ಯಾರಿದೀರಿ? ‘ಸಾಂಬಾರ್’ ಅಂತೂ ಬಂದಿದೆ, ಇಡ್ಲಿನೋ ವಡಾನೋ ಕೊಟ್ಬಿಡಿ
Sambar Deer : ಐಎಫ್‌ಎಸ್ ಅಧಿಕಾರಿ ಸಾಮ್ರಾಟ್, ‘ಕಾಡುಪ್ರಾಣಿಗಳು ಮನುಷ್ಯ ವಾಸಿಸುವಲ್ಲಿ ಓಡಾಡುತ್ತಿರುವುದನ್ನು ರೂಢಿಸಿಕೊಳ್ಳುತ್ತಿರುವುದು ಒಳ್ಳೆಯ ಲಕ್ಷಣವಲ್ಲ’ ಎಂದು ಎಚ್ಚರಿಸಿದ್ದಾರೆ.
Viral Video : ಸಾಂಬಾರ್ ಜಿಂಕೆಯೊಂದು ಚಹಾದ ಅಂಗಡಿಗೆ ಬಂದು ಏನಾದರೂ ತಿನ್ನಲು ಕೊಡಿ ಎಂದು ಕೇಳಿದೆ. ಚಹಾದ ಅಂಗಡಿಗೆ ಬಂದ ಮೇಲೆ ಚಹಾ ತಾನೇ ಕೊಡಬೇಕು ಅಂಗಡಿಯವರು? ಕಪ್ನಲ್ಲಿ ಕೊಡಲು ನೋಡಿದ್ದು ಚಹಾನೇ ಇರಬಹುದು. ಆದರೆ ಹೇಗೆ ಕುಡಿದೀತು? ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ಡಾ. ಸಾಮ್ರಾಟ್ ಗೌಡ ಟ್ವೀಟ್ ಮಾಡಿದ್ದಾರೆ.
If Sambar goes to local hotel what will they offer?? On a serious note wild animals getting used to human habitations is not a good sign… pic.twitter.com/zMJOuWYWIZ
ಇದನ್ನೂ ಓದಿ— Dr.Samrat Gowda IFS (@IfsSamrat) November 18, 2022
ಅಂಗಡಿಯೆದುರು ಹೋಗಿ ಅಲ್ಲಿ ತನಗೇನು ತಿನ್ನಲು ಸಿಗಬಹುದು ಎಂದು ನೋಡುತ್ತದೆ ಈ ಸಾಂಬಾರ ಜಿಂಕೆ. ಇತ್ತ ಬಂದರೆ ತಿನ್ನಲು ಕೊಡುವೆ ಎಂದು ಒಬ್ಬ ಅಜ್ಜ ಕರೆಯುತ್ತಾರೆ. ಬಹುಶಃ ಬನ್ ಕೊಟ್ಟಿರಬಹುದು. ಎಲ್ಲಿ ಸಾಲಬೇಕು? ರುಚಿಯಾಗಿದ್ದನ್ನು ಬಾಯಾಡಿಸಿದಾಗ ಮತ್ತಷ್ಟು ಬೇಕು ಎನ್ನಿಸುವುದು ಸಹಜ ಅಲ್ಲವೆ? ಹಾಗಂತ ಎಷ್ಟು ಕೊಡುತ್ತಾನೆ ಆ ಅಜ್ಜ? ಕೊನೆಗೆ ಅಲ್ಲಿದ್ದ ಗ್ರಾಹಕರು ಚಹಾ ಕೊಡಲು ನೋಡುತ್ತಾರೆ, ನಿರಾಕರಿಸುತ್ತದೆ.
ಐಎಫ್‌ಎಸ್ ಅಧಿಕಾರಿ ಸಾಮ್ರಾಟ್, ‘ಕಾಡುಪ್ರಾಣಿಗಳು ಮನುಷ್ಯನ ವಸತಿ ಪ್ರದೇಶಗಳಲ್ಲಿ ಓಡಾಡುವುದನ್ನು ರೂಢಿಸಿಕೊಳ್ಳುತ್ತಿರುವುದು ಒಳ್ಳೆಯ ಲಕ್ಷಣವಲ್ಲ’ ಎಂದು ಎಚ್ಚರಿಸಿದ್ದಾರೆ. 6,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅದಕ್ಕೆ ಸಾಂಬಾರ್ ವಡಾ ಬೇಕಂತೆ ಎಂದಿದ್ದಾರೆ ಒಬ್ಬರು. ಇಡ್ಲಿ ವಡಾ ಹುಡುಕಿಕೊಂಡು ಬಂದಿತ್ತೋ ಏನೋ ಎಂದಿದ್ದಾರೆ ಇನ್ನೂ ಒಬ್ಬರು. ಅದು ಹೇಗೂ ಸಾಂಬಾರು, ನೀವು ವಡಾ ಕೊಡಿ ಎಂದಿದ್ದಾರೆ ಇನ್ನೂ ಒಬ್ಬರು. ಹೀಗೆ ಪ್ರಾಣಿಗಳಿಗೆ ನಮ್ಮ ಆಹಾರವನ್ನು ಕೊಟ್ಟು ಪ್ರೋತ್ಸಾಹಿಸುವುದು ತಪ್ಪು ಎಂದಿದ್ದಾರೆ ಹಲವರು. ಪಾಪ ಎಷ್ಟು ಬೇಗ ಮನುಷ್ಯರನ್ನು ನಂಬುತ್ತವೆ ಈ ಮುಗ್ಧ ಪ್ರಾಣಿಗಳು ಎಂದಿದ್ದಾರೆ ಒಬ್ಬರು.
ನಿಮ್ಮ ಮನೆಯ ಬಳಿ ಹೀಗೆ ವನ್ಯಜೀವಿಗಳು ಬಂದರೆ ನೀವೇನು ಮಾಡುತ್ತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:00 pm, Fri, 18 November 22