‘ಅಮ್ಮಾ, ಅಪ್ಪಾ ನಿಮ್ಮ ಕಣ್ಣಲ್ಲಿ ಹೊಳಪು ತರಲು ನಾನು ಏನು ಬೇಕಾದರೂ ಮಾಡಬಲ್ಲೆ’
Parents Love : ‘ನಾನು ಚೆನ್ನಾಗಿ ಓದಬೇಕೆಂದು ಅವರು ಇಷ್ಟು ದಿನ ಪಟ್ಟ ಶ್ರಮ, ತ್ಯಾಗ, ಖುಷಿ ಮತ್ತೀಗ ಈ ಅಗಲುವಿಕೆಯನ್ನು ಅವರ ಕಣ್ಣುಗಳು ಸೂಚಿಸುತ್ತಿದ್ದವು’ ಈ ವಿಡಿಯೋ 7 ಮಿಲಿಯನ್ ನೆಟ್ಟಿಗರ ಹೃದಯವನ್ನು ಆರ್ದ್ರಗೊಳಿಸಿದೆ.
Viral Video : ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡಾಗ ಮತ್ತದು ನನಸಾಗುವ ಹಾದಿಯಲ್ಲಿ ಸಾಗುತ್ತಿರುವಾಗ ಕಣ್ಣು ತುಂಬುತ್ತವೆ. ಈ ಕಣ್ಣು ತುಂಬುವಿಕೆಯಲ್ಲಿ ವಿವರಿಸಲಾಗದ ಅನೇಕ ಸಂಗತಿಗಳು ಅಡಗಿಕೊಂಡಿರುತ್ತವೆ. ಕಣ್ಣು ಉಕ್ಕುವುದೆಂದರೆ ಏನು? ಮಾತಿಗೆ ಸಿಗದ ಭಾವವೇ ಅಲ್ಲವೆ. ಈಗಿಲ್ಲಿ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ದಂಪತಿ ತಮ್ಮ ಮಗಳನ್ನು ಕಾಲೇಜಿಗೆ ಬಿಟ್ಟು ಬರಲು ಹೋಗಿದ್ದಾರೆ. ಮೊದಲ ದಿನ ಅವಳೊಂದಿಗೆ ಕ್ಯಾಂಪಸ್ ಅನ್ನು ಸುತ್ತಿದ್ದಾರೆ. ಆಗ ಆಕೆ ಮಾಡಿದ ವಿಡಿಯೋ ಇದಾಗಿದೆ.
ಇದನ್ನೂ ಓದಿView this post on Instagram
‘ದೆಹಲಿಯ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಮೊದಲ ದಿನ ನಾನು ನನ್ನ ಅಮ್ಮ ಅಪ್ಪ ಕಾಲಿಟ್ಟೆವು. ಕ್ಯಾಂಪಸ್ ಸುತ್ತಾಡುವಾಗ ನನ್ನ ತಂದೆ ಭಾವುಕರಾದರು. ಇಷ್ಟುದಿನ ಅವರೊಟ್ಟಿಗೆ ಇದ್ದು ಬೆಳೆದ ನಾನು ಈಗ ಅವರಿಂದ ದೂರ ಇದ್ದು ಓದಬೇಕಲ್ಲ ಎಂಬ ಕಹಿ ಸತ್ಯವನ್ನು ಮತ್ತು ಈ ಕಾಲೇಜಿನಲ್ಲಿ ಸೀಟು ಸಿಕ್ಕಿದ ಖುಷಿಯನ್ನು ಅವರ ಮುಖದಲ್ಲಿ ಒಟ್ಟೊಟ್ಟಿಗೆ ಕಾಣಬಹುದಾಗಿತ್ತು. ನಾನು ಚೆನ್ನಾಗಿ ಓದಬೇಕೆಂದು ಅವರು ಇಷ್ಟು ದಿನ ಪಟ್ಟ ಶ್ರಮ, ತ್ಯಾಗ ಎಲ್ಲವನ್ನೂ ಅವರ ಕಣ್ಣೀರು ಸೂಚಿಸುತ್ತಿತ್ತು. ಅಪ್ಪಾ, ನಿನ್ನ ಮುಖದಲ್ಲಿ ನಗು, ಕಣ್ಣಲ್ಲಿ ಹೊಳಪು ಕಾಣಲು ನಾನು ಏನು ಬೇಕಾದರೂ ಮಾಡಬಲ್ಲೆ. ಧನ್ಯವಾದಗಳು ಅಮ್ಮಾ ಅಪ್ಪಾ, ನಿಮ್ಮನ್ನು ಬಹಳ ಪ್ರೀತಿಸುತ್ತೇನೆ’ ಎಂದು ಈ ಅಪ್ಪ ಅಮ್ಮನ ಮುದ್ದಿನ ಮಗಳು ಪ್ರೇಕ್ಷಾ ನೋಟ್ ಬರೆದು ವಿಡಿಯೋ ಅಪ್ಲೋಡ್ ಮಾಡಿದ್ದಾಳೆ.
ಸ್ವಾಗತ ಪ್ರೇಕ್ಷಾ ಈ ಅದ್ಭುತವಾದ ಕಾಲೇಜಿಗೆ. ನಿನಗೆ ಏನೇ ಸಹಾಯ ಬೇಕೆಂದರೂ ಮೆಸೇಜ್ ಮಾಡು ನಾನು ನಿನ್ನ ಸೀನಿಯರ್ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅಭಿನಂದನೆ! ಇಂಟರ್ನೆಟ್ನಲ್ಲಿ ಇಂದು ನಾ ನೋಡಿದ ಬೆಸ್ಟ್ ವಿಡಿಯೋ ಇದು ಎಂದು ಇನ್ನೊಬ್ಬರು ಹೇಳಿದ್ಧಾರೆ. ಈ ವಿಡಿಯೋ ನನ್ನನ್ನು ನಿಜಕ್ಕೂ ಭಾವುಕಳನ್ನಾಗಿಸಿದೆ ಜೊತೆಗೆ ಸಂತೋಷವನ್ನೂ ಉಕ್ಕಿಸುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮ ತ್ಯಾಗಕ್ಕೆ ತಕ್ಕಂಥ ಫಲವನ್ನು ಈ ಕಾಲೇಜು ನಿಮಗೆ ಕೊಡುತ್ತದೆ, ಸ್ವಾಗತ! ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದಾಗ ನಿಮಗೇನು ಅನ್ನಿಸಿತು?
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ
Published On - 12:31 pm, Mon, 7 November 22