ಮಂಡೇ ಬ್ಲ್ಯೂಸ್ನಿಂದ ಹೊರಬರೋಕೆ ನೀವೆಲ್ಲಾ ಏನು ಮಾಡ್ತೀರಿ?; ಈ ಬೆಕ್ಕಣ್ಣನ ಐಡಿಯಾ ನೋಡಿ
Monday Blues : ಅದರಲ್ಲಿ ಆನಂದವಿದೆ ಎಂದಾಗಲೇ ಮತ್ತೆ ಅದಕ್ಕೇ ತೆರೆದುಕೊಳ್ಳುವುದು. ಈ ಬೆಕ್ಕಿಗೂ ಹಾಗೇ ಆಗಿರಬೇಕು. ಸಿಮೆಂಟು ಗಚ್ಚನ್ನೇ ಜಾರುಬಂಡಿಯಾಗಿಸಿಕೊಂಡಿದೆ. ಮಂಡೇ ಬ್ಲ್ಯೂಸ್ಗೆ ನಿಮಗೂ ಇದೊಳ್ಳೆ ಉಪಾಯ ಆಗಬಹುದಲ್ಲವೆ?
Viral Video : ವಾರಾಂತ್ಯದಲ್ಲಿ ಮೈಮನಸಿನ ದಣಿವಾರಿಸಿಕೊಂಡು ಉಸಿರು ಬಿಟ್ಟಿರುತ್ತೀರಿ. ಆದರೆ ಮತ್ತೆ ಬರುವ ಸೋಮವಾರ ಇದೆಯಲ್ಲ, ಮುಂದಿನವಾರಕ್ಕೆ ಗಾಣದೆತ್ತಾಗಬೇಕಲ್ಲಾ ಆ ಒಂದಿಷ್ಟು ತಾಸುಗಳು ಮಾತ್ರ ಹೃದಯವನ್ನೇ ಹಿಂಡಿ ಹಿಂಡಿ ಹಿಪ್ಪೆಯಾಗಿಸಿಬಿಡುತ್ತವೆ. ಆಗ ನೀವೇನು ಮಾಡುತ್ತೀರಿ? ಅಂದರೆ ಈ ಮಂಡೇ ಬ್ಲ್ಯೂಸ್ನಿಂದ ಹೊರಬರೋದಕ್ಕೆ? ಈ ವಿಡಿಯೋ ನೋಡಿ ಹೀಗೊಂದು ಐಡಿಯಾ ಇದೆ.
Cat slide.. ? pic.twitter.com/5uaULGvxyG
— Buitengebieden (@buitengebieden) November 3, 2022
ಆಗಾಗ ಟ್ವಿಟರ್ನ ಈ ಖಾತೆಯಲ್ಲಿ ಇಂಥ ಮುದ್ದಾದ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ಚಳಿಯಲ್ಲಿ ಹಳೆಯ ಸಿಮೆಂಟ್ ಗಚ್ಚಿನ ಮೇಲೆ ಬಿಸಿಲಿಗೆ ಮೈಯೊಡ್ಡಿ ಜರ್ ಅಂತ ಜಾರುಬಂಡಿ ಆಡುವ ಈ ಬೆಕ್ಕನ್ನು ನೋಡುತ್ತಿದ್ದರೆ ನಿಮಗೂ ಒಂದೆರಡು ಸಲ ಹೀಗೆ ಜಾರಬೇಕು ಅನ್ನಿಸುತ್ತದಲ್ಲ?
ನವೆಂಬರ್ 4ರಂದು ಟ್ವೀಟ್ ಮಾಡಲಾದ ಈ ವಿಡಿಯೋ ನೋಡಿ ಅನೇಕರು ಪ್ರತಿಕ್ರಿಯಿಸಿದ್ದಾರೆ. 7.4 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 61,500 ಜನರು ಈ ವಿಡಿಯೋ ರೀಟ್ವೀಟ್ ಮಾಡಿದ್ಧಾರೆ.
ನೋಡಿ ಜಗತ್ತಿನಾದ್ಯಂತ ಎಷ್ಟೊಂದು ಬೆಕ್ಕುಪ್ರಿಯರಿದ್ದಾರೆ, ಈಗಾಗಲೇ 7 ಮಿಲಿಯನ್ ಜನರು ಇದನ್ನು ಇಷ್ಟಪಟ್ಟಿದ್ದಾರೆ ಎಂದಿದ್ದಾರೆ ಒಬ್ಬರು. ಈ ಒಂದು ವಿಡಿಯೋಗೆ ಅರ್ಧಲಕ್ಷದಷ್ಟು ಜನ ಟ್ವೀಟ್ ಮಾಡಿ ಬೇರೆಬೇರೆ ಬೆಕ್ಕಿನ ವಿಡಿಯೋಗಳನ್ನು ಹಾಕಿದ್ದಾರಲ್ಲ, ಇದನ್ನು ನೋಡಿಯೇ ನನಗೆ ಮನಸ್ಸು ತುಂಬಿತು. ಇದಕ್ಕಿಂತ ಉಲ್ಲಾಸ ಇನ್ನೇನಿದೆ ಬದುಕಲ್ಲಿ? ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಮೈ ತುರಿಸುತ್ತಿದೆಯಾ? ನೋಡಿ ಈ ಬೆಕ್ಕಿನ ಉಪಾಯ, ಯಾರನ್ನೂ ಕೇಳಿಕೊಳ್ಳಬೇಕಿಲ್ಲ ಮೈ ಉಜ್ಜಿ ಎಂದು… ಮಗದೊಬ್ಬರು ಹೇಳಿದ್ದಾರೆ.
ನಿಮಗೇನು ಅನ್ನಿಸುತ್ತದೆ ಈ ವಿಡಿಯೋ ನೋಡಿ. ಈ ಚಳಿಗಾಲದಲ್ಲಿ ಮೆಲ್ಲ ಹೋಗಿ ಒಮ್ಮೆ ಮಗುವಿನಂತೆ ನೀವು ಜಾರುಬಂಡಿಯಾಡಿಬಿಡಿ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:37 am, Mon, 7 November 22