ಈತನ ‘ಚಪ್ಪಾಳೆ’ ಕೌಶಲಕ್ಕೆ ಗಿನ್ನೀಸ್​ ವಿಶ್ವ ದಾಖಲೆ ಗೌರವ

Guinness World Record : 20ರ ಹರೆಯದ ಈ ಯುವಕ 1 ನಿಮಿಷದಲ್ಲಿ 1,140 ಚಪ್ಪಾಳೆ ಹೊಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಬಾಲ್ಯದಿಂದಲೇ ಚಪ್ಪಾಳೆಯ ಧ್ವನಿಗೆ ಆಕರ್ಷಿತರಾಗಿದ್ದರು. ಕ್ರಮೇಣ ಅದನ್ನೇ ಕೌಶಲವನ್ನಾಗಿಸಿಕೊಂಡರು.

ಈತನ ‘ಚಪ್ಪಾಳೆ’ ಕೌಶಲಕ್ಕೆ ಗಿನ್ನೀಸ್​ ವಿಶ್ವ ದಾಖಲೆ ಗೌರವ
Man Creates Guinness World Record For Fastest Clapping In One Minute
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 07, 2022 | 3:19 PM

Viral Video : ಇತ್ತೀಚೆಗಷ್ಟೇ ಜಗತ್ತಿನ ಅತೀ ಹಿರಿಯ ವೈದ್ಯರೊಬ್ಬರು ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಮತ್ತೊಬ್ಬರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅಮೆರಿಕದ ಡೆವನ್​ಪೋರ್ಟ್​ ಮೂಲದ ಡೆಲ್ಟನ್​ ಒಂದು ನಿಮಿಷದಲ್ಲಿ ಅತೀವೇಗವಾಗಿ ಚಪ್ಪಾಳೆ ತಟ್ಟುವ ಕೌಶಲದಿಂದ ಜಗತ್ತಿನ ಗಮನ ಸೆಳೆದಿದ್ದಾರೆ. 20 ವರ್ಷದ ಇವರು ಒಂದು ನಿಮಿಷದಲ್ಲಿ 1,140 ಸಲ ಚಪ್ಪಾಳೆ ತಟ್ಟಿದ್ದಾರೆ. ಸೆಕೆಂಡಿನ ಲೆಕ್ಕದಲ್ಲಾದರೆ, ಒಂದು ಸೆಕೆಂಡಿಗೆ 19 ಬಾರಿ ಚಪ್ಪಾಳೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಹಿಂದೆ ನಿರ್ಮಿಸಿದ್ದ ಇದೇ ಕೌಶಲದ ದಾಖಲೆಯನ್ನು 37 ಚಪ್ಪಾಳೆಗಳ ಅಂತರದಲ್ಲಿ ಮುರಿದಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ, 2022ರ ಮಾರ್ಚ್​ 12ರಂದು ಅಮೆರಿಕದ ಇಲಿನಾಯ್ಸ್​ನ ಜೆನೆಸಿಯೋದಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಡೆಲ್ಟನ್​ ಚಪ್ಪಾಳೆಗೆ ಮನಸೋತು ಇದನ್ನೇ ಕೌಶಲವನ್ನಾಗಿಸಿಕೊಂಡಿದ್ದರು.

‘ಶಾಲಾದಿನಗಳಲ್ಲಿ ಬಾರಿಸುತ್ತಿದ್ದ ಚಪ್ಪಾಳೆ ನನ್ನನ್ನು ಅತಿಯಾಗಿ ಸೆಳೆಯಿತು. ಹೀಗೇ ನನ್ನಷ್ಟಕ್ಕೆ ನಾನು ಚಪ್ಪಾಳೆ ಬಾರಿಸುತ್ತ ಅಭ್ಯಾಸ ಮಾಡಿದೆ. ಕ್ರಮೇಣ ಅದೊಂದು ಕಲೆಯಂತೆ ಭಾಸವಾಯಿತು. ಹೀಗೆ ನಾನು ಈ ಕಲೆಗೆ ಆಕರ್ಷಿತನಾದೆ. ಕ್ರಮೇಣ ಪರಿಣತಿ ಸಾಧಿಸತೊಡಗಿದೆ’ ಎಂದಿದ್ದಾರೆ ಡೆಲ್ಟನ್.

ಕಲೆ ಮತ್ತು ಪ್ರತಿಭೆಯ ಪ್ರಯಾಣ ಹೀಗಿರುತ್ತದೆ. ಅದು ಹೊರಗಿನಿಂದ ಬರುವಂಥದ್ದಲ್ಲ. ನಿಮ್ಮೊಳಗಿನಿಂದಲೇ ಒಸರುವಂಥದ್ದು. ಯಾವುದು ನಿಮ್ಮನ್ನು ಸೆಳೆಯುತ್ತದೆ ಎನ್ನುವುದು ನಿಮಗಷ್ಟೇ ಗೊತ್ತಿರಲು ಸಾಧ್ಯ. ಅದನ್ನು ಧ್ಯಾನಿಸಿದರೆ, ಪರಿಶ್ರಮ ಹಾಕಿದರೆ ಖಂಡಿತ ಅದು ಒಂದಿಲ್ಲಾ ಒಂದು ದಿನ ನಿಮ್ಮನ್ನು ಎಲ್ಲರೆದುರು ಹೀಗೆ ಎತ್ತರದಲ್ಲಿ ನಿಲ್ಲಿಸುತ್ತದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:16 pm, Mon, 7 November 22