ್ದಕ್ಕಿದ್ದಂತೆ ಸೆಕ್ಯೂರಿಟಿ ಗಾರ್ಡ್ ಚಿಯರ್ ಲೀಡರುಗಳೆಡೆ ಹೋದರು. ಇದನ್ನು ನೋಡಿದ ಒಬ್ಬರು ಕೋಪದಿಂದ ಇವರನ್ನು ಹೊರಹೋಗುವಂತೆ ಸೂಚಿಸಿದರು. ಆದರೆ ತಾನೂ ಡ್ಯಾನ್ಸ್ ಮಾಡಲೇಬೇಕು ಎಂದು ಹಟ ಹಿಡಿದರು. ನಂತರ ಸೆಕ್ಯೂರಿಟಿ ಗಾರ್ಡ್ನ ನೃತ್ಯಕೌಶಲ ನೋಡಿ ಕ್ರೀಡಾಪ್ರೇಮಿಗಳೆಲ್ಲ ಹರ್ಷೋದ್ಗಾರದಲ್ಲಿ ಮುಳುಗಿದರು.
ಇದನ್ನೂ ಓದಿView this post on Instagram
ಈಗಾಗಲೇ ಈವಿಡಿಯೋ ಅನ್ನು 43 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 3.4 ಮಿಲಿಯನ್ ಜನ ಇಷ್ಟಪಟ್ಟಿದ್ದಾರೆ. ಟೆನ್ನೆಸ್ಸೀ ಡ್ಯಾನ್ಸ್ ಟೀಮ್ ಈ ಕ್ರೀಡಾಂಗಣದಲ್ಲಿ ನೃತ್ಯಪ್ರದರ್ಶನ ಕೊಡುತ್ತಿತ್ತು. ಮಧ್ಯೆ ಪ್ರವೇಶಿಸಿದ ಸೆಕ್ಯೂರಿಟಿ ಗಾರ್ಡ್ನ್ನು ನೋಡಿ ಆರಂಭದಲ್ಲಿ ಕಿರಿಕಿರಿಗೆ ಒಳಗಾದವರಂತೆ ತೋರುತ್ತಾರೆ ಚಿಯರ್ ಲೀಡರ್ಸ್. ಆದರೆ ಯಾವಾಗ ಈ ಸೆಕ್ಯೂರಿಟಿ ಗಾರ್ಡ್ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೋ ಆಗ ಎಲ್ಲರೂ ಅಚ್ಚರಿಯಿಂದ ನಗುತ್ತ ನರ್ತಿಸುತ್ತಾರೆ.
ಆದರೆ ಇದು ಪೂರ್ವನಿಯೋಜಿತವಾಗಿತ್ತು. ಇವರು ಸೆಕ್ಯೂರಿಟಿ ಗಾರ್ಡ್ನ ವೇಷ ತೊಟ್ಟಿದ್ದರಷ್ಟೇ. ಶಾಲಾದಿನಗಳಿಂದಲೇ ಇವರು ಚಿಯರ್ ಲೀಡರ್ ಆಗಿದ್ದರು. 20 ವರ್ಷಗಳ ಹಿಂದೆ ಈ ವೃತ್ತಿಯಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಹೀಗೆ ಸ್ಟೇಡಿಯಂನಲ್ಲಿ ಅಚಾನಕ್ಕಾಗಿ ಬಂದು ನರ್ತಿಸಿ ಅಚ್ಚರಿ ಮೂಡಿಸಲು ಇವರನ್ನು ಕೇಳಿಕೊಳ್ಳಲಾಗಿತ್ತು. ಇಷ್ಟು ವರ್ಷಗಳ ನಂತರ ಹೀಗೆ ಭಾಗವಹಿಸಿದ್ದು ಇವರಿಗೆ ಖುಷಿ ಕೊಟ್ಟಿತು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:18 pm, Fri, 18 November 22